ಚಿತ್ರ ಕವನ ಸ್ಪರ್ಧೆಗಾಗಿ
ಬಾಳ ಗೆಳತಿ
ವಯಸಾದರೇನಂತೆ ನಮ್ಮಿಬ್ಬರಿಗೆ
ಪ್ರೀತಿಗಿದೆಯೇ ಹೇಳು ವಯಸಿನ ಪರಿವೆ
ನಿನಗಾಗಿ ತಂದಿರುವೆ ಈ ಪುಟ್ಟ ಸೈಕಲ್
ಬೇಕಿಲ್ಲ ನಮಗೆ ಹೊಗೆಯು ಗುಳುವ ಬೈಸಿಕಲ್
ಹೋಗೋಣ ಬಾರೇ ಜತೆಯಾಗಿ ಕುಳಿತು
ಸಾಗೋಣ ಬಾರೇ ಜಗವನ್ನು ಮರೆತು
ಬಾಳಲ್ಲಿ ಈಗ ಬಂದೈತೆ ಕನಸು
ನಾವಿಬ್ಬರೊಂದಾಗಿ ನಲಿಯೋಣ ಸರಸು
ಮಳೆಯಿರಲಿ ಚಳಿಯಿರಲಿ ನಮಗೇಕೆ ಚಿಂತೆ
ನಿನಗಾಗಿ ನಾನಿರುವೆ ಕೇಳಿಲ್ಲಿ ಕಾಂತೆ
ಜತೆಯಾಗಿ ಸಾಗೋಣ ಜಗವನ್ನು ಮರೆತು
ದುಡಿಯೋಣ ಇಬ್ಬರೂ ಒಂದಾಗಿ ಬೆರೆತು
ಕಲ್ಲು ಮುಳ್ಳಿನ ದಾರಿಗೆ ಇರುವೆ ನೀ ಸಂಗಾತಿ
ಜತೆಯಾಗಿ ನೀನಿರಲು ಬೇಕಿಲ್ಲ ಅತಿ
ಪಂಕಜಾ.ಕೆ
Comments
Post a Comment