ಜಡೆ ಕವನ
ಮಡುಕಟ್ಟಿದೆ ಹೊಂಗನಸು ಮನಸಿನಲಿ
ಮನಸಿನಲಿ ತುಂಬಿದೆ ಚೆಲುವಾದ ಕನಸು
ಕನಸು ಮನಸಲೂ ನೀನಿರುವೆ ನಲ್ಲ
ನಲ್ಲ ನೀ ಬಂದು ನನ್ನ ಮನದಲಿ ಮುದ
ಮುದದಿ ನಲಿವ ಮನಸೊಂದು ನವಿಲು
ಬಾವಿಲ ನರ್ತನವು ಮೈ ಮನಕೆ ಉಲ್ಲಾಸ
ಉಲ್ಲಾಸ ಹುರುಪು ಬಾಳಿಗೆ ಮೆರುಗು
ಮೆರುಗು ತಂದಿತು ನಿನ್ನ ಪ್ರೀತಿಯ ನೋಟ
ನೋಟದಲೇ ಸೆಳೆದಿಟ್ಟೆ ನನ್ನ ಮನವ ನೀನು
ನೀನಿರಲು ಬಾಳಲ್ಲಿ ಅರಳುವುದು ಚೆಲು ಹೂವು
ಹೂವು ಅರಳಿದಾಗ ದುಂಬಿಗಳ ಕಾಟ
ಕಾಟಕೊಡುತ್ತಿದೆ ನಿನ್ನ ಒಲವಿನ ಕಣ್ಣೋಟ
ಕಣ್ಣೋಟದಲಿ ಕಾಡುತ ಮನಸಿನಲಿ ನಿಂದೆ
ನಿಂದು ನನ್ನ ಮನಕೆ ತುಂಬಿದೆ ಹರುಷ
ಹರುಷದಲಿ ನಿನ್ನ ರೂಪವು ಮನದಿ ಮಡುಕಟ್ಟಿದೆ
ಪಂಕಜಾ.ಕೆ.ಮುಡಿಪು
Comments
Post a Comment