Skip to main content

ಕೃತಘ್ನ ಕಥೆ

ಬೋರ್ಗರೆಯುವ ಕಡಲ ದಂಡೆಯಲ್ಲಿ ಕುಳಿತು  ಹಾರಿ ಬರುತ್ತಿರುವ ಅಲೆಗಳನ್ನು ನೋಡುತ್ತಾ ಅದರ ಏಳು ಬೀಳುಗಳನ್ನು  ಕಣ್ಣು ತುಂಬಿಕೊಳ್ಳುತ್ತಿದ್ದರೂ ಸಂಕಷ್ಟಿಯ ಮನಸ್ಸು ಬೆಳಗ್ಗಿನ ಘಟನೆಯನ್ನೇ ಪದೇ ಪದೇ  ನೆನಪು ಮಾಡುತ್ತಾ ದುಃಖಿಸುತ್ತಿತ್ತು . ಆ ಘಟನೆ ಮನಸಿನ ಪಟಲದಲ್ಲಿ ಬಂದ ಕೂಡಲೇ ಸಂಕಷ್ಟಿಯ ಸುಂದರ ಕಣ್ಣುಗಳು ಕೊಳಗಳಾದವು ದುಃಖವನ್ನು ಹತ್ತಿಕ್ಕಲು ಆಗದೆ ಆಕೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭ ಮಾಡಿದಳು
             ಸಂಕಷ್ಟಿ ಅಲ್ಲಿ ಕುಳಿತ  ಕ್ಷಣ ದಿಂದಲೂ ಅವಳನ್ನು ಗಮನಿಸುತ್ತಿದ್ದ ಸೂರಜ್ ಅವಳು ಅಳುವುದನ್ನು ಕಂಡು ಏನಾಗಿರಬಹುದು ಪಾಪ ಆಗಿನಿಂದ ಒಂಟಿಯಾಗಿ ಕುಳಿತು ದುಃಖಿಸುತ್ತಿದ್ದಾಳೆ  ಎಂದು ಆಲೋಚಿಸುತ್ತ ಅವಳನ್ನೇ ನೋಡುತ್ತಿದ್ದನು .ಸಂಕಷ್ಟಿ ಅಳುವುದು ನೋಡಿ ಒಂದಿಬ್ಬರು ಪಡ್ಡೆ ಹುಡುಗರು  ಅವಳನ್ನೇ ನೋಡುತ್ತಾ ತಿರುಗಾಡುವುದು ಕಂಡು ಇನ್ನು ತಡಮಾಡಿದರೆ ಅನಾಹುತವಾದೀತು ಎಂದು ತಿಳಿದ ಸೂರಜ್ ಅವಳ ಸಮೀಪಕ್ಕೆ ಬರುತ್ತಾನೆ.ಸೂರಜ್ ಬರುವುದು ಕಂಡು ಪಡ್ಡೆ ಹುಡುಗರ ದಂಡು ಕಣ್ಮರೆಯಾಗುತ್ತದೆ.ಸಂಕಷ್ಟಿ ಇದು ಯಾವದನ್ನು  ಗಮನಿಸದೆ ಕಣ್ಣಿಗೆ ಕೈ ಹಚ್ಚಿ ಅಳುತ್ತಲೇ ಇರುವುದು ಕಂಡು ಸೂರಜ್ ನಿಧಾನವಾಗಿ ಆಕೆಯನ್ನು ಕರೆದ .ಆತನ ಕರೆ  ಕೇಳಿ ಬೆಚ್ಚಿ ಕಣ್ಣು ಬಿಟ್ಟ ಸಂಕಷ್ಟಿಗೆ ತನ್ನ ಮೇಲಧಿಕಾರಿಯನ್ನು ಕಂಡು ಗಾಬರಿಯಾಯಿತು .ಆಕೆ ಕೂಡಲೇ ಎದ್ದು ಸರ್ ನೀವಿಲ್ಲಿ ಎಂದು ನಗುವ ಪ್ರಯತ್ನ  ಮಾಡಿದಳು.
