ಗಜಲ್ (ಸ್ಪರ್ಧೆಗಾಗಿ)
ನಿನ್ನನಂದು ಕಂಡಾಗ ಮನಸು ನವಿಲಂತೆ ಕುಣಿಯಿತು ನಲ್ಲ
ಹೊಸಭಾವದಲೆಗಳಲಿ ತೇಲಿ ಮನ ನಲಿದಾಡಿತು ನಲ್ಲ
ಕಣ್ಣೋಟದ ತುಂಟಾಟದ ಕಾಟಕೆ ನಾ ಸೋತೆ ಅಂದು
ಬಾಳ ತೇರನೆಳೆಯಲು ನಿನ್ನೊಡನೆ ಸೇರುವಾಸೆ ಕಾಡಿತು ನಲ್ಲ
ಬಾಳಿನ ಪುಟಗಳಲಿ ಒಲವ ಓಲೆಯ ಬರೆದೆ ನೀನು
ಉಕ್ಕಿ ಹರಿಯುವ ಕಡಲಂತೆ ಪ್ರಕ್ಷುಬ್ಧಗೊಂಡಿತು ನಲ್ಲ
ಬೆಳದಿಂಗಳ ಬೆಳಕಿನಲಿ ಮಿಂದೆದ್ದ ಭಾವ ತುಂಬಿದೆ ಮನದಲಿ
ಗರಿಗೆದರಿದ ಹಕ್ಕಿಯಂತೆ ನನ್ನೆದೆಯಲಿ ಉಲ್ಲಾಸ ಹಾಸ ತುಂಬಿತು ನಲ್ಲ
ಪಂಕಜಾಕ್ಷಿಗೆ ನಿನ್ನೊಡನೆ ಕಲೆತು ಅನುದಿನವೂ ಮೈಮರೆವಾಸೆ
ನಿನ್ನ ಒಡನಾಟದಲ್ಲಿ ಬಾಳು ಸುಗಂಧಸೂಸುವ ಹೂವಾಗಿತ್ತು ನಲ್ಲ
ಪಂಕಜಾ.ಕೆ.ಮುಡಿಪು
Comments
Post a Comment