Skip to main content

ರಾಯಚೂರು ಘಟಕದ ಸ್ಪರ್ಧೆ

[30/8/2020, 7:57 PM] pankajarambhat: ಗುರುಕುಲ ರಾಯಚೂರು ಘಟಕ ಬಾನುವಾರ ದ ಚಿತ್ರಕವನ ಸ್ಪರ್ಧೆಗಾಗಿ

ಜಾನಪದ ಗೀತೆ ಸ್ಪರ್ಧೆಗಾಗಿ

 ಶೀರ್ಷಿಕೆ ..ನವಿಲು ಕುಣಿದೈತೆ
 
 ಬಾನಲ್ಲಿ  ಕಪ್ಪನೆ ಮುಗಿಲು
 ಕಟೈತೆ  /ನೋಡವ್ವ 
 ಮಳೆ ಬರೋ ಸೂಚನೆ  ಕಾಣುತೈತೆ

ಊರಿನ ಬಯಲಾಗ
ನವಿಲೊಂದು ಬಂದೈತೆ /ನೋಡವ್ವ
ಬಿಂಕದಿ ಬಯಲಾಗ ತಿರುಗತೈತೆ

ಬಣ್ಣದ ನವಿಲು ಗರಿಬಿಚ್ಚಿ
ಕುಣಿದೈತೆ/ನೋಡವ್ವ
ಮನಸಿಗೆ ಸಂತೋಷ ಕೊಡುತೈತೆ

ಮೈತುಂಬಾ ಕಣ್ಣು ಇರುತೈತೆ
ಮೈಯಾಗ /ನೋಡವ್ವ
ನಾಟ್ಯ ಮಯೂರಿ ತರ ಕಾಂತೈತೆ

ನಾಟ್ಯವಾಡುತ್ತ ಸೆಳೆದೈತೆ
ತನ್ನಾಕೆಯ ಪ್ರೀತಿಯ/ನೋಡವ್ವ
ಎಸೊಂದು ಚಂದಾಗೆ ಕುಣಿತೈತೆ

ಗರಿಗಳ ಹರಡುತ್ತ
ಕುಣಿಯೋದು /ನೋಡವ್ವ
ಸೌಂದರ್ಯ ಮೈಯಾಗೆ ತುಂಬೈಯ್ತೆ

ನಮ್ಮೂರ ಬಯಲಾಗೆ
ಬಿಂಕದಿ ಕುಣಿದೈತೆ
ತನ್ನಿನಿಯಳ ಒಲಿಸಲಿಕ್ಕೆ ಕಾದೈತೆ

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶ ಕೃಪಾ.ಮುಡಿಪು.ಅಂಚೆ. ಕುರ್ನಾಡು.ದ.ಕ.574153
[4/9/2020, 7:34 PM] pankajarambhat: ನನ್ನ ಜಾನಪದ ಶೈಲಿ ಕವಿತೆಯನ್ನು ಉತ್ತಮವೆಂದು.ಪರಿಗಣಿಸಿದ  ಸ್ಪರ್ಧೆಯ ಅಯೋಜಕರಿಗೆ ನಿರ್ವಾಹಕರಿಗೆ ಹಾಗೂ ತೀರ್ಪುಗಾರರಿಗೆ ತುಂಬು ಹೃದಯದ ಧನ್ಯವಾದಗಳು🙏🙏 ಸಹವಿಜೇತರಿಗೆ ಅಭಿನಂದನೆಗಳು💐💐
[6/9/2020, 5:57 PM] pankajarambhat: ಗುರುಕುಲ ಕಲಾ ಪ್ರತಿಷ್ಠಾನ ರಾಯಚೂರು ಜಿಲ್ಲಾ ಘಟಕದ  ಕಿರು  ಲೇಖನ ಸ್ಪರ್ಧೆಗಾಗಿ

