ಗಜಲ್
ಮುಂಗಾರು ಮಳೆಸುರಿದು ಮೈ ಮನಕೆ ಮುದ ತಂದಿದೆ ಗೆಳೆಯ
ಭೂತಾಯಿಯ ಹಸಿರಿನ ಸೆರಗು ತಣ್ಣುಗಳನ್ನು ತಂಪಾಗಿಸಿದೆ ಗೆಳೆಯ
ಚಿಗುರು ಹೂಗಳಿಂದ ತುಂಬಿ ಗಿಡಮರಗಳು ನಳನಳಿಸುತಿದೆಯಲ್ಲವೇ?
ವಸುಂಧರೆಯ ಚೆಲುವು ನೋಡುವುದು ಹಬ್ಬವಾಗಿದೆ ಗೆಳೆಯ
ಜುಳು ಜುಳು ಹರಿಯುವ ನೀರಧಾರೆಯಲಿ ಕಾಲಾಡಿಸುವ ಆಸೆ
ಜಿಟಿ ಜಿಟಿ ಮಳೆಯಲ್ಲಿ ಮನಸ್ಪೂರ್ತಿಯಾಗಿ ನಲಿಯಬೇಕೆನಿಸಿದೆ ಗೆಳೆಯ
ಬಾಂದಳದಲ್ಲಿ ಕಟ್ಟಿರುವ ಕರಿಮೋಡಗಳ ದಂಡು ಮನ ಸೆಳೆದಿದೆ
ಪ್ರಕೃತಿಯ ಮಡಿಲಲ್ಲಿ ನವೋಲ್ಲಾಸದಿಂದ ನಲಿಯಬೇಕೆನಿಸಿದೆ ಗೆಳೆಯ
ಬೇಸಿಗೆಯಲ್ಲಿ ನೀರ ಕೊರತೆ ಬಾರದಂತೆ ನೋಡಿಕೊಳ್ಳಬೇಕಲ್ಲವೇ ಪಂಕಜಾ
ಹರಿಯುವ ನೀರನ್ನು ಇಂಗು ಗುಂಡಿಗಳ ತೋಡಿ ಇಂಗಿಸಬೇಕಿದೆ ಗೆಳೆಯ
ಪಂಕಜಾ.ಕೆ.ಮುಡಿಪು
Comments
Post a Comment