ಗಜಲ್.
ಅಬ್ಬರಿಸುವ ಕಡಲಲೆಗಳನು ಕಂಡಾಗ ಅವನ ನೆನಪು
ಬೀಸುವ ತಂಗಾಳಿಯಲ್ಲಿ ವಿಹರಿಸುವಾಗ ಅವನ ನೆನಪು
ನವೋಲ್ಲಾಸದಿಂದ ಕೂಡಿತ್ತು ನಮ್ಮ ಜೀವನ
ಯಮುನಾತೀರದಲ್ಲಿ ಕಾಯುತ್ತಿರುವಾಗ ಅವನ ನೆನಪು
ಕಳೆದ ಸುಂದರ ಕ್ಷಣಗಳು ಮೈ ನವಿರೇಳಿಸುತ್ತಿದೆ
ಬರುವೆಯೆಂದು ಹೇಳಿ ಬಾರದಿರುವಾಗ ಅವನ ನೆನಪು
ಎಷ್ಟೋ ವರುಷಗಳು ಅವನಿಗಾಗಿ ತಪವ ಗೈದಿರುವೆ
ಬೃಂದಾವನದಲ್ಲಿ ಸುತ್ತಾಡುವಾಗ ಅವನ ನೆನಪು
ಮಾಧವನ ನಿರೀಕ್ಷೆಯಲಿ ಇರುವುದು ತಪ್ಪೇ ಹೇಳು ಪಂಕಜಾ
ನನ್ನ ಒಲವಿನ ಸಂದೇಶ ತಿಳಿದೂ ದೂರವಾದಾಗ ಅವನ ನೆನಪು
ಪಂಕಜಾ.ಕೆ. ಮುಡಿಪು
Comments
Post a Comment