ಪ್ರೇಮ ರಾಗ. (ಭಾವಗೀತೆ)
ಒಲವ ಸೂಸುವ ಕಣ್ಣ ನೋಟಕೆ
ಹೃದಯ ರಾಗವ ಹಾಡಿತು
ಮುದದಿ ಅರಳಿತು ಮನವು ಇಂದು
ನಿನ್ನ ಪ್ರೀತಿಯ ಮಾತಿಗೆ
ಕಲ್ಲು ಮುಳ್ಳಿನ ದಾರಿ ಕೂಡಾ
ಹೂವ ಹಾಸಿಗೆಯಾಯಿತು
ಪ್ರೀತಿ ತುಂಬಿದ ನಿನ್ನ ನುಡಿಗಳು
ನನ್ನ ಮನವನು ಮೀಟಿತು
ನಿನ್ನ ಹೆಜ್ಜೆಗೆ ತಾಳ ಹಾಕುತ
ನವಿಲ ನಾಟ್ಯವ ಮರೆಸಿತು
ಬಾಳ ಪಯಣವು ಜತೆಗೆ ಸಾಗಲು
ಮನದಿ ಸಂತಸ ತುಂಬಿತು
ನಿನ್ನ ಭರವಸೆಯ ನೋಟವೊಂದೇ
ತನುವು ಅರಳಲು ಸಾಲದೆ
ನಿನ್ನ ಎದೆಯಲಿ ಉಸಿರ ಸೇರಿಸಿ
ಪ್ರೇಮರಾಗವ ಹಾಡಿದೆ
ಮನದ ಗುಡಿಯಲಿ ಬಂದು ನಿಂತು
ನನ್ನ ಮನವನು ಬೆಳಗಿದೆ
ಒಲವ ತೇರನು ಜತೆಗೆ ಎಳೆಯುತ
ಮನಕೆ ಹರ್ಷವ ತುಂಬಿದೆ
ಪಂಕಜಾ ಕೆ.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment