ಮಾವಿನಹಣ್ಣು ಮತ್ತು ಬಾಳೆಹಣ್ಣು ಮಿಶ್ರ ಹಲ್ವಾ
ಬೇಕಾದ ಸಾಮಾನು.....10 ಮಧ್ಯಮ ಗಾತ್ರದ ಬಾಳೆಹಣ್ಣು 5 ಮಾವಿನಹಣ್ಣು 1 ಲೋಟ ಸಕ್ಕರೆ
ಮಾಡುವ ವಿಧಾನ..ಮಾವಿನಹಣ್ಣು ಮತ್ತು ಬಾಳೆಹಣ್ಣನ್ನು ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಒಂದು ಸುತ್ತು ತಿರುಗಿಸಿ ,ದಪ್ಪ ತಳದ ಬಾಣಲೆಯಲ್ಲಿ ಹಾಕಿ ಸ್ವಲ್ಪ ಹೊತ್ತು ಬೇಯಿಸಿ ನಂತರ 1 ಲೋಟ ಸಕ್ಕರೆ (ಹಣ್ಣುಗಳು ತುಂಬಾ ಸಿಹಿ ಇದ್ದರೆ ಸಕ್ಕರೆ ಸ್ವಲ್ಪ ಕಡಿಮೆ ಹಾಕಬಹುದು.) ಹಾಕಿ ಚೆನ್ನಾಗಿ ಗೊಟಾಯಿಸಿ 10 ಮಿನುಟ್ ನಂತರ ತುಪ್ಪ ಹಾಕಿ ಗೊಟಾಯಿಸಿ ಉರಿ ಸಣ್ಣ ಮಾಡಿ ಆಗಾಗ ಗೋತಾಯಿಸುತ್ತಾ ಇದ್ದು ಗಟ್ಟಿಯಾಗಿ ಹಲ್ವದ ಹದಕ್ಕೆ ಬಂದಾಗ ಹ
ತುಪ್ಪ ಸವರಿದ ತಟ್ಟೆಗೆ ಹರಡಿ ಗೋಡಂಬಿ ಚೂರಿನಿಂದ ಅಲಂಕರಿಸಿ ತಣಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ರುಚಿಯಾದ ಹಲ್ವಾ ಮಾಡಿ ತಿಂದು ನೋಡಿ
ಪಂಕಜಾ.ಕೆ ಮುಡಿಪು
Comments
Post a Comment