ತೇರು ಕವನ
ಶೀರ್ಷಿಕೆ..ಮೆಹಂದಿ ಚಿತ್ತಾರ
ಓ
ನನ್ನ
ನಲ್ಲನೆ
ನನ್ನಮೃದು
ಕರಗಳೆರಡಕೆ
ಮೆಹಂದಿಯಚಿತ್ತಾರ
ರಂಗೇರಿದ ಕರಗಳಲಿ
ನಿನ್ನ ವದನಾರವಿಂದ
ಲಜ್ಜೆಯಾವರಿಸಿದೆ ಮೊಗವು
ನಾಳಿನ ದಿನದ ಕಲ್ಪನೆಯಲಿ
ನೀಬಾಳ. ಚಂದಿರ
ಒಲವಿನ. ಗೆಳೆಯ
ಪ್ರೀತಿಯ ಸರದಾರ
ಮನಸೆಳೆದ ಮೋಹನ
ನಿನ್ನ ನೆನಪಿನ ದೋಣಿಯ ಪಯಣಿಗಳು
ಪ್ರೀತಿಯಾಲಿಂಗನಕೆ ಕಾದಿದೆ ತನುಮನ
ಸವಿಗಳಿಗೆಯ ನೆನಪಲಿ ಕಚಗುಳಿ
ಸುಂದರ. ಸ್ವಪ್ನವು
ಸಾಕಾರದ ಕ್ಷಣಗಳಿಗೆ
ಕಾಯುತಿದೆ. . ಮನವು
ಜತೆಯಾಗು. ಬಾ. ಬೇಗ
ಪಂಕಜಾ ಕೆ ಮುಡಿಪು
Comments
Post a Comment