ದುಡುಕಿನ ಫಲ ನ್ಯಾನೊ ಕಥೆ
ಜೀವನ್ ಬಾಳಿನಲ್ಲಿ ತುಂಬಾ ಕಷ್ಟ ಅನುಭವಿಸಿದ್ದ ತಾನು ಉನ್ನತ ಅಧಿಕಾರಿಯಾಗಿ ಒಳ್ಳೆಯ ಹೆಸರು ಗಳಿಸಿದ್ದ. ಆತನಿಗೆ ಮುಂಗೋಪ ಜಾಸ್ತಿ ಅದೊಂದು ದಿನ ತನ್ನ ಕೈ ಕೆಳಗಿನ ಕೆಲಸಗಾರ ಮೋಹನ್ ಮೇಲೆ ಯಾವದೋ ಚಿಕ ಕಾರಣಕ್ಕೆ ಕೋಪದಿಂದ ಬಾಯಿಗೆ ಬಂದಂತೆ ಬೈದು ಬಿಟ್ಟ ಪರಿಣಾಮ ಮೋಹನ್ ಕೆಲಸ ಬಿಟ್ಟು ಹೊರಟುಹೋದ. ಪ್ರಾಮಾಣಿಕತೆಯಿಂದ ಚೆನ್ನಾಗಿ ಕೆಲಸಮಾಡುತ್ತಿದ್ದ ಮೋಹನ್ ಹೊರಟು ಹೋಗಿದ್ದು ಜೀವನ್ ನ ಒಂದು ಕೈ ಮುರಿದಂತಾಯಿತು.ತನ್ನ ದೂಡುಕಿನ ಫಲ ಈ ರೀತಿಯಾದುದು ತಿಳಿದು ಜೀವನ್ ನೊಂದುಕೊಂಡ .ಮುಂದೆಂದೂ ಆತ ಈ ರೀತಿ ದುಡುಕಿ ಮಾತಾಡುವುದು ಬಿಟ್ಟು ಬಿಟ್ಟ
ನೀತಿ..ಮಾತನಾಡುವಾಗ ಎಚ್ಚರ ಇರಬೇಕು
ಪಂಕಜಾ.ಕೆ.ಮುಡಿಪು
Comments
Post a Comment