ವಿಷಯ..ಶಿಕ್ಷಕ ವಿದ್ಯಾರ್ಥಿ ಬದುಕಿನ ನಂದಾದೀಪ

  ಶೀರ್ಷಿಕೆ...ಕಗ್ಗಲ್ಲನ್ನು ಕೆತ್ತುವ ಶಿಲ್ಪಿ
  
ಒಂದು ದೇಶದ  ಜನತೆ ವಿದ್ಯಾವಂತರಾದರೆ ಮಾತ್ರ ಅದು ಅಭಿವೃದ್ಧಿ ಹೊಂದಲು ಸಾಧ್ಯ. ಜನತೆ ವಿದ್ಯಾವಂತರಾಗಲು ಬಾಲ್ಯದಲ್ಲಿಯೇ ಅದಕ್ಕೆ ಅಡಿಪಾಯ ಹಾಕಬೇಕು.ಒಂದು ಕಗ್ಗಲ್ಲನ್ನು ಶಿಲ್ಪಿಯಾಗಿಸುವವನು ಶಿಲ್ಪಿಯಾದರೆ ಬಾಲಕರೆಂಬ ಕಗ್ಗಲ್ಲನ್ನು  ನಾಳಿನ ಸತ್ಪ್ರಜೆಯನ್ನಾಗಿ ರೂಪಿಸುವವರು ಶಿಕ್ಷಕರು. ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು  ಗುರುತಿಸಿ ಹೊರಗೆಳೆದು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ರೂವಾರಿಗಳೇ ಶಿಕ್ಷಕರು.ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಜ್ಞಾನದಾಹವನ್ನು ಹೆಚ್ಚಿಸಿ ಅವರು ತಮ್ಮಿಂದ ತಾನೇ ಜ್ಞಾನಾರ್ಜನೆ ಗಳಿಸಿಕೊಳ್ಳುವಂತೆ ಮಾಡುತ್ತಾನೆ.
                           ಮಕ್ಕಳಲ್ಲಿರುವ ಸುಪ್ತ ಚೈತನ್ಯವನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಬೇಕಾದುದು ಶಿಕ್ಷಕನ ಕರ್ತವ್ಯ. ಮಕ್ಕಳ ಶಾರೀರಿಕ ಮಾನಸಿಕ ಬೌದ್ಧಿಕ ಸಾಂಸ್ಕೃತಿಕ ಚಟುವಟಿಕೆಗಳು  ಇತ್ಯಾದಿ ಸರ್ವತೋಮುಖ ಬೆಳವಣಿಗೆ ಮಾಡುವುದು ಕೂಡ ಶಿಕ್ಷಕನ ಕರ್ತವ್ಯ ವಾಗಿದೆ.
                           ಶಾಲೆಗಳೆಂದರೆ   ಭಾವೀಭಾರತದ ನಿರ್ಮಾಣ ಮಾಡುವ ಒಂದು ಕಮ್ಮಟವಿದ್ದಂತೆ. ಶಿಕ್ಷಕರು ನಾಳಿನ ನಾಗರಿಕರನ್ನು ತಯಾರಿಸುವ ವಿದ್ಯಾ ಶಿಲ್ಪಿಗಳೆಂದರೆ ತಪ್ಪಿಲ್ಲ. ಇಂತಹ ಭವ್ಯ ಹೊಣೆ ಹೊತ್ತಿರುವ ಶಿಕ್ಷಕನ ಜೀವನ ಪ್ರಾಮಾಣಿಕತೆಯಿಂದ ಕೂಡಿರಬೇಕು.ಜವಾಬ್ದಾರಿಯಿಂದ ತನ್ನ ಕರ್ತವ್ಯ ನಿರ್ವಹಿಸುವ ಶಿಕ್ಷಕ  ನಿಜಕ್ಕೂ ದೇವತಾ ಸ್ವರೂಪಿಯೇ ಆಗಿದ್ದಾನೆ. ದೇಶದ ಭವಿಷ್ಯ ಇಂತಹ ಆದರ್ಶ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳನ್ನು ತನ್ನೆಡೆಗೆ ಆಕರ್ಷಿಸುವ ಕಲೆ ಶಿಕ್ಷಕನಿಗೆ ಗೊತ್ತಿರಬೇಕು.ಒಳ್ಳೆಯದಕ್ಕೆ ಬೆನ್ನು ತಟ್ಟಿ ಉತ್ತೇಜನ ಕೊಟ್ಟು ಅಭ್ಯಾಸ ಮಾಡಲು ಬಂದ ವಿದ್ಯಾರ್ಥಿಗಳ  ಭವಿಷ್ಯ ಜೀವನವು ಭವ್ಯವಾಗುವಂತೆ ಮಾಡಬೇಕು .ಅವರ ವ್ಯಕ್ತಿತ್ವ ರೂಪಿಸುವಲ್ಲಿ ಮನಸ್ಸು ತೊಡಗಬೇಕು. ಮನುಷ್ಯನ ಬದುಕಿನಲ್ಲಿ ಅರಿವಿನ ಮೊದಲ ಕಿಡಿಯನ್ನು  ಹಚ್ಚಿ ಮುನ್ನಡೆಸುವ ಮಹಾನುಭಾವರೇ ಶಿಕ್ಷಕರು.  ವಿದ್ಯಾರ್ಥಿ ಎಂಬ ಕಪ್ಪು ಹಲಗೆಯ ಮೇಲೆ ಅರಿವು ಎಂಬ  ಅಕ್ಷರಗಳನ್ನು ಮೂಡಿಸುತ್ತಾ, ಮುನ್ನಡೆಯಲು  ಪ್ರೇರಣಾಶಕ್ತಿ ಶಿಕ್ಷಕನಾಗಿದ್ದಾನೆ. ತನ್ನನ್ನು ನಂಬಿ ಬರುವ ವಿದ್ಯಾರ್ಥಿಯ ಜ್ಞಾನದ ಹಸಿವನ್ನು  ತಣಿಸಿ  ಅವರನ್ನು ಸರಿ  ದಾರಿಗೆ ಕರೆದೊಯ್ಯುವ ಶಿಕ್ಷಕರು ವಿದ್ಯಾರ್ಥಿ ಬದುಕಿನ ನಂದಾದೀಪವೇ ಆಗಿದ್ದಾರೆ.
                           
