ಬೇರು ಬಳಗ ಸ್ಪರ್ಧೆಗಾಗಿ. ಚಿತ್ರ ಕವನ
ಚಿಣ್ಣರ ಆಟ
ಶಾಲೆಗೆ ಬಂದಿತು ರಜೆ
ಚಿಣ್ಣರಮನದಲಿ ತುಂಬಿತು ಹರುಷ
ಹೊರಟಿತು ದಂಡು ಬಯಲ ಕಡೆ
ಹಾರಿತು ಬಣ್ಣದ. ಗಾಳಿಪಟ
ಕುಣಿಯಿತು ಬಾನಲಿ ತಟ ಪಟ
ಆದಿದರೆಲ್ಲರು ಸೇರುತ ಆಟ
ಹೆಣ್ಣು ಗಂಡು ಬೇಧವು ಇಲ್ಲದೆ
ಆಡುತಲಿರುವರು ಬಯಲಿನಲಿ
ಹಬ್ಬಿತು ಎಲ್ಲೆಡೆ ಮಕ್ಕಳ ಕಲರವವು
ಗೋಲಿ ಬುಗರಿ ಚಿನ್ನಿದಾಂಡು
ಆಡುತ ಮೈ ಮರೆಯುವರು
ಮಕ್ಕಳ ಮೈ ಮನಕೆ ವ್ಯಾಯಾಮ
ಹಬ್ಬಿತು ಎಲ್ಲೆಡೆ ಕೊರೊನಾ ಮಾರಿ
ಎಲ್ಲರೂ ಕುಳಿತರು ಮನೆಯಲೇ ಬಂದಿ
ಆಟದ ಮಜವನು ಕಸಿಯಿತು ಮಾರಿ
ಏನಿದು ದೇವನ ಈ ಆಟ
ಕಳೆಯಲಿ ಬೇಗನೆ ರೋಗದ ಕಾಟ
ಮಕ್ಕಳು ಕುಣಿಯಲಿ ಬಯಲಿನಲಿ
ಪಂಕಜಾ ಕೆ.ಮುಡಿಪು
Comments
Post a Comment