ಚಿತ್ರ ಕವನ ಸ್ಪರ್ಧೆಗಾಗಿ
ಚಿತ್ರದುರ್ಗದ ಕೋಟೆ
ಚಿತ್ರ ದುರ್ಗದ ಕಲ್ಲಿನ ಕೋಟೆ
ಗಂಡುಗಲಿ ಗಳು ಆಳಿದ ಕೋಟೆ
ವೀರವನಿತೆಯರು ಬಾಳಿದ ನಾಡು
ಸಂಸ್ಕೃತಿ ಕಲೆಗಳ ಚಿನ್ನದ ಬೀಡು
ಒನಕೆ ಓಬವ್ವ ರಕ್ಷಿಸಿದ ಕೋಟೆ
ಏಳು ಸುತ್ತಿನ ಕಲ್ಲಿನ ಕೋಟೆ
ಮದಕರಿ ನಾಯಕ ಆಳಿದ ಕೋಟೆ
ಸಿಡಿಲುಗು ಜಗ್ಗದ ಉಕ್ಕಿನ ಕೋಟೆ
ಪ್ರವಾಸಿಗಳ ಮನಸೆಳೆಯುವ ತಾಣ
ಚಾರಣ ಪ್ರೀಯರ ಮೆಚ್ಚಿನ ತಾಣ
ಬಯಲು ಸೀಮೆಯ ಈ ನಾಡು
ಚಿತ್ರದುರ್ಗದ ಸಿರಿನಾಡು
ಕೆಚ್ಚೆದೆಯ ವೀರರು ಬಾಳಿದ ನಾಡು
ಭವ್ಯ ಭಾರತದ ಹೆಮ್ಮೆಯ ನಾಡು
ಪ್ರಕೃತಿ ಸಿರಿಯು ತುಂಬಿದ ಬೀಡು
ಚಿತ್ರದುರ್ಗದ ಈ ನಾಡು
ಪಂಕಜಾ.ಕೆ .ಮುಡಿಪು
Comments
Post a Comment