ಬಣ್ಣದ ಕುದುರೆ (ಶಿಶು ಗೀತೆ)
ಅಣ್ಣನು ತಂದ ಬಣ್ಣದ ಕುದುರೆ
ಟಕ ಟಕ ಸದ್ದನು ಮಾಡುವ ಕುದುರೆ
ಮಿರಿ ಮಿರಿ ಮಿನುಗುವ ಚಂದದ ಕುದುರೆ
ಲಾಲನೆ ಪಾಲನೆ ಬೇಡದ ಕುದುರೆ
ನನ್ನನು ಕೂರಿಸಿ ಕುಣಿಸುವ ಕುದರೆ
ಕಾಲಿಲ್ಲದೆಯೇ ಕುಣಿಯುವ ಕುದುರೆ
ತೂಗುತ ಬಾಗುತ ಆಡುವ ಕುದುರೆ
ನನ್ನಯ ಮೆಚ್ಚಿನ ಮರದ ಕುದುರೆ
ಪಂಕಜಾ.ಕೆ.ಮುಡಿಪು
Comments
Post a Comment