                           ಪಂಕಜಾ.ಕೆ. ಮುಡಿಪು.
                           ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ,ಶ್ರೀ ಗಣೇಶ ಕೃಪಾ .ಮುಡಿಪು  ಅಂಚೆ...ಕುರ್ನಾಡು .ದ.ಕ.574153
[11/9/2020, 5:36 PM] pankajarambhat: ನನ್ನ  ಕಿರು ಪ್ರಭಂದ ಲೇಖನವು ಉತ್ತಮ ಸ್ಥಾನ ಪಡೆದುದು ಖುಷಿ ಆಯಿತು ನಿರ್ವಾಹಕರಿಗೆ ಅಯೋಜಕರಿಗೆ ಹಾಗೂ ತೀರ್ಪುಗಾರ ರಿಗೆ ಹೃತ್ಪೂರ್ವಕ ಧನ್ಯವಾದಗಳು🙏🙏🙏
[13/9/2020, 3:07 PM] pankajarambhat: ಗುರುಕುಲಾ ಕಲಾ ಪ್ರತಿಷ್ಠಾನ   ಜಿಲ್ಲಾ ಘಟಕ ರಾಯಚೂರು

 ವಾರಕ್ಕೊಂದು ಸ್ಪರ್ಧೆ  13..09 2020

ಹಾಯ್ಕು ರಚನಾ ಸ್ಪರ್ಧೆಗಾಗಿ

ಹಾಯ್ಕು..1 ಹಸಿರು

ಹಸಿರ ಸಿರಿ
ಉಳಿಸಬೇಕದನು
ಉಸಿರಿಗಾಗಿ

ಹಾಯ್ಕು 2..ಔಷಧ

ಪ್ರೀತಿಯಲಿದೆ
ನೋವು ನಿವಾರಿಸುವ
ಔಷಧವೊಂದು

ಹಾಯ್ಕು 3..ಹೂವು

ಅರಳಿದ ಹೂ
ಪ್ರೀತಿಗೆ ಹಂಬಲಿಸಿ
ಬಾಡಿ ಹೋಯಿತು

ಹಾಯ್ಕು. 4..ನೀರು

ನೀರು ಉಳಿಸಿ 
ಪರಿಸರ ರಕ್ಷಿಸಿ
ಜೀವ ಉಳಿಸಿ

ಹಾಯ್ಕು.5...ಚೈತ್ರ

ಚೈತ್ರ ಬರಲು
ತುಂಬಿತು ಚಿಗುರೆಲೆ
ಮನಕೆ ತಂಪು

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ .ಪೋಸ್ಟ್.ಮಾಸ್ಟರ್
ಶ್ರೀ ಗಣೇಶ ಕೃಪಾ ಮುಡಿಪು.
ಅಂಚೆ..ಕುರ್ನಾಡು.ದ.ಕ.574153
[18/9/2020, 8:55 PM] pankajarambhat: ನನ್ನ ಹಾಯ್ಕುಗಳನ್ನು ಉತ್ತಮವೆಂದು ಪರಿಗಣಿಸಿ ಪ್ರೋತ್ಸಾಹಿಸಿದ ಬಳಗದ ನಿರ್ವಾಹಕರಿಗೆ   ಅಯೋಜಕರಿಗೆ ಹಾಗೂ ತೀರ್ಪುಗಾರರಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏 ಸಹವಿಜೇತರಿಗೆ ಅಭಿನಂದನೆಗಳು💐💐
[20/9/2020, 6:40 PM] pankajarambhat: ಗುರುಕುಲಾ ಕಲಾ ಪ್ರತಿಷ್ಠಾನ
ಜಿಲ್ಲಾ ಘಟಕ ರಾಯಚೂರು
ವಾರಕ್ಕೊಂದು ಸ್ಪರ್ಧೆಗಾಗಿ

ಗಾದೆ ಮಾತು ವಿಸ್ತರಣೆ ಸ್ಪರ್ಧೆಗಾಗಿ
20.09.2020
 ದತ್ತ. ಗಾದೆ..ಸತ್ಯಕ್ಕೆ ಸಾವಿಲ್ಲ  ಸುಳ್ಳಿಗೆ ಸುಖವಿಲ್ಲ
 
