ಬಣ್ಣದ ಬುಗುರಿ
ಅಪ್ಪನು ತಂದ ಬಣ್ಣದ ಬುಗುರಿ
ಗಿರಿ ಗಿರಿ ತಿರುಗುವ ಚಂದದ ಬುಗುರಿ
ಕಣ್ಣನು ಸೆಳೆಯುವ ಅಂದದ ಬುಗುರಿ
ಮೋಡಿಯ ಮಾಡುವ ಚೆಲುವಿನ ಬುಗುರಿ
ರಜೆಯಲಿ ಮಜವನು ಕೊಡುತಿದೆ ಬುಗುರಿ
ಹಗ್ಗವ ಎಳೆದು ಜಗ್ಗನೆ ಬಿಡಲು
ಗಿರ ಗಿರ ತಿರುಗುವ ಹೊಳೆಯುವ ಬುಗುರಿ
ಆಡೋಣ ಬಾರೇ ನನ್ನಯ ಮುದ್ದಿನ ತಂಗಿ
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್
Comments
Post a Comment