ನಮ್ಮ ಮನೆಯ ಬೆಕ್ಕು (ಶಿಶುಗೀತೆ)
ನಮ್ಮ ಮನೆಯಲೊಂದು ಪುಟ್ಟ ಬೆಕ್ಕು ಇರುವುದು
ಅಲ್ಲಿ ಇಲ್ಲಿ ತಿರುಗಿಕೊಂಡು ಕಾಲಕಳೆಯುವುದು
ಹಾಲು ಕುಡಿದು ಇಲಿಯ ಹಿಡಿದು ತಿನ್ನುವುದು
ಹಲ್ಲಿ ಜಿರಳೆ ಎಲ್ಲವನ್ನು ಹಿಡಿದು ಜಗಿಯುವುದು
ಶುಭ್ರಬಣ್ಣದಿಂದ ಅದು ಕಣ್ಣು ಸೆಳೆಯುವುದು
ಕಾಲು ಸುತ್ತ ತಿರುಗಿ ಮಿಯಾಮ್ ಎನ್ನುವುದು
ರಾತ್ರಿಯಲಿ ಹಾಸಿಗೆಯಲ್ಲಿ ಜತೆಗೆ ಮಲಗುವುದು
ಮೈಯ ಒರೆಸಿ ಮುದ್ದು ಮಾಡಲೆಂದು ಬಯಸುವುದು
ಅಪ್ಪನನ್ನು ಕಂದರದು ಓಡಿ ಹೋಗುವುದು
ನನ್ನ ಜತೆ ಮುದ್ದು ಮುದ್ದಾಗಿ ಆಟ ಆಡುವುದು
ಕೋಪ ಬಂದರೆ ಉಗುರಿನಿಂದ ಪರಚುತಿರುವುದು
ಅಟ್ಟಿದರೂ ಮತ್ತೆ ಬಂದು ಸುತ್ತಿಕೊಳ್ಳುವುದು
ಬಾಯಿ ಬಾರದ ಮೂಕ ಪ್ರಾಣಿ ಪಾಪ ಇರುವುದು
ತಿಂಡಿ ತಿನಿಸು ಎಲ್ಲದಕ್ಕೂ ಬಾಯಿ ಹಾಕುವುದು
ಮೀಸೆ ಆಡಿಸಿ ಕಣ್ಣು ಬಿಟ್ಟು ಬಾಯಿ ತೆರೆಯುವುದು
ಮಿಯಾಮ್ ಮಿಯಾಮ್ಎಂದು ಕೂಗುತಿರುವುದು
ಪಂಕಜಾ.ಕೆ.ಮುಡಿಪು
Comments
Post a Comment