             ಸೂರಜ್ ಅವಳನ್ನು ಕುಳಿತುಕೊಳ್ಳಲು ಹೇಳಿ ತಾನು ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತು ಆಕೆಯನ್ನೇ ನೋಡುತ್ತಾ ಮೇಡಂ   ನೀವೇನೋ ತುಂಬಾ ಬೇಸರದಲ್ಲಿ ಇರುವಂತೆ ಕಾಣುತ್ತಿದೆ.,ನನ್ನಲ್ಲಿ ಹೇಳಬಹುದಾದರೆ ಹೇಳಿಕೊಳ್ಳಿ ಆತ್ಮೀಯರಲ್ಲಿ ದುಃಖವನ್ನು ಹಂಚಿದರೆ ಅದು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ನೀವು ನನ್ನನ್ನು ನಂಬಬಹುದು ನಿಮ್ಮ ವಿಷಯವನ್ನು ನಾನು ಯಾರಲ್ಲೂ ಹೇಳುವುದಿಲ್ಲ ದಯವಿಟ್ಟು ನಿಮ್ಮ ಬೇಸರ ಚಿಂತೆಯನ್ನು ನನ್ನೊಡನೆ ಹಂಚಿಕೊಳ್ಳಿ ಎಂದು ಹೇಳುತ್ತಾನೆ.
                ಸಂಕಷ್ಟಿಗೆ ಹೇಳಲೊ ಬೇಡವೋ ಎನ್ನುವ ಸಂದಿಗ್ಧ .ಸೂರಜ್ ನೇನೋ ಒಳ್ಳೆಯವನೆ ಆದರೆ ಇತ್ತೀಚೆಗೆ ತಾನೇ ಸೇರಿದ ಆತನಲ್ಲಿ ತನ್ನ ನೋವನ್ನು ಹಂಚಿಕೊಳ್ಳುವುದು ಸರಿಯೇ ಎಂದು ಆಕೆ ಚಿಂತಿಸುತ್ತಾಳೆ .ಅವಳ ಮನಸ್ಥಿತಿ ಅರಿತ ಸೂರಜ್ ಒತ್ತಾಯಿಸದೆ ಬನ್ನಿ ನಿಮ್ಮ ನೋವನ್ನು ಇನ್ನೊಮ್ಮೆ ಹೇಳುವಿರಂತೆ ಈಗ ಕತ್ತಲಾಯಿತು ನಾವಿನ್ನೂ ಹೊರಡೋಣ  ನಿಮ್ಮ ಮನೆಯಲ್ಲೂ ಗಾಬರಿ ಯಾದಾರು ಎಂದ ತಕ್ಷಣ ಆಕೆ ಎದ್ದು ನಿಂತು ಹೊರಡಲು ಅನುವಾದಳು .ಸೂರ್ಯನು ಅದೀಗ ತಾನೇ  ಪಶ್ಚಿಮದ ಶರಧಿಯಲ್ಲಿ ಮುಳುಗಿ ಕತ್ತಲಾವರಿಸುತ್ತಿತ್ತು. ಆಕೆ ಅವಸರದಿಂದ  ಹೊರಟಾಗ ಸೂರಜ್ ಅವಳ ಜತೆಯೇ ಹೆಜ್ಜೆ ಹಾಕಿ  ಬನ್ನಿ ನಿಮ್ಮನ್ನು ಮನೆ  ತಲಪಿಸುತ್ತೇನೆ ಈ ಕತ್ತಲಲ್ಲಿ ನೀವು ಒಬ್ಬರೇ ಹೋಗುವುದು ಸರಿಯಲ್ಲ ಎಂದು