ಚಿತ್ರಕ್ಕೊಂದು ವಿಮರ್ಶೆ ವಿಪರ್ಯಾಸ ಕಂಡ ಅಳುವ ಗಮನವಿಲ್ಲದೆ ಮೊಬೈಲ್ ನಲ್ಲಿ ಮಗ್ನವಾಗಿದ್ದು ಹಾಲಿನ ಬಾಟಲ್ ಹಿಂದೆ ಚಾಚಿ ಮೊಬೈಲ್ ನಲ್ಲಿ ಮುಳುಗಿದ ಚಿತ್ರ ಮಗು ಮಂಚದಿಂದ ಕೆಳಗೆ ಬಿದ್ದು ಅಳುುತ್ತಿದೆ
ಕವಿಶೈಲ ಸ್ಪರ್ಧೆಗಾಗಿ
ಚಿತ್ರಕ್ಕೊಂದು ವಿಮರ್ಶೆ
ವಿಪರ್ಯಾಸ
ಇಂದಿನ ದಿನಗಳಲ್ಲಿ ಮೊಬೈಲ್ ಒಂದು ಅನಿವಾರ್ಯ ವಸ್ತುವಾಗಿದೆ ..ಲಾಕ್ ಡೌನ್ ನಿಂದಾಗಿ ಮಕ್ಕಳ ಪಾಠಗಳು ಒನ್ಲೈನ್ ನಲ್ಲಿ ಆದ್ದರಿಂದ ಮೊಬೈಲ್ ಬಳಕೆ ಮಕ್ಕಳಿಗೂ ಅಗತ್ಯವಾಗಿದೆ. ಪ್ರಸ್ತುತ ಚಿತ್ರದಲ್ಲಿ ಮೊಬೈಲ್ ಗೀಳಿನಲ್ಲಿ ಮೈಮರೆತ ತಾಯಿ ತನ್ನ ಮಗು ಮಂಚದಿಂದ ಕೆಳಗೆ ಬಿದ್ದು ಅಳುತ್ತಿರುವುದು ತಿಳಿಯದೆ ಮೊಬೈಲ್ ನಲ್ಲೆ ಮಗ್ನಳಾಗಿದ್ಫು ಬಾಟಲ್ ನ್ನು ಹಿಡಿದು ಕುಳಿತಿರುವುದು ಕಂಡುಬರುತ್ತದೆ . ಹಿಂದಿನ ಕಾಲದಲ್ಲಿ ಮಗು, ಅದರ ಆಟಪಾಠ ,ಬೆಳವಣಿಗೆಗಳ ಲ್ಲಿ ಸಮಯ ಕಳೆಯುತ್ತಿದ್ದಾಕೆ ಇಂದು ಮಗುವಿನ ಅಳುವನ್ನು ಕೇಳಲಾರದಷ್ಟು ಮೊಬೈಲ್ ನಲ್ಲಿ ತಲ್ಲೀನಳಾಗಿರುವುದು ವಿಪರ್ಯಾಸ . ಯಾವುದೇ ವಸ್ತುವಿನ ಅತಿಯಾದ ಬಳಕೆ ವ್ಯಕ್ತಿ ಅದಕ್ಕೆ ದಾಸನಾಗುವಂತೆ ಮಾಡುತ್ತದೆ ಮೊಬೈಲ್ ಅತಿಯಾದ ಬಳಕೆಯ ದುಷ್ಪರಿಣಾಮ ತಾಯಿ ಮಗು ಹಾಗೂ ಕುಟುಂಬದ ಆರೋಗ್ಯಕ್ಕೂ ಅಪಾಯಕಾರಿ
ಪಂಕಜಾ.ಕೆ.ಮುಡಿಪು
Comments
Post a Comment