ಉಪ್ಪಿಟ್ಟು ಪರೋಟ
ಬೆಳಿಗ್ಗೆ ತಿಂಡಿಗೆ ಮಾಡಿದ ಉಪ್ಪಿಟ್ಟು ಜಾಸ್ತಿಯಾಯಿತೆ ?ಸಾಯಂಕಾಲ ಅದನ್ನೇ ತಿನ್ನಲು ಇಷ್ಟವಿಲ್ಲವೇ?ಹಾಗೆಂದು ಈ ತುಟ್ಟಿ ಯುಗದಲ್ಲಿ ಅದನ್ನು ಚೆಲ್ಲಲು ಮನಸು ಬರುವುದಿಲ್ಲವೇ ಹಾಗಿದ್ದರೆ ಇಲ್ಲಿದೆ ನೋಡಿ ರುಚಿಯಾದ ಪರೋಟ
ಮಾಡುವ ವಿಧಾನ....ಬೆಳಿಗ್ಗಿನ ತಿಂಡಿಗೆ ಆಗಿ ಮಿಕ್ಕಿದ ರವೆ ಉಪ್ಪಿಟ್ಟಿಗೆ ಹಸಿಮೆಣಸು ಬೇವಿನಸೊಪ್ಪು ನೀರುಳ್ಳಿ ಕತ್ತರಿಸಿ ಸೇರಿಸಿ ಸ್ವಲ್ಪ ನೀರು ಸೇರಿಸಿ ಗೋಧಿ ಹುಡಿ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಚಪಾತಿಯಂತೆ ಲಟ್ಟಿಸಿ ತವಾದಲ್ಲಿ ತುಪ್ಪ ಹಾಕಿ ಎರಡೂ ಬದಿ ಬೇಯಿಸಿ ತೆಗೆಯಿರಿ ಸಾಯಂಕಾಲದ ತಿಂಡಿಗೆ ರುಚಿಯಾದ ಉಪ್ಪಿಟ್ಟು ಪರೋಟ ರೆಡಿ ಚಟ್ನಿ ಜಾಮ್ ಸಾಸ್ ಇತ್ಯಾದಿ ಯ ಜತೆ ನಂಜಿಕೊಂಡು ಇಲ್ಲವೇ ಹಾಗೆಯೇ ಬೇಕಿದ್ದರೂ ತಿನ್ನಬಹುದು ಮಾಡಿ ನೋಡಿ ಹೇಗಿದೆ ಎಂದು ಹೇಳಲು ಮರೆಯಬೇಡಿ ಮತ್ತೆ
Comments
Post a Comment