ಹೃದಯ ಅಳುತಿದೆ
ಮೃದುವಾದ ಹೃದಯದಲಿ
ಮೃದು ಮಧುರ ಭಾವನೆಗಳು
ಅರಳುತ್ತ ಮನವನ್ನು ತಣಿಸಿತಂದು
ನಿನ್ನೊಲುಮೆ ಉಸಿರಾಗಿ
ಬಾಳೆಲ್ಲಾ ಹಸಿರಾಗಿ
ಚೆಲು ಹೂಗಳರಳುತ್ತ ಮುದ ತಂದಿತು
ನೀ ನನ್ನ ಜತೆಯಲ್ಲಿ
ಒಲವಿಂದ ಕೂಡಿರಲು
ಮನದಲ್ಲಿ ನವಿಲೊಂದು ನಲಿದಾಡಿತು
ಅಬ್ಬರಿಸಿ ಬಂತೊಂದು
ಸಂಶಯದ ಅಲೆಯಾಗಿ
ಕಟ್ಟಿದ್ದ ಸೌಧಗಳು ಕುಸಿದುಬಿತ್ತು
ಹೃದಯವದು ಅಳುತಿರಲು
ನಿನ್ನೊಲವ ನೆನೆಸುತ್ತಾ
ಬಾಳೇಕೆ ಈ ರೀತಿ ಸ್ಥಬ್ಧವಾಯಿತು
ಚುಚ್ಚುವವರ ನುಡಿಗಳಿಗೆ
ಕಿವುಡಾಗಿ ಮನವಿರಲು
ನರಳುತ್ತಿದೆ ಹೃದಯವದು ಚೂರು ಚೂರಾಗಿ
ಅಳುತಿರುವ ಹೃದಯಕ್ಕೆ
ಸಾಂತ್ವಾನವ ನೀಡಲಿಕೆ
ನೀ ಮರಳಿ ಬರುವೆಯೆಂದು ಕಾಯುತಿರುವೆ
ಪಂಕಜಾ ಕೆ ಮುಡಿಪು
Comments
Post a Comment