ಮುತ್ತಿನ ಹಾರ
ಎನಿತು ಚಂದದ ಕುಸುರಿ ಕಲೆಯೋ
ಜೇಡ ಮಾಡಿದ ಕಲೆಯಬಲೆಯೋ
ಪ್ರಕೃತಿ ನಿರ್ಮಿತ ಸುಂದರ ಹಾರ
ಜೇಡನ ಕಲೆಯಲಿ ಮುತ್ತಿನ ಹಾರ
ಮಳೆಯ ತುಂತುರ ಹನಿಗಳು ಕೂಡಿ
ನಿರ್ಮಿಸಿತು ಸುಂದರ ಹಾರವ ನೋಡಿ
ಭೂದೇವಿಯ ಮುಕುಟಕ್ಕೆ ವರುಣನ ಹಾರ
ಒಲವಲಿ ತೊಡಿಸಿದ ಮುತ್ತಿನ ಹಾರ
ಕಣ್ಮನ ಸೆಳೆದಿದೆ ಇದರ ಸೊಬಗು
ಮೈಮನಕೆಲ್ಲಾ ತುಂಬಿತು ಬೆರಗು
ವಸುಂಧರೆ ಧರಿಸಿದಳು ಹಸಿರಿನ ಉಡುಗೆ
ಭುವಿಯ ಕೊರಳಿಗೆ ವರುಣನ ಕೊಡುಗೆ
ಪಂಕಜಾ.ಕೆ.ಮುಡಿಪು
Comments
Post a Comment