ಸ್ನೇಹ ಸಂಗಮ ಸ್ಪರ್ಧೆಗಾಗಿ
ಶ್ರಾವಣ ಮಾಸ
ಬಂದಿತು ಬಂದಿತು ಶ್ರಾವಣ ಮಾಸ
ಸಾತ್ವಿಕ ಭಕ್ತಿಯು ತುಂಬುವ ಮಾಸ
ನವಿರಾದ ರವಿ ಕಿರಣದ ಸ್ಪರ್ಶಕೆ ಮುದವು
ತುಂತುರು ಮಳೆಯಸಿಂಚನದಲಿ ನಲಿವು
ನದಿ ತೊರೆಗಳು ಹರಿಯುವ ಮಂಜುಳ ನಾದ
ಅರಳಿದ ಹೂಗಳ ಸುಮಧುರ ಗಂಧ
ಹಬ್ಬದ ಸಡಗರ ಮನೆಯನು ತುಂಬಿ
ಪ್ರಕೃತಿಯು ಮುದದಲಿ ಮೈತುಂಬಿ
ಬರುತಿದೆ ಹಬ್ಬಗಳ ಸಾಲು ಸಾಲು
ಮನೆಮಂದಿಯರೆಲ್ಲಇದರಲಿ ಪಾಲು
ಆಷಾಡದಲ್ಲಿ ಮುದುಡಿದ ಮನವು
ಶ್ರಾವಣದಲಿ ಗರಿಗೆದರುತ ನವಿಲು
ಮುದವನು ಕೊಡುತಿದೆ ಪ್ರಕೃತಿಯ ಚೆಲುವು
ಮೈ ಮನಕೆಲ್ಲಾ ತುಂಬುವುದು ಬಲವು
ಪಂಕಜಾ.ಕೆ.ಮುಡಿಪು
Comments
Post a Comment