ಖಿದ್ಮಾ ಪೌಂಡೇಶನ್ ಸ್ಪರ್ಧೆಗಾಗಿ
ದಾಂಪತ್ಯ ಗೀತೆ
ಒಲವೇ ಜೀವನ
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಕದ್ದೊಯ್ದೆ ನೀಬಂದು ಕನಸುಗಳ ಸೆಳೆದು
ಮನಸು ಮನಸುಗಳು ಕೂಡಿ ಗೆಲುವು
ಬೆಸುಗೆಯಾಯಿತು ನಮ್ಮಿಬ್ಬರ ಒಲವು
ಎರಡು ಜೀವ ಎರಡು ದೇಹವಾದರೂ
ಮನಸು ಒಂದಾಗಿ ಕೂಡಿಸಿದವರಾರು
ದಾಂಪತ್ಯದ ಬೆಸುಗೆಯಲಿ ನಾವಂದು ಬಂಧಿ
ಒಲವ ಹೀರುತ ನೀನಾದೆ ಮಧುಹೀರುವ ದುಂಬಿ
ಸಪ್ತಪದಿ ತುಳಿದು ನಾ ಬಂದೆ ಕನಸುಗಳ ತುಂಬಿ
ಯಾವ ಜನ್ಮದ ಮೈತ್ರಿಯೋ ನಾವಿಬ್ಬರು ಒಂದು
ಸುಖ ದುಃಖಗಳಲಿ ಜತೆಯಾಗುವ ಫಣ
ಬರಬಾರದೆಂದಿಗೂ ಪ್ರತಿಷ್ಠೆ ಎಂಬ ಹಣ
ಒಬ್ಬರ ಪ್ರೀತಿಗೆ ಇನ್ನೊಬ್ಬರು ಒಲಿಯುತ
ಬಾಳನು ಸವೆಸುವ ಜತೆಯಾಗಿ ನಗುತ
ಜನುಮ ಜನುಮದ ಅನುಬಂಧ
ಪ್ರೀತಿಯ ಸವಿಯುವ ಈ ಬಂದ
ಪಂಕಜಾ .ಕೆ .ಮುಡಿಪು
Comments
Post a Comment