ನವಪರ್ವ ಬಳಗದ ಸ್ಪರ್ಧೆಗಾಗಿ
ಕಲ್ಪನೆಯ ಕುದುರೆ
ಕಲ್ಪನೆಯ ಕುದುರೆಯಿದು
ಓಡುತಿದೆ ವೇಗದಲಿ
ಸರ ಸರನೆ ಸರಿಯುತ ಮನದಾಳದಿ
ಮನದಾಳದ ಭಾವವದು
ಕಲ್ಪನೆಯಲಿ ಮಿಂಚಾಗಿ
ತನುವನು ತಬ್ಬುತ ಮೆರೆದಾಡಿದೆ
ದೂರದಾ ಬಯಲಲಿ
ಕುಣಿಯುತಿರುವ ನವಿಲೊಂದು
ಕಲ್ಪನೆಗಳ ಗರಿಗೆದರಿ ಹರಡಿಸುತಿದೆ
ಕಲ್ಪನಾ ಲೋಕದಲಿ
ಮುಳುಗಿರಲು ಮನದಲಿ
ಸಂತಸದ ಅಲೆಗಳು ಹುಚ್ಚೆದ್ದಿದೆ
ಕನಸಿನ ಲೋಕದಲಿ
ತೇಲಾಡುತಿರಲು
ವಾಸ್ತವದ ಅರಿವಿಲ್ಲದ ಚೆಲುಕನಸದು
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment