.ಒಲವಿನ ಗಣಿ
ಮುದ್ದಾದ ಮಗಳಾಗಿ ನಾ ಬಂದೆ ಇಳೆಗಂದು
ಬೆಚ್ಚನೆಯ ಅಮ್ಮನ ಮಡಿಲಿಂದ ಜಾರಿ
ಹೆಣ್ಣೆಂದು ಜರಿಯದೆಯೇ ಕೊರತೆಯನು ಮಾಡದೆಯೇ
ವಿದ್ಯೆ ಬುದ್ದಿಗಳ ಕಲಿಸಿ ಬಾಳು ಕೊಟ್ಟ ಅಪ್ಪ
ಸಿರಿದೇವಿ ನೀ ಮಗಳೇ ಮನೆ ಬೆಳಕು ನೀನಾದೆ
ನೀ ನನ್ನ ಭಾಗ್ಯನಿಧಿ ಈ ಮನೆಯ ಮುತ್ತು
ದುಃಖಗಳ ಸಹಿಸುತ ಎದುರಿಸುತ ಕಷ್ಟಗಳ
ದೈರ್ಯವನು ಮನಕೆ ತಾ ತುಂಬಿ
ನಾ ಕಂಡ ಕನಸುಗಳು ಸಾಕಾರವಾಗಲೆಂದು
ನೆರವಿನಾ ಹಸ್ತವನು ಚಾಚಿ ನಡೆಸಿ
ಗೆದ್ದಾಗ ಹುರಿದುಂಬಿಸಿ ಸೋತಾಗ ಸಾಂತ್ವನಿಸಿ
ಮನಕಂದು ದೈರ್ಯವನು ತಾನು ತುಂಬಿ
ಬೆಳೆಸಿದನು ನನ್ನಪ್ಪಕಷ್ಟಗಳ ಸೋಕಿಸದೆಯೇ
ನಗು ನಗುತ ಸಂಸಾರ ರಥವ ಎಳೆದು
ಮತ್ತೊಮ್ಮೆ ಹುಟ್ಟಿ ಬಂದರೂ ತೀರಿಸಲಾರೆ ಅಪ್ಪ ನಿನ್ನ ಋಣ
ನೀನೇ ನನ್ನ ಬಾಳಿನ ಮೊದಲ ನಾಯಕ
ಪಂಕಜಾ.ಕೆ ಮುಡಿಪು
Comments
Post a Comment