ಗಜಲ್
ಪ್ರೇಮದ ಹಣತೆಯನು ಹಚ್ಹೋಣ ಗೆಳತಿ
ಒಲವಿನ ಗುಡಿಯನು ಕಟ್ಟೋಣ ಗೆಳತಿ
ಮಧುಮಾಸ ಬಂದಿಹುದು ನಮಗಾಗಿ ನೋಡು
ತನಿರಸವ ಸವಿಯುತ್ತಾ ನಲಿಯೋಣ ಗೆಳತಿ
ಬೆಳದಿಂಗಳು ಹರಡಿಹುದು ನಮಗಾಗಿಯಲ್ಲವೇ
ಒಲವ ಜೇನಿನ ಹೊಳೆಯಲ್ಲಿ ಮುಳುಗೋಣ ಗೆಳತಿ
ಚಂದ್ರ ತಾರೆಯರು ಆಡುತ್ತಿವೆ ಬಾನಲ್ಲಿ
ನಾವಿಬ್ಬರು ಒಂದಾಗಿ ಕುಣಿಯೋಣ ಗೆಳತಿ
ಪ್ರೀತಿಯಿದ್ದರೆ ಬಾಳು ನಂದನವನವಲ್ಲವೇ ಪಂಕಜಾ
ಅನುದಿನವೂ ಒಂದಾಗಿ ಬಾಳೋಣ ಗೆಳತಿ
ಪಂಕಜಾ.ಕೆ
Comments
Post a Comment