ಖಿದ್ಮಾ ಪೌಂಡೇಶನ್ ಚಿತ್ರಕ್ಕೊಂದು ಕವನ ಸ್ಪರ್ಧೆಗಾಗಿ
ಮುತ್ತಿನ ಹಾರ
ಕಲೆಯ ಬಲೆಯದು
ಗಮನ ಸೆಳೆದಿದೆ
ರಸಿಕ ಕಂಗಳ ಸೆಳೆದಿದೆ
ಹಿಮದ ಮಣಿಯಲಿ
ಮಾಲೆ ಪೋಣಿಸಿ
ಪ್ರೇಮಗೀತೆಯ ಹಾಡಿದೆ
ಕುಶಲ ಕಲೆಗಾರನ
ಕಲೆಯ ಬಲೆಯಲಿ
ಅದ್ಬುತ ಸೃಷ್ಟಿಯ ಕಂಡಿದೆ
ಧರಣಿ ದೇವಿಗೆ
ಕೊರಳಹಾರವು
ವರುಣನೊಲವಿಗೆ ಸಾಕ್ಷಿಯು
ಹಬ್ಬಿ ನಿಂತಿದೆ ಹಸಿರು ಹಂದರ
ತಬ್ಬಿ ನಿಂತಿದೆ ಮಳೆ ಹನಿ
ಭೂದೇವಿಯ ಸೊಬಗು ಸೆಳೆದಿದೆ ಕಣ್ಣನು
ಜೇಡ ಕಟ್ಟಿದ ಬಲೆಯಲಿ
ಮಳೆ ನೀರಿನ ಹನಿಯಲಿ
ಅದ್ಬುತ ಕಲೆಯು ಅರಳಿ ನಗುತಿದೆ ನೋಡಿರಿ
ಧವಳಾದ್ರಿಯ ಸೊಬಗು ಹೆಚ್ಚಲು
ಮುತ್ತು ಮಣಿಗಳ ಮಾಲೆ ಪೋಣಿಸಿ
ವರುಣ ತೊಡಿಸಿದ ಒಲವಲಿ ಮುತ್ತಿನ ಮಾಲೆ
ಪಂಕಜಾ.ಕೆ.ಮುಡಿಪು
ಹೆಸರು...ಪಂಕಜಾ.ಕೆ
ವಿಳಾಸ...ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment