ಕವನ ಸ್ಪರ್ಧೆ
ವಿಷಯ ನನ್ನ ಮನದಲ್ಲಿ ಮಿಂಚುವ ನಿಲುಕದ ನಕ್ಷತ್ರ ನೀನು
ನಿಲುಕದ ನಕ್ಷತ್ರ
ಚೆಂದುಳ್ಳಿ ಚೆಲುವೆ
ಹಾಲ್ಬಣ್ಣ ಮೈಯವಳೇ
ನನ್ನೆದೆಯ ಬಾಂದಳದಿ
ಮಿಂಚಾಗಿ ಬಂದೊಳೆ
ಮನಸಲ್ಲು ಕನಸಲ್ಲೂ
ನೀನಿರುವೆ ಚೆಲುವೆ
ನನ್ನೊಲವೇ ನಿನಗಾಗಿ
ನಾ ಹಂಬಲಿಸುತಿರುವೆ
ನನ್ನ ಮನದಲ್ಲಿ ಮಿಂಚುವ
ನಿಲುಕದ ನಕ್ಷತ್ರ ನೀನು
ತಿಳಿದರೂ ಬಿಡಲಾರೆ
ನಿನ್ನ ಮೇಲಿನಈ ಮೋಹವನು
ಕನಸಲ್ಲಿ ಬಂದು ಕಾಡುವವಳೇ
ಮನದಲ್ಲಿ ನೀನೇ ತುಂಬಿರುವೆ
ನನ್ನೊಲವೆಲ್ಲಾ ನಿನಗಾಗಿದೆ
ಓ ನನ್ನ ಮನಕದ್ದ ವೈಯಾರಿಯೇ
ಮೈ ಮರೆಸಿತು ನಿನ್ನ ಪ್ರೀತಿಯ ಪಾಶ
ಹೃದಯದ ತುಂಬೆಲ್ಲ ಹರಿಸಿತು ಒಲವರಸ
ಕೈಚಾಚಿ ಕೊಡಲೇನು ಬಾ ನನ್ನ ಹುಡುಗಿ
ಬಂದೊಮ್ಮೆ ಮೈ ಮರೆಸು ಓ ನನ್ನ ಪ್ರಿಯೆ
ಪಂಕಜಾ.ಕೆ
Comments
Post a Comment