ನಮ್ಮ ಶಾಲೆ
ನಮ್ಮ ಊರ ಮೊದಲ ಶಾಲೆ ನಮ್ಮ ಶಾಲೆಯು
ಸುತ್ತಲೆಲ್ಲಾ ಹಸಿರಿನಿಂದ ಇರುವ ಶಾಲೆಯು
ವಿದ್ಯೆಗಾಗಿ ನನ್ನ ಅಜ್ಜ ಕಟ್ಟಿಸಿರುವರು
ದೂರದೂರಿನಿಂದ ಬಂದು ವಿದ್ಯೆ ಕಲಿವರು
ನಮ್ಮ ದೇಶ ಭಾರತದ ಹೆಸರನ್ನೇ ಇದಕೆ ಇಟ್ಟರು
ಭಾರತೀ ಶಾಲೆಯೆಂದು ಹೆಸರು ವಾಸಿಯು
ವರ್ಣಮಾಲೆ ಅಕ್ಷರವ ತೀಡಿ ತಿದ್ದುತ
ಕಲಿಕೆ ಜತೆ ಆಟ ಪಾಠವೆಲ್ಲವನ್ನು ಕಲಿಸುವರು
ಓದು ಬರಹ ಕಲಿಸಿ ನಮ್ಮ ಜ್ಞಾನ ಬೆಳೆಸುತ
ಪುಟ್ಟ ಪುಟ್ಟ ಕಥೆಗಳನ್ನು ಹೇಳಿ ನಗಿಸುತ
ಇಲ್ಲಿ ಕಲಿತ ಮಕ್ಕಳೆಲ್ಲಾ ಜಾಣರಾದರು
ದೇಶ ವಿದೇಶದಲ್ಲೂ ಹೆಸರು ಪಡೆದರು.
ಮಧುರ ಮಧುರ ನೆನಪುಗಳು ಕಾಡುತಿರುವುದು
ಕನ್ನಡದ ಕಂಪನ್ನು ಹರಡುತಿರುವುದು
ಹೆತ್ತವರ ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗುತ
ತುಂಬಿ ತುಳುಕುವ ಶಾಲೆಯಿಂದು ನಿರ್ಮಾನುಷ್ಯ
ಪಂಕಜಾ.ಕೆ.ಮುಡಿಪು
Comments
Post a Comment