ಕವಿ ಸಾಹಿತಿಗಳ ಜೀವಾಳ ಬಳಗದ ವಾರದ ಸ್ಪರ್ಧೆಗಾಗಿ ಚಿತ್ರ ಕವನ
ಮುಗ್ಧ ಮಕ್ಕಳು
ಮುಗ್ದ ಮಕ್ಕಳ ದಂಡ ಜತೆಯಲಿ
ಚೆಲುವೆ ಹೊರಟಳು ಬಾಳೆ ತೋಟಕೆ
ಬಾಳೆಹೂವಿನ ಮಕರಂದವ ಸವಿಯುವಾತುರದಿ
ಎತ್ತರೆತ್ತರ ಬೆಳೆದ ಬಾಳೆಯು
ಗೊನೆಯ ಹಾಕಿದ ಚಂದ ನೋಡುತ
ಮಕ್ಕಳೆಲ್ಲರು ಬೆರಗು ಕಣ್ಣಲಿ ತೋರಿ ನಿಂತಿಹರು
ಕೆಂಪು ಅಂಚಿನ ಕಪ್ಪು ಸೀರೆಯು
ಕೆಂಪು ರವಿಕೆಯ ಕುಸುಮ ಕೋಮಲೆ
ಕಾಲನೆತ್ತುತ ಹೂವ ಕೊಯ್ಯಲು ಕೈಯ ಚಾಚಿಹಳು
ಆಸೆ ತುಂಬಿದ ಬೆರಗು ಕಂಗಳು
ಅಚ್ಚರಿಯಲಿ ಅರಳಿ ನಿಂತಿವೆ
ಬಾಳೆ ಹಣ್ಣಿನ ಗೊನೆಯ ನೋಡುತ ಕಣ್ಣು ತುಂಬುವರು
ಬಾಲ್ಯ ಕಳೆದರು ಮುಗ್ದತೆ ಅಳಿಯದ
ಚೆಲುವೆ ನಗುತಲಿ ಬಾಲರೆಲ್ಲರ
ಜತೆಗೆ ಸೇರುತ ತೋಟ ಗುಡ್ಡೆಯ ಸುತ್ತಿ ಕುಣಿಯುವಳು
ಹಂಚಿ ಹಣ್ಣನು ಕೊಟ್ಟು ತಿನ್ನುತ
ಬಾಲರೆಲ್ಲರ ಜತೆಗೆ ನಲಿಯುವ
ಚೆಲುವೆ ಮೊಗದಲಿ ಖುಷಿಯು ತುಂಬಿಹುದು
ಪಂಕಜಾ.ಕೆ .ಮುಡಿಪು
Comments
Post a Comment