ಸುನೀತಾ ಕವನ ಸ್ಪರ್ಧೆಗಾಗಿ
ಭರವಸೆಯ ಬೆಳಕು
ಏಳು ಬೀಳಿನ ದಾರಿಯಲಿ
ಕಲ್ಲುಮುಳ್ಳುಗಳ ಸರಿಸುತ್ತ
ಬಿದ್ದಾಗ ಎದ್ದು ನಡೆಯಬೇಕು
ಬಾ ನಾನಿರುವೆ ಎತ್ತಲು ನಿನ್ನನು
ಎಡವಿ ಬಿದ್ದರೆ ಎದ್ದು ನಡೆ
ಗುರಿ ಮುಟ್ಟುವವರೆಗೆ ನಡೆ
ಸಾಧಿಸಿ ತೋರಿಸು ಜಗಕೆ
ನೀನಾಗುವೆ ಮಾದರಿ ನಾಯಕ
ಕಷ್ಟ ಬಂತೆಂದು ಕುಗ್ಗಬೇಡ
ಗುರಿಸೇರಲು ಶ್ರಮಿಸಬೇಕು
ಅಗದೆಂದು ಕೈ ಕಟ್ಟಿ ಕುಳಿತರೆ
ಸಾಧಿಸಲಾಗದು ಏನನ್ನು ಜಗದಲಿ
ಎಲ್ಲೆಡೆಯೂ ತುಂಬಿದೆ ಹಸಿರು ಸಿರಿ
ರವಿಯು ಹರಡಿರುವನು ಹೊಂಬೆಳಕು
ಭರವಸೆಯ ಬೆಳಕು ಹಬ್ಬಿದೆ ನೋಡು
ಏಳು ಎದ್ದೇಳು ನಡೆ ಮುಂದೆ ನುಗ್ಗಿ ನಡೆ
ಪಂಕಜಾ.ಕೆ.ಮುಡಿಪು
Comments
Post a Comment