ಕರಾಳ ರಾತ್ರಿ
ಸಮರ್ಪಣೆ..ಸಾವಿತ್ರಿ ಬಾಯಿ ಪುಲೆ
ಶೀರ್ಷಿಕೆ..ಮಾಂತ್ರಿಕ ಮಹಿಳೆ
ಅಕ್ಷರ ಕ್ರಾಂತಿಯ ಮಾಂತ್ರಿಕ ಮಹಿಳೆ
ಹೆಣ್ಣು ಮಕ್ಕಳ ಶಿಕ್ಷಣಕೆ ಒತ್ತು ಕೊಟ್ಟಾಕೆ
ಕರಾಳ ರಾತ್ರಿಯ ಇತಿಹಾಸವ ಬದಲಿಸಿದಾಕೆ
ಭಾರತದ ಮೊದಲ ಮಹಿಳಾ ಶಿಕ್ಷಕಿಯೀಕೆ
ಬಾಲ್ಯ ವಿವಾಹದಿ ಜೊತೆಯಾದ ಜೊತೆಗಾರ
ಕಲಿಸಿದರು ಅಕ್ಷರವನು ಸಾವಿತ್ರಿಗೆ
ಶಿಕ್ಷಕರ ತರಬೇತಿ ಪಡೆಯುತಲಿ
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತೆರೆದರು ಶಾಲೆ
ಅನಿಷ್ಟ ಪದ್ಧತಿಗಳ ನಿರ್ಮೂಲನಕೆ
ಟೊಂಕ ಕಟ್ಟುತ ದುಡಿದಾಕೆ
ದಲಿತರ ಏಳಿಗೆ ಬಯಸುತ
ಸಮಾನತೆಯ ತತ್ವವ ಸಾರಿದಾಕೆ
ಪಂಕಜಾ.ಕೆ. ಮುಡಿಪು
Comments
Post a Comment