ಹಾಸ್ಯ ಚಿತ್ರಕವನ ಸ್ಪರ್ಧೆಗಾಗಿ
ಸಂಸಾರದಲ್ಲಿ ಹಾಸ್ಯ
ಶೀರ್ಷಿಕೆ. .ತ್ರಿಶಂಕು
ಮೂರುಗಂಟು ಹಾಕಿ ನಿನ್ನ ಕಟ್ಟಿಕೊಂಡೆನಲ್ಲೇ
ತಾಟಗಿತ್ತಿಯಂತೆ ನೀನು ಯಾಕೆ ಇರುವೆ ನಲ್ಲೆ
ಸೆರಗು ಕಟ್ಟಿ ಸೌಟು ಹಿಡಿದು ನೀನು ಹೀಗೆ ನಿಂತರೆ
ನನ್ನ ಎದೆ ಏಕೋ ಏನೋ ನಿಲ್ಲಬಹುದು ಈಗಲೇ
ಕೋಪ ಬಿಟ್ಟು ಪ್ರೀತಿ ಮಾಡು ನನ್ನ ಒಲವೇ ನೀನೇ
ಬೇರೆಯಾರು ನನಗೆ ಇಲ್ಲ ನಿನ್ನ ಮೇಲಾಣೆ
ಗಡಿಗೆಯಂತ ನಿನ್ನ ಮುಖವು ಆ ಮೆಳ್ಳೆಗಣ್ಣು
ಭಯವೂ ನನ್ನ ಮುತ್ತಿಕೊಂಡು ಬಿದ್ದುಬಿಡುವೆ ನಿಲ್ಲೆ
ಕೈಯಲ್ಲೊಂದು ಸೌಟು ಹಿಡಿದು ನೀನು ಬಂದು ಬಿಟ್ಟರೆ
ನನ್ನ ಜೀವ ಹಾರಿ ಹೋಗಿ ತ್ರಿಶಂಕು ಸ್ಥಿತಿಯಾಗಿದೆ
ಕೋಪ ಬಿಟ್ಟು ಒಮ್ಮೆ ನೀನು ನಕ್ಕು ಬಿಟ್ಟೆಯಾದರೆ
ನಿನ್ನ ಆಜ್ಞೆಯನ್ನು ನಾನು ತಲೆಯಲ್ಲಿ ಹೊತ್ತು ಮಾಡುವೆ
ಪಂಕಜಾ.ಕೆ.ಮುಡಿಪು
Comments
Post a Comment