ಸಿನೇಮಕ್ಕಾಗಿ ಹಾಡುಗಳು
1
ಒಲವಾಗಿದೆ ನನಗೆ / ನಿನ್ನ ಮೇಲೆ ಮನಸಾಗಿದೆ
ಹೇಳಲಿ ಹೇಗೆ ನಾ ತಿಳಿಯೇ ಓ ಚೆಲುವೆ
ನೂರೊಂದು ಆಸೆ ಮನವ ಕಾಡಿದೆ
ಈ ಉರಿಯ ನಾ ತಾಳೆನು/ ಒಲವಾಗಿದೆ /
ನಿನ್ನ ಕಂಡ ಕ್ಷಣವೇ ಮನ ಸೋತಿದೆ
ನಿನ್ನ ಆ ಕುಡಿ ನೋಟ ನನ್ನೆದೆಯ ಸೀಳಿದೆ
ದುಂಬಿ ಹೂವ ಜೇನ ಸವಿಯುವಂತೆ
ನಿನ್ನ ಒಲವ ಸವಿಯಬೇಕೆನಿಸಿದೆ/ಒಲವಾಗಿದೆ/
ನಿನ್ನ ನೆನಪಿನ ದೋಣಿಯಲಿ ತೇಲಿ ತೇಲಿ
ನಾ ಮೈ ಮರೆತೆ ನಿನ್ನ ಆ ತುಂಟಾಟಕೆ
ನಿನ್ನ ಒಂದೊಂದು ಭಂಗಿಯೂ ಮನಸೆಳೆದಿದೆ
ಕಣ ಕಣ ದಲೂ ನೀನೇ ತುಂಬಿರುವೆ /ಒಲವಾಗಿದೆ/
ಪಂಕಜಾ.ರಾಮಭಟ್ ಕಬ್ಬಿನಹಿತ್ಲು
Comments
Post a Comment