ಗಾದೆ ಎನ್ನುವುದು ಹಿಂದಿನ ಕಾಲದಿಂದಲೂ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ.ಗಾದೆ ಎನ್ನುವುದು ವೇದಕ್ಕೆ ಸಮಾನ. ಗಾದೆ ಸುಳ್ಳಾದರೂ ವೇದ ಸುಳ್ಳಾಗದು ಎನ್ನುವುದು ಹಿಂದಿನಿಂದಲೂ  ಪ್ರಚಲಿತದಲ್ಲಿದೆ. ಗಾದೆಗಳು ಆಕಾರದಲ್ಲಿ ಚಿಕ್ಕದಾದರೂ,ಅರ್ಥದಲ್ಲಿ ಅಗಾಧವಾಗಿದೆ.
                 ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎನ್ನುವ ಗಾದೆ ಒಂದು ಜನಪ್ರಿಯ ಗಾದೆಯಾಗಿದೆ.ಇದರ ಅರ್ಥವೇನೆಂದರೆ ,ಸತ್ಯ ಯಾವಾಗಲೂ ಜೀವಂತವಾಗಿರುತ್ತದೆ. ಸುಳ್ಳು ಎನ್ನುವುದು  ಎಂದಿಗೂ ಸುಖ ಕೊಡಲಾರದು ಎನ್ನುವುದಾಗಿರುತ್ತದೆ.ಸತ್ಯವಂತನಾದವನನ್ನು ಜಗತ್ತು ಮೆಚ್ಚುತ್ತದೆ.ಸತ್ಯವಂತನಿಗೆ ಕಷ್ಟಗಳು ಬಂದರೂ,ಕೊನೆಗೆ ಸತ್ಯಕ್ಕೆ ಜಯವಾಗಿ ಆತನಿಗೆ ಸುಖ ಸಿಕ್ಕಿ ಒಳ್ಳೆಯದಾಗುತ್ತದೆ. ಸತ್ಯವಂತನಾದವನು ಯಾರಿಗೂ ಹೆದರುವ ಅಗತ್ಯವಿಲ್ಲ ಆತನ ಮನಸಾಕ್ಷಿಯು ಆತನನ್ನು ಖುಷಿಯಿಂದ ಇರಲು ಸಹಕರಿಸುತ್ತದೆ.ಸುಳ್ಳಿಗೆ ಮಾತ್ರ ಎಂದಿಗೂ ಸುಖವಿಲ್ಲ.ಸುಳ್ಳು ಹೇಳುವವನು ತನ್ನ ಸುಳ್ಳನ್ನು ಸಾಧಿಸಲು ಒಂದರ ಹಿಂದೊಂದು ಸುಳ್ಳನ್ನು ಹೇಳಬೇಕಾಗುತ್ತದೆ.ಇದರಿಂದ ಆತನ ಮನಸ್ಸು ಯಾವಾಗಲೂ ಭಯದಿಂದ  ಕೂಡಿರುತ್ತದೆ.ಯಾವಾಗ ತನ್ನ ಸುಳ್ಳು ಬಯಲಾಗುವುದೋ  ಎನ್ನುವ ಹೆದರಿಕೆಯಲ್ಲಿ  ಆತನಿಗೆ ಊಟ ತಿಂಡಿ  ರುಚಿಸದಾಗುತ್ತದೆ ಕೊನೆಗೆ  ನಿದ್ದೆಯೂ ಅವನಿಂದ ದೂರ ಸರಿದು ಅನಾರೋಗ್ಯಕ್ಕೆ ತುತ್ತಾಗಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಆತನ ಸುಳ್ಳು ಬಯಲಾದರೆ   ತನ್ನ ಗೌರವ, ನಂಬಿಕೆ ವಿಶ್ವಾಸವನ್ನು ಆತ  ಕಳೆದುಕೊಳ್ಳಬೇಕಾಗುತ್ತದೆ. ಒಮ್ಮೆ ಸುಳ್ಳಿನ ಬಲೆಯಲ್ಲಿ ಸಿಕ್ಕಿದರೆ ಹೊರಬರಲು ಸಾಧ್ಯವಿಲ್ಲ. ಒಂದು ಸುಳ್ಳು ಹೇಳಿ ಅದನ್ನು  ಸಾಧಿಸಲು ಸಾವಿರ ಸುಳ್ಳುಗಳ ಸರಮಾಲೆಯನ್ನು  ಹೆಣೆಯಬೇಕಾಗುತ್ತದೆ.ಇದೆಲ್ಲದರಿಂದ ಆತ ತನ್ನವರಿಂದಲೇ ತಿರಸ್ಕರಿಸಲ್ಪಡುತ್ತಾನೆ. 
ಸತ್ಯದ ದಾರಿಯಲ್ಲಿ ನಡೆದರೆ ನಾವು ನಮ್ಮ ಗುರಿ ಸೇರಬಹುದು.ಯಾಕೆಂದರೆ ಸತ್ಯಕ್ಕೆ ಒಂದೇ ದಾರಿ ಇರುವುದು .ಸುಳ್ಳಿಗಾದರೊ ಸಾವಿರ ದಾರಿ ಇರುವುದರಿಂದ ಸುಳ್ಳಿನ ಜತೆ ನಡೆದವನು ಗುರಿ ಸೇರುವುದು ಅಸಾಧ್ಯವಾದ ಮಾತು.ಆದ್ದರಿಂದ   ನಾವೆಲ್ಲಾ ಸತ್ಯವಂತರಾಗಿ ಬಾಳಿ ಉತ್ತಮ ಹೆಸರನ್ನು ಪಡೆದುಕೊಳ್ಳಬೇಕು.

