ಕವಿ ಸಾಹಿತಿಗಳ ಜೀವಾಳ ಚಿತ್ರ ಕಥಾ ಸ್ಪರ್ಧೆಗಾಗಿ
ಕಲಾಕಾರ
ಶಿವಪ್ಪ ಒಬ್ಬ ಅದ್ಬುತ ಶಿಲ್ಪಿ.ಕಲ್ಲಿನಿಂದ ವಿವಿಧ ಶಿಲ್ಪಕಲೆಗಳನ್ನು ಮಾಡುವುದರಲ್ಲಿ ಸಿದ್ದಹಸ್ತರೆಂದು ಹೆಸರುವಾಸಿಯಾಗಿದ್ದರು. ಕಲ್ಲಿನಲ್ಲಿ ಅನೇಕ ದೇವರ ಮೂರ್ತಿ ಗಳನ್ನು ಆತ ಕೆತ್ತಿದ್ದ . ಭಾರತದ ಹೆಚ್ಚಿನ ದೇವಸ್ಥಾನಗಳ ಶಿಲ್ಪಗಳು ಆತನ ಕೈ ಚಳಕದಿಂದ ನಿರ್ಮಾಣವಾಗಿದ್ದುದಾಗಿತ್ತು. ಬಾಲ್ಯದಿಂದಲೂ ಬಿಡದೆ ಮಾಡಿದ ಕಾಯಕವಾಗಿದ್ದರೂ .ಪ್ರಾಯಸಂದ ಆತನಿಗೆ ಇಂದು ಅದು ಅನಿವಾರ್ಯವಾಗಿತ್ತು .
. ತನ್ನ ಒಬ್ಬನೇ ಮಗ ಹಾಗೂ ಸೊಸೆಯನ್ನು ಒಂದೇ ದಿನದಲ್ಲಿ ಕಳೆದುಕೊಂಡ ಶಿವಪ್ಪನಿಗೆ ಮೊಮ್ಮಗಳು ಶ್ರುತಿಯೇ ಈಗ ಬಾಳಿನ ಬೆಳಕು .ಅವಳನ್ನು ದೂರದ ಹಾಸ್ಟೆಲ್ ನಲ್ಲಿ ಬಿಟ್ಟು ವಿದ್ಯೆಕಲಿಸುತ್ತಿದ್ದ ಶಿವಪ್ಪನಿಗೆ ತನ್ನ ನಂತರ ತನ್ನ ಕುಲಕಸುಬನ್ನು ಮುಂದುವರಿಸಲು ಯಾರೂ ಇಲ್ಲವೆನ್ನುವ ಚಿಂತೆಯಿದ್ದರೂ ಮೊಮ್ಮಗಳ ನಗುಮುಖವನ್ನು ನೋಡಿ ತನ್ನ ದುಃಖವನ್ನು ಮರೆಯುತ್ತಿದ್ದ.
ಆ ದಿನ ಮೊಮ್ಮಗಳು ಓದು ಮುಗಿಸಿ ಅಜ್ಜನ ಮನೆಗೆ ಬಂದಿದ್ದಳು.ಅಜ್ಜನ ಕೆಲಸವನ್ನು ನೋಡುತ್ತಾ ಅಜ್ಜನಿಗೆ ತನ್ನ ಕಾಲೇಜಿನ ಅನುಭವಗಳನ್ನು ರಸವತ್ತಾಗಿ ಹೇಳುತ್ತಾ ನಗುತ್ತಿದ್ದ ಅವಳನ್ನು ಕಂಡು ಶಿವಪ್ಪ ತನ್ನ ಕಾಯಕವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ
ಮೊಮ್ಮಗಳಿಗೆ ಆದಷ್ಟು ಬೇಗ ಒಂದು ದಾರಿ ಮಾಡಬೇಕು ಅನ್ನುವ ಚಿಂತೆ ಅವನದಾದರೆ ಮೊಮ್ಮಗಳು ರಶ್ಮಿಗೆ ತಾನು ಆದಷ್ಟು ಬೇಗ ಕೆಲಸಕ್ಕೆ ಸೇರಿ ಅಜ್ಜನನ್ನು ದುಡಿಮೆಯಿಂದ ಬಿಡಿಸಿ ವೃದ್ಧಾಪ್ಯವನ್ನು ಆತನು ಆರಾಮವಾಗಿ ಕಳೆಯುವಂತೆ ಮಾಡಬೇಕು ತಾನು ಅವನನ್ನು ಪ್ರೀತಿಯಿಂದ ಕಾಣಬೇಕು ಎನ್ನುವ ಯೋಚನೆಯಾಗಿತ್ತು .
ಪಂಕಜಾ.ಕೆ.ಮುಡಿಪು
Comments
Post a Comment