ಹೇಳುತ್ತಾನೆ. ಆಕೆ ನಿರಾಕರಿಸಲಾಗದೆ ಅವನ ಜತೆ ಕಾರಿನಲ್ಲಿ ಕುಳಿತು  ಕೊಳ್ಳುತ್ತಾಳೆ ಸೂರಜ್ ಅವಳ ಮನೆ ವಿಳಾಸವನ್ನು ಕೇಳಿ ಅವಳನ್ನು ಮನೆಯ ಸಮೀಪ ಕರೆದುಕೊಂಡು ಹೋಗುತ್ತಾನೆ ಮನೆ ಹತ್ತಿರ ಬಂದಂತೆ ಸಂಕಷ್ಟಿ ಕಾರನ್ನು ಅಲ್ಲಿಯೇ ನಿಲ್ಲಿಸಲು ಹೇಳುತ್ತಾಳೆ ಸೂರಜ್ ಕಾರು ನಿಲ್ಲಿಸಿದ ತಕ್ಷಣ ಇಳಿದು ಆತನಿಗೆ ಧನ್ಯವಾದವನ್ನು ಹೇಳಿ ಅವಸರದಿಂದ ಮನೆಕಡೆ ಹೊರಡುತ್ತಾಳೆ .ಮನೆಯ ಒಳಗಿನಿಂದ ಜೋರು ಮಾತುಗಳು ಸೂರಜ್ ನ ಕಿವಿಗಳಿಗೆ ಅಪ್ಪಳಿಸುತ್ತದೆ ಅಂತಹ ಕೆಟ್ಟ ಮಾತುಗಳಮ್ಮ  ಕೇಳಿ ಸೂರಜ್ ಗೆ ಸಂಕಷ್ಟಿಯ ಮನಸ್ಥಿತಿ ಅರ್ಥವಾಗುತ್ತದೆ.ಆತ ಕಾರು ಹಿಂತಿರುಗಿಸಿ ಹೊರಡುತ್ತಾನೆ
              ಇತ್ತ ಮನೆಗೆ ಬಂದ ಸಂಕಷ್ಟಿಯನ್ನು ಕಂಡು ಶಮಾ ಒಂದೇ ಸಮನೆ ಬೈಗುಳದ ಮಳೆ ಸುರಿಸುತ್ತಾಳೆ .ಸಂಕಷ್ಟಿ ಮೌನವಾಗಿ ತನ್ನ ರೂಮ್ ಸೇರಿ ಬಾಗಿಲು ಹಾಕುತ್ತಾಳೆ.  ಮರುದಿನವೂ ಆಕೆ ಅದೇ ಸ್ಥಳಕ್ಕೆ ಹೋದಾಗ ಅದಾಗಲೇ ಸೂರಜ್ ಬಂದು ತಾನು ಕುಳಿತುಕೊಳ್ಳುವ ಆ ಬಂಡೆಯ ಮೇಲೆ ಕೇಳಿತಿರುವುದು ಕಂಡು ಆಕೆ ಅಲ್ಲಿಯೇ ಸ್ವಲ್ಪ ದೂರ ಇದ್ದ ಇನ್ನೊಂದು ಬಂಡೆಯ ಮೇಲೆ ಕೇಳಿತು ಎಂದಿನಂತೆ ಸಮುದ್ರದ ಅಲೆಗಳನ್ನು ನೋಡುತ್ತಾ ಇದ್ದಾಗ  ಸೂರಜ್ ಅಲ್ಲಿಗೆ ಬಂದು ಸಂಕಷ್ಟಿಯನ್ನು ಎಚ್ಚರಿಸುತ್ತಾನೆ .ಬೆಚ್ಚಿ ಬಿದ್ದ ಸಂಕಷ್ಟಿ ಸೂರಜ್ ನನ್ನು ನೋಡಿ ನಗು ಬೀರುತ್ತಾಳೆ. ಸೂರಜ್ ಮತ್ತು ಸಂಕಷ್ಟಿ ತುಂಬಾ ಹೊತ್ತು ಮೌನವಾಗಿ ಒಬ್ಬರನ್ನು ಒಬ್ಬರು ನೋಡುತ್ತಾ ಕಳೆಯುತ್ತಾರೆ.
                   ನಿನ್ನೆಯದಿನ ನಿಮ್ಮ ಮನೆಯಲ್ಲಿ ನಿಮ್ಮನ್ನು ತುಂಬಾ ತರಾಟೆಗೆ ತೆಗೆದು ಕೊಂಡಿರಬೇಕಲ್ಲ ಮಾತು ಹೊರಗೂ ಕೇಳುತ್ತಿತ್ತು ಎಂದು ಸೂರಜ್ ಹೇಳಿದಾಗ ಆಕೆ ಅವಮಾನದಿಂದ ತಲೆ ತಗ್ಗಿಸುತ್ತಾಳೆ ಅಪ್ರಯತ್ನವಾಗಿ ಆಕೆಯ ಕಣ್ಣಿನಿಂದ ಕಣ್ಣೀರು ಧಾರಾಕಾರವಾಗಿ ಸುರಿಯುತ್ತದೆ.ಸೂರಜ್ ನಿನ್ನೆಯಂತೆ ಆಕೆಯನ್ನು ತಡೆಯದೆ ಆಕೆ ಅಳುವಷ್ಟು ಅಳಲಿ ಎಂದು ಮೌನವಾಗಿ ಕುಳಿತು ಕೊಳ್ಳುತ್ತಾನೆ..ಸ್ವಲ್ಪ ಹೊತ್ತಿನಲ್ಲಿ ಸಂಕಷ್ಟಿ ತನ್ನನ್ನು ತಾನು ಸಂತೈಸುತ್ತ ಸೂರಜ್ ಕಡೆ ತಿರುಗಿ ಸಾರಿ ಎನ್ನುತ್ತಾಳೆ. ಸೂರಜ್ ಆಕೆಯ ಮನಸ್ಥಿತಿಯನ್ನು ಅರಿತು ನೋಡಿ ನೀವೇನೋ  ಬೇಸರದಲ್ಲಿ ಇರುವಂತೆ ಕಾಣುತ್ತದೆ ಏನಿದ್ದರೂ ನನ್ನಲ್ಲಿ ಹೇಳಿ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದ್ದೆ ಇದೆ ಎನ್ನುತ್ತಾನೆ. ಸಂಕಷ್ಟಿ ತಮ್ಮ ಮತ್ತು ಆತನ ಹೆಂಡತಿ ನಾನು ಮಾಡಿದ ಸಹಾಯವನ್ನು ಮರೆತು ತನ್ನನ್ನು ದಿನಾ ಮಾತಿನ ಬಾಣಗಳಿಂದ ಇರಿಯುವುದನ್ನು ತಿಳಿಸಿ ಪುನಃ ಕಣ್ಣೀರಾಗುತ್ತಾಳೆ..     
                    ಆಗ ಸೂರಜ್ ನಾನೂ ಅದೇ ಪರಿಸ್ಥಿತಿಯಲ್ಲಿ ಇದ್ದೇನೆ  ತಂದೆ ಸತ್ತಾಗ ಚಿಕ್ಕವರಾಗಿದ್ದ ತಂಗಿ ತಮ್ಮಂದಿರನ್ನು ಒಂದು ಹಂತಕ್ಕೆ ತಂದು ಮದುವೆ  ಮಾಡಿ ತಾನು ಮಾತ್ರ ಅವರಿಗಾಗಿ ಮದುವೆ ಆಗದೆ ತನ್ನೆಲ್ಲಾ ಆಶೆಗಳನ್ನು ಹತ್ತಿಕ್ಕಿ ಅವರನ್ನು ಬೆಳೆಸಿದ ಬಗ್ಗೆ ಹೇಳಿ  ಆ ದಿನ  ತಮ್ಮನ ಹೆಂಡತಿ ಯಾಡಿದ ಮಾತು ಇಂದಿಗೂ ನನ್ನನ್ನು  ಶೂಲದಂತೆ ಚುಚ್ಚುತ್ತಿದೆ ಎಂದು ಹೇಳಿ ಮ್ಲಾನವದನ ನಾಗುತ್ತಾನೆ.ಆಗ ಸಂಕಷ್ಟಿಯು ತನ್ನ ಬಗ್ಗೆ ಹೇಳಿ ತಂದೆ ತಾಯಿಯರು ಆಕಸ್ಮಿಕವಾಗಿ ಸತ್ತಾಗ  ಹಿರಿಯ ಮಗಳಾದ ತಾನು ತನ್ನ ತಂಗಿ ತಮ್ಮಂದಿರ ಜವಾಬ್ದಾರಿ  ತೆಗೆದುಕೊಂಡು ಅವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಬಗ್ಗೆ ತಿಳಿಸಿ  ಈಗ ಅವರೆಲ್ಲಾ ಅವರವರ ಸಂಸಾರದ ಜತೆ ಹಾಯಾಗಿದ್ದು ತನ್ನನ್ನು ದೂರ ಇಟ್ಟಿರುವ ಬಗ್ಗೆ ತಿಳಿಸಿ ನೊಂದುಕೊಳ್ಳುತ್ತಾಳೆ.

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.