ನವಪರ್ವ ಬಳಗದ ಸ್ಪರ್ಧೆಗಾಗಿ
ವಿಷಯ..ಸಾಲುಮರದ ತಿಮ್ಮಕ್ಕ
ಪರಿಸರವಾದಿ
ಮಕ್ಕಳಿಲ್ಲದ ನೋವ ಕಳೆಯಲು
ನೆಟ್ಟು ಬೆಳೆಸಿದರಂದು ಗಿಡಗಳ
ಪರಿಸರ ರಕ್ಷಣೆಗೆ ಕಂಕಣವ ತೊಟ್ಟು
ಸಾಲು ಸಾಲು ಮರಗಳನು ನೆಟ್ಟು
ಕಷ್ಟಗಳ ಕಡೆಗಣಿಸಿ ನಡೆದಾಕೆ
ಹಲವು ಹತ್ತು ಪ್ರಶಸ್ತಿಗಳ ಪಡೆದಾಕೆ
ಫಲಾಪೇಕ್ಷೆಯಿಲ್ಲದೆ ನಿತ್ಯ ದುಡಿದಾಕೆ
ಪ್ರಕೃತಿ ಮಾತೆಯ ಬೆಳೆಸಿ ಪೋಷಿಸಿದಾಕೆ
ಅನಕ್ಷರಸ್ಥಳಾದರೂ ಪರಿಸರವಾದಿಯಾಗಿ
ಪರಿಸರ ಕಾಳಜಿಯನೇ ಮಂತ್ರವಾಗಿಸಿದಾಕೆ
ಬಡತನದ ಬದುಕಿನಲೂ ವೃಕ್ಷ ಪ್ರೀತಿಯ ಬೆಳೆಸಿ ಕೊಂಡಾಕೆ
ಸಾಲು ಮರದ ತಿಮ್ಮಕ್ಕನೆಂದೆ ಹೆಸರುವಾಸಿ ಯಾದಾಕೆ
ಸಾಲು ಮರದ ತಿಮ್ಮಕ್ಕನ ಸಾಧನೆಯ ತಿಳಿಸುತ
ರಸ್ತೆ ಇಕ್ಕೆಡೆಗಳಲೂ ತಲೆಯೆತ್ತಿ ನಿಂತಿದೆ ಮರಗಳು
ಪರಿಸರ ಉಳಿಸುವ ಕಾರ್ಯಕ್ಕೆಸ್ಪೂರ್ತಿ ಈಕೆ
ನಿಸ್ವಾರ್ಥ ಸೇವೆಯ ಜಗಕೆ ಸಾರಿದ ಮಾತೇ
ಈಕೆಯ ಹಾದಿಯಲಿ ನಾವೆಲ್ಲ ನಡೆಯೋಣ
ಮರಗಿಡ ಗಳ ಮನೆ ಸುತ್ತಲೂ ನೆಟ್ಟು ಬೆಳೆಸೋಣ
ಮಳೆನೀರ ಇಂಗಿಸುತ ಪ್ರಕೃತಿಯನು ರಕ್ಷಿಸೋಣ
ಪರಿಸರ ಸಂರಕ್ಷಣೆಯ ಮಾಡುತ ಮನುಕುಲ ಉಳಿಸೋಣ
ಪಂಕಜಾ.ಕೆ ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment