ಸಿನೇಮಕ್ಕಾಗಿ ಹಾಡು
2. Duet
ಗಂಡು..ನಿನ್ನ ನೋಡಿ ನನಗೆ ಆಸೆ ಹೆಚ್ಗಾಗಿದೆ
ಹೆಣ್ಣು ಓಹೋ ..ಹೋ . ಮನಸು ಹುಚ್ಚಾಗಿದೆ
ಗಂಡು. ನಾ ತಾಳೆಲಾರೆ ಈ ಬೇಗೆಯ
ಮೈ ಮನಸು ಆಸೆಯ ಕಡಲಾಗಿದೆ
ಹೆಣ್ಣು..ಆಹಾಹಾ ಆಹಾಹಾ ನನ್ನ ಮನಸು ನಿನ್ನಲ್ಲೇ ನೆಟ್ಟಿದೆ ಒಲವಾಗಿದೆ ನಿನ್ನ ಮೇಲೆ ಒಲವಾಗಿದೆ
ಗಂಡು..ನಿನ್ನಂಡಕೆ ನಾ. ಸೋತೆನು. ನಿನ್ನ ಕುಡಿನೋಟಕೆ ಮನಸೋತೆನು
ಹೆಣ್ಣು..ಓಹೋಹೋ ಯಾವೂರ ಗಂಡು ನೀನು
ಕಣ್ಣೋಟದೆ ಕಾಡುವೆಯೇನು
ಮನಸು ಹುಚ್ಚಾಗಿದೆ ನನ್ನ ಮನಸು ಹುಚ್ಚಾಗಿದೆ
ಗಂಡು ..ನನ್ನ ಮೈಯೆಲ್ಲ ಬಿಸಿಯಾಗಿದೆ
ಕನಸು ಕಾಡಿ ನಿನ್ನ ಮೇಲೆ ಒಲವಾಗಿದೆ
ಗಂಡು .ಹೆಣ್ಣು..ನಾವಿಬ್ಬರೊಂದಾಗುವ
ಈ ಭೂಮಿ ಈ ಬಾನು ನಮದಾಗಿದೆ
ಚಂದಿರನು ಮರೆಯಾಗಿ ಈ ರಾತ್ರಿ ನಮದಾಗಿದೆ
ಒಲವೆಲ್ಲಾ ನಮದಾಗಿದೆ
ಪಂಕಜಾರಾಮಭಟ್ ಕಬ್ಬಿನಹಿತ್ಲು
Comments
Post a Comment