ಕಾವ್ಯಾ ಕೂಟ ಸ್ಪರ್ಧೆಗಾಗಿ
ನೆನಪಿನ ದೋಣಿ
ಮೌನದಲಿ ಮಾತೊಂದು ಮುತ್ತಾಗಿ ಬಂದಂತೆ
ಸವಿಯಾದ ನೆನಪಲ್ಲಿ ನಾ ಇಂದು ತೇಲಿದೆ
ನಾನ್ನಾಸೆ ನೀನಾದೆ ನಿನ್ನಾಸೆ ನಾನು
ಒಲವಿಂದು ಹೂವಾಗಿ ಪರಿಮಳ ವ ಬೀರಿದೆ
ಬಾಲ್ಯದ ಕನಸುಗಳು ನನಸಾದ ಹೊತ್ತಲ್ಲಿ
ಮೈಮನಕೆ ಮುದ ತಂದು ಸೆಳೆದೊಯ್ದೆ ನೀನು
ಹಿತವಾದ ಭಾವದಲಿ ಮನವನು ಸೆಳೆಯುತ
ಮೈಮರೆತ ಆ ಕ್ಷಣವು ಮರೆಯಲೇಗೆ ಚೆಲುವೇ
ಬೆಳದಿಂಗಳ ರಾತ್ರಿಯಲಿ ತಾರೆಗಳ ಎಣಿಸುತ್ತ
ನಿನ್ನ ಮಡಿಲಲ್ಲಿ ಮಲಗಿ ಮಗುವಾದೆ ನಾನು
ನನ್ನೆದೆಯ ಭಾವನೆಗೆ ನಿನ್ನೊಲವ ಭಾವ ಕೂಡಿ
ಸಪ್ತಸ್ವರಗಳ ಮೇಳೈಸಿ. ಮನ ತಣಿಸಿತಲ್ಲ
ಪಂಕಜಾ.ಕೆ. ಮುಡಿಪು
Comments
Post a Comment