ಶ್ರೀಮತಿ.ಪಂಕಜಾ.ಕೆ. ಮುಡಿಪು.
ನಿವೃತ್ತ.ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.ಶ್ರೀ.ಗಣೇಶ ಕೃಪಾ .ಮುಡಿಪು.ಅಂಚೆ..ಕುರ್ನಾಡು. ದ.ಕ.574153
[25/9/2020, 9:52 PM] pankajarambhat: ನನ್ನ ಮೊದಲ ಗಾದೆ ವಿಸ್ತರಣೆ ಗೆ  ಮೆಚ್ಚುಗೆ ಬಹುಮಾನ ನೀಡಿದ ಬಳಗದ ನಿರ್ವಾಹಕರಿಗೆ  ಅಯೋಜಕರಿಗೆ ಹಾಗೂ ತೀರ್ಪುಗಾರರಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏
[27/9/2020, 8:23 PM] pankajarambhat: ಗುರುಕುಲಾ ರಾಯಚೂರು ಘಟಕದ  ವಾರಕ್ಕೊಂದು ಸ್ಪರ್ಧೆಗಾಗಿ

ಲೇಖನ ಎಸ್.ಪಿ  ಬಾಲಸುಬ್ರಮಣ್ಯಂ ಅವರ ಕುರಿತು

ಗಾನ ಗಾರುಡಿಗ ಎಸ್.ಪಿ. ಬಿ.

ಜೂನ್ 4 1946 ರಂದು ಶ್ರೀಪತಿ ಪಂಡಿತಾರಾದ್ಯಲು ಬಾಲಸುಬ್ರಮಣ್ಯಂ ಎಂಬ ಹೆಸರಿನಿಂದ ಆಂಧ್ರಪ್ರದೇಶದ ಚಿತ್ತೂರಿನ ನಲ್ಲೂರು  ಜಿಲ್ಲೆಯ ಕೊನೆಟಮ್ಮ  ಪೇಟ ಎಂಬಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಇವರು,ಉತ್ತಮ ನಟರು, ಗಾನ ಗಾರುಡಿ ಗರೆಂದೇ