ಬದುಕಿನ ಬಂಡಿ
ಬದುಕಿನಾ ಬಂಡಿಯಲಿ ಮೆರೆಸಿದ್ದೆ ನನ್ನ
ನೀ ಎನ್ನ ಬಾಳಸಖಿ ಸುಖವಾಗಿರು ಚಿನ್ನ
ನಗು ನಗುತ್ತಾ ಎಳೆದಿದ್ದೆ ಬಾಳ ತೇರನು ಅಂದು
ಬಾಳ ಸಂಜೆಯಲಿ ನಾವಿಬ್ಬರೀಗ ಒಂದು
ಚದುರಿದವು ಪ್ರೀತಿಯಿಂದ ಸಾಕಿದ ಕರುಳ ಕುಡಿಗಳು
ಭಾರವಾಯಿತವರಿಗೆ ಹೆತ್ತವರ ನೆರಳು
ಬೀದಿಗಟ್ಟಿದರವರ ಕರುಣೆಯನು ಮರೆತು
ಎಳೆಯುವೆನು ಜೀವನದ ಬಂಡಿಯನು ಸೋತು
ಹೆತ್ತಬ್ಬೆ ಅಪ್ಪನನು ಮರೆಯುವನು ನೀಚ
ತಕ್ಕಡಿಯು ತಿರುಗುವುದ ತಿಳಿಯಲಾರನೀತ
ಬದುಕ ಬಂಡಿಯ ಎಳೆಯಲು ಸೋತಿರುವೆ ನಾನು
ಎಳೆಯಲೇ ಬೇಕಾಗಿದೆ ಮೈ ಬಗ್ಗಿಸಿ ನಿನಗಾಗಿ ನಾನು
ಪಂಕಜಾ.ಕೆ ಮುಡಿಪು
Comments
Post a Comment