ಇಳೆಯ ಕನಸು
ಹೊಂಗನಸ ಕಾಣುತ್ತ ನಿಂತಿದ್ದೆ ಅಂದು
ನೀ ಬಂದು ತಬ್ಬಿ ಮುದ ತಂದೆ ಇಂದು
ಹೊಸ ಸೀರೆ ಉಟ್ಟಂತೆ ಮನವೆಲ್ಲಾ ತಂಪು
ಮನಸಿನಾಳದಲೆಲ್ಲಾ ಹೊಂಗನಸಿನ ಕಂಪು
ಹಸಿರು ಹೂವುಗಳ ಸೆರಗ ಹೊದ್ದಿರುವೆ
ನಿನ್ನ ಒಡನಾಟ ದಿ ಬದುಕು ಚಿಗುರಿದೆ
ಭೂರಮೆಯ ಸೌಂದರ್ಯ ಎದ್ದು ಕಂಡು
ನಿನ್ನಾಗಮನದಿಂದ ಬಲವು ಬಂದು
ಒಡಲೆಲ್ಲಾ ತುಂಬಿತು ಚಿಗುರು ಹೂವು
ಇರಬೇಕು ಮಾನವರಲಿ ಪ್ರಕೃತಿ ಒಲವು
ತುಂಬುತಿದೆ ಕವಿಮನಕೆ ಹುರುಪು
ಹಸಿರು ಕಾನನದಿ ನಲಿದಾಡುವ ಮನಸು
ಬೀಸುಗಾಳಿಯ ತಂಪು ಮನದಲ್ಲಿ ತುಂಬಿ
ಹಾರುತಿದೆ ಹಕ್ಕಿಯಂತೆ ಮನವು ತುಂಬಿ
ಪಂಕಜಾ ಕೆ ಮುಡಿಪು
Comments
Post a Comment