ಕಾವ್ಯಕೂಟ ಸ್ಪರ್ಧೆಗಾಗಿ ಚಿತ್ರಕ್ಕೊಂದು ಗಜಲ್
ಅಬ್ಬರಿಸುವ ಕಡಲಲೆಗಳು ಕಣ್ಣ ಸೆಳೆದಿದೆ ಗೆಳತಿ
ಪ್ರಕ್ಷುಬ್ಧ ಮನದಲ್ಲಿಅಶಾಂತಿ ತುಂಬಿದೆ ಗೆಳತಿ
ಕರಿಮುಗಿಲು ಬಾಂದಳವೆಲ್ಲಾ ತುಂಬಿದೆ
ಮನಸು ನೂರಾರು ಹೋಳಾಗಿದೆ ಗೆಳತಿ
ನುಚ್ಚುನೂರಾದ ಕನಸುಗಳು ತೇಲುತಿವೆ ಅಲ್ಲಿ
ಜೀವನೋತ್ಸಾಹವೇ ಹೊರಟು ಹೋಗಿದೆ ಗೆಳತಿ
ಸಾಗರದಲೆಗಳಲಿ ಮೇಲೇರುತಿದೆ ಚಂದ್ರ ಬಿಂಬ
ಮನಕೆ ಮುದವನು ಕೊಡಲಾರದಾಗಿದೆ ಗೆಳತಿ
ಪಂಕಜಾಳ ಮನವೀಗ ಸಂಪೂರ್ಣ ಬರಿದಾಗಿದೆ
ಎತ್ತ ನೋಡಿದರತ್ತ ಕಾರ್ಮುಗಿಲು ಕಟ್ಟಿದೆ ಗೆಳತಿ
ಪಂಕಜಾ.ಕೆ.18..5.2020
Comments
Post a Comment