ಬಾ ಬಾರೇ ನನ್ನೊಲೆವೆ
ಎದೆಯಾಳದಲ್ಲಿರುವ ಚೆಲುವಾದ ಬಾವಗಳು
ಹೊರಬರಲು ತವಕಿಸುತಿದೆ ಕೇಳು ಗೆಳತಿ
ಚೆಲುವಾದ ಹೂವೊಂದು ಅರಳಿರುವ ಲತೆಯಂತೆ
ನೀನಿರಲು ಬಾಳೆಲ್ಲಾ ಹೂವಿನ ಹಾಸಿಗೆಯಂತೆ
ಪಡಿಯಕ್ಕಿ ಎಡವಿ ನೀನಂದು ಬಂದೆ
ಒಲವ ರಸ ಹರಿಸುತ್ತ ಮನದಲ್ಲಿ ನಿಂದೆ
ಈ ಜೀವ ನಿನಗಾಗಿ ತುಡಿಯುತಿದೆ ನಲ್ಲೆ
ನನ್ನುಸಿರು ನೀ ನಾದೆ ನೀ ಅದನು ಬಲ್ಲೆ
ಪ್ರಳಯವೇ ಆದರೂ ಜತೆಯಾಗಿ ನಾನಿರುವೆ
ಸ್ವರ್ಗದಾ ಸುಖವನ್ನು ಸವಿಯೋಣ ಇಲ್ಲೇ
ಏಕಿಂತ ಮುನಿಸು ನಿನಗಿದು ತರವೇ
ನಿನ್ನ ಅಗಲಿಕೆಯ ಕ್ಷಣಗಳನು ನಾ ಸಹಿಸಲಾರೆ
ಕಾದಿರುವೆ ನಿನಗಾಗಿ ಒಲವ ಹೂಗಳ ಹಿಡಿದು
ಮನ ಮನವು ಬರಿದಾಗಿದೆ ನೀನಿಲ್ಲದೆ ಇಂದು
ಪಂಕಜಾ.ಕೆ.
Comments
Post a Comment