ಗಜಲ್
ನೀಜತೆಯಲಿರಲು ಮನಸ್ಸು ನವಿಲಾಗಿದೆ ಸಖ
ನಿನ್ನೊಡನಾಟವು ಅನುದಿನವೂ ಬೇಕಾಗಿದೆ ಸಖ
ಕಷ್ಟ ನಷ್ಟಗಳೇನು ಬಂದರೂ ಹೆದರಲಾರೆ ನಾನು
ನಿನ್ನೊಲವಿನಾಸರೆಯಿರಲು ಭಯವೆಲ್ಲಿದೆ ಸಖ
ಗಾಳಿಗೊಡ್ಡಿದ ಸೊಡರಿನಂತಾಗದಿರಲಿ ಜೀವನ
ಇಬ್ಬರ ಮಧ್ಯೆ ಎದ್ದಿರುವ ಗೋಡೆ ಕೆಡವಿದೆ ಸಖ
ಪಕ್ಷಿಗಳೆಲ್ಲಾ ಎಷ್ಟು ಚೆನ್ನಾಗಿ ಕೂಡಿ ಬಾಳುತಿವೆ
ಅವರಂತೆ ಖುಷಿಯಿಂದ ಇರಬೇಕಾಗಿದೆ ಸಖ
ನಿನಗಾಗಿ ಹುಟ್ಟಿಬೆಳೆದ ಮನೆಬಿಟ್ಟು ಬಂದಿರುವೆ
ಪಂಕಜಾಕ್ಷಿಯ ಬಾಳು ನಿನ್ನಿಂದ ಬೆಳಗಿದೆ ಸಖ
ಪಂಕಜಾ.ಕೆ. ಮುಡಿಪು
Comments
Post a Comment