[27/05, 3:13 PM] pankajarambhat: ಪ್ರಕೃತಿ ಗಾನ. (ಭಾವಗೀತೆ)
ತಂಪಾದ ಗಾಳಿಯು ಸೊಂಪಾಗಿ ಬೀಸಿದೆ
ಹೊಸರಾಗದಲೆಗಳಲಿ ಮೈ ಮನವು ತೇಲಿದೆ
ಕಾನನದ ಸುಮವೊಂದು ಸೌರಭವ ಸೂಸಿದೆ
ದುಂಬಿಗಳನು ಕೈ ಬೀಸಿ ಮಧುಹೀರಲು ಕರೆದಿದೆ
ಗಗನದಲಿ ತುಂಬಿರುವ ಕರಿಮುಗಿಲ ದಂಡು
ಮಳೆಯ ಸುರಿಸಿ ಭೂತಾಯಿ ಒಡಲಲ್ಲಿ ರಂಗು
ಬುವಿಯೊಡಲಲಿ ಹುದುಗಿದ್ದ ಬೀಜಗಳೆಲ್ಲಾ
ತಲೆಯೆತ್ತಿ ನಿಂತು ಹಸಿರ ಸೆರಗು ಹಾಸಿತಲ್ಲ
ಹೂಬನದ ಹೂಗಳೆಲ್ಲ ಅರಳಿ ನಗುತಿದೆ
ಹೂವಿನೊಡನೆ ಮಾತಿಗಿಳಿದಿದೆ ಗಾಳಿ
ಅಲೆ ಅಲೆಯಾಗಿ ತೇಲಿ ಬರುತಿದೆ ಮೋಹನರಾಗ
ಮೈನವಿರೇಳುತಿದೆ ಭೂರಮೆಯ ಚೆಲುವ ಕಂಡಾಗ
ಸೃಷ್ಟಿ ಸೌಂದರ್ಯದ ಅಮಲಿನಲಿ ಮೈಮನಕೆ ಉಲ್ಲಾಸ
ಅದ್ಬುತ ಕಲಾಕಾರನ ಕಾಣುತ ಮೂಡಿತು ಮಂದಹಾಸ
ಜೀವನೋತ್ಸಾಹವ ಹೆಚ್ಚಿಸುತ್ತಿದೆ ಭೂರಮೆಯ ಚೆಲುವು
ತಂಪಾದ ಗಾಳಿಯಲಿ ಮೈಮರೆಯುತ್ತಿದೆ ಮನವು
ಪಂಕಜಾ.ಕೆ ಮುಡಿಪು
[27/05, 8:16 PM] ಶಶಿವಸಂತ: *ಮುತ್ತು ರತ್ನಗಳ ಸಿರಿಗಿಂತಲೂ ಹೆಚ್ಚಾಗಿ ಜ್ಞಾನ ಸಂಪತ್ತು ತುಂಬಿಕೊಂಡಿರುವ ಸ್ನೇಹ ಜೀವಿಗಳಿಗೆ.....ನಮಸ್ಕಾರ*
🔜🔜🔜🔜🔜🔜🔜🔜
*ಭಾವಗಳನು ಪದವಾಗಿಸಿ ಪದಗಳಿಗೆ ಜೀವಮೂಡಿಸಿ, ನಮ್ಮೆಲ್ಲರೊಳಗೂ ನವ ಚೇತನ ಮೂಡಿಸೋ ಭಾವಗೀತೆ ಬರೆದ ಎಲ್ಲಾಕವಿಗಳಿಗೂ ಅಭಿನಂದನೆಗಳು*
💐💐💐💐💐💐💐💐
🔛🔛🔛🔛🔛🔛🔛🔛🔛
*ಚಂದಿರನಂಗಳದ ಹೊಳಪಿನೊಳಗೆ ಬೆಳಗಿದ ಫಲಿತಾಂಶ ಪ್ರಕಟಗೊಂಡಿದೆ ನೋಡಿ.*
⏬⏬⏬⏬⏬⏬⏬⏬
*ಅತ್ಯುತ್ತಮ*
-----------------------------------
🏆 . *ಕೆಂಚವೀರಪ್ಪ ಸುಳ್ಯ*
⌛⌛⌛⌛⌛⌛⌛
*ಉತ್ತಮ*
----
---------------------------
🥇
*ಮಲ್ಲೇಶ್ ಜಿ*
🥈
*ಶಿರ*
🥉
*ಪಂಕಜ ಕೆ*
🕰🕰🕰🕰🕰🕰🕰
*ಮೆಚ್ಚುಗೆ ಪಡೆದ ಗೀತೆಗಳು*
–--------------------------
♟️
*ಅಂಬುಜ*
♟️
*ಸುಮ ಮೈಸೂರು*
♟️
*ಶಶಿಧರ್*
*💞ಶುಭವಾಗಲಿ💞*
Comments
Post a Comment