ಬೇಡರ ಕಣ್ಣಪ್ಪ
ಬೇಟೆಯ ಆಡುತ
ದಿನವನು ಕಳೆಯುವ
ಬೇಡರ ನಾಯಕ
ಮುಗ್ಧ ಭಕ್ತಿಯ ತರುಣ
ಒಲಿಸಿದ ಭಕ್ತಿಯಲಿ ಶಿವನ
ಕಣ್ಣನೇ ಅರ್ಪಿಸಿದ ಭಕ್ತ
ನಿತ್ಯವೂ ಶಿವನನು ಪೂಜಿಸಲೆಂದು
ತಾನೇ ಮುಡಿದ ಹೂಗಳ ಅರ್ಪಿಸಿ
ಭಕ್ತಿಯಲಿ ಪೂಜೆಯ ಗೈಯುವನು
ಮಾಂಸವ ಬೇಯಿಸಿ
ರುಚಿಯನು ನೋಡಿ
ಶಿವನಿಗೆ ಅರ್ಪಿಸುತ ಮೈ ಮರೆತ
ಬಾಯಲಿ ನೀರನು
ತುಂಬಿಸಿ ಹಾಕುತ
ಶಿವನಿಗೆ ಅಭಿಷೇಕವ ಮಾಡುತ್ತಿದ್ದ
ಭಕ್ತನ ಭಕ್ತಿಯು
ಜಗಕೆ ತಿಳಿಸಲು
ಕಣ್ಣಲಿ ರಕ್ತವ ಹರಿಸಿದ ಶಿವ
ರಕ್ತವು ಕಂಡು
ಚಿಂತೆಯೂ ಹೆಚ್ಚಿ
ತನ್ನಯ ಕಣ್ಣನೇ ಕಿತ್ತು ಶಿವನಿಗರ್ಪಿಸಿದ
ಭಕ್ತನ ಭಕ್ತಿಗೆ
ಮೆಚ್ಚಿದ ಶಿವನು
ಕಣ್ಣನು ಕೊಟ್ಟು ಹರಸಿದನು
ಬೇಡರ ಕಣ್ಣಪ್ಪ
ಎನ್ನುವ ನಾಮವು
ಸ್ಥಿರವಾಯಿತವಗೆ ಕೇಳೆಂದ
ಪಂಕಜಾ. ಕೆ
Comments
Post a Comment