ಲಾಲಿ ಹಾಡು
ಸ್ನೇಹ ಸಂಗಮ ಸ್ಪರ್ಧೆಗಾಗಿ
20 ..7 2020
ಜೋಜೋ ಲಾಲಿ ಹಾಡುವೆ ನನಕಂದ
ಮಲಗು ಮಲಗೆನ್ನ ಮುದ್ದು ಕಂದ
ನನ್ನ ಬಾಳಿನ ಬಂಗಾರ ನೀನು
ಸಾಸಿರ ಕನಸಿನ ಸರದಾರ ನೀನು
ತೊಟ್ಟಿಲಲ್ಲಿ ಮಲಗಿರುವ ಶ್ರೀ ಹರಿಯೇ
ತೂಗುವೆ ರಂಗನ ಜೋ ಜೋ ಲಾಲಿ
ಬಾನಲ್ಲಿ ಹೊಳೆಯೊ ಸೂರ್ಯಪ್ಪ ಮಲಗಿದ
ಕತ್ತಲಾಯಿತು ನೋಡು ಇನ್ನು ಮಲಗು
ಕೈತುಂಬಾ ಕೆಲಸ ಕಾದೈತೆ ನನಗೆ
ಅಳದೆ ನೀನು ಮಲಗು ನನ ಕಂದ
ಜೋಗುಳ ಹಾಡುವೆ ಮಲಗು ಮಲಗು
ಹೊಳೆಯುವ ಚಂದಿರ ಬರುವನು ನೋಡು ಜೋ ಜೋ
ಪಂಕಜಾ.ಕೆ.ಮುಡಿಪು
Comments
Post a Comment