ಜತೆಗಾತಿ (ಸಂಗಾತಿ)
ಬಾಂದಳದಿ ಮೂಡಿ ಬಂದ
ಶಶಿಯಂತೆ ನೀ ಬಂದೆ
ಹಾಲು ಜೇನಿನ ಸವಿಯನು
ನೀ ತಂದೆ ನನ್ನ ಬಾಳಿನಂಗಳದಲಿ
ನಿನ್ನ ಕಾಲ್ಗೆಜ್ಜೆಯ ಧ್ವನಿ
ನನ್ನ ಹೃದಯದ
ವೀಣೆಯನು
ಮೀಟಿ ತುಂಬಿಸಿತು
ಮನದಲ್ಲಿ ಸಂತಸದ ಸವಿ
ಚಂದಿರನ ನಾಚಿಸುವ
ನಿನ್ನ ಮುಖಾರವಿಂದ
ನಗುವಾಗ ಮುತ್ತುಗಳು ಉದುರಿದಂತೆ
ಒಲವ ಗಾನವ ಹಾಡುತಿದೆ ಹಕ್ಕಿಯಂತೆ
ನಿನ್ನ ಕಣ್ಣೋಟ ನಕ್ಷತ್ರದಂತೆ
ಅದಕೆ ಸ್ಪರ್ಧೆಯು ನಿನ್ನ ಮೂಗು ಬೊಟ್ಟು
ಉಸುರುತಿದೆ ಮನಕೆ ಒಂದು ಗುಟ್ಟು
ಹೆಣ್ಣೇ ನೀ ನನ್ನ ಮನವ ಕದ್ದೆ
ವೈಯಾರದಲಿ ನಿಂದು
ಮುದ ತಂದೆ ಮೈ.ಮನಕೆ
ನನ್ನ ಮನೆ ಮನವ ತುಂಬಿ
ಬಾಳಲ್ಲಿ ಹರಿಸಿದೆ ಸವಿಜೇನ ಹೊಳೆ
ನಿನ್ನ ಜತೆಯಲಿರುವ ಒಂದೊಂದು ಕ್ಷಣವೂ
ಮಧುಹೀರುವಾನಂದ ನನ್ನ. ಮನಕೆ
ಸಂಗಾತಿ ನೀ ಜತೆಯಲಿರಲು
ಸ್ವರ್ಗ ಬೀರಿನ್ನೇಕೆ
ಸವಿಯೋಣ ಬಾ ನಲ್ಲೆ ಸ್ವರ್ಗದಾ ಸುಖವನಿಲ್ಲೆ
ಪಂಕಜಾ.ಕೆ
Comments
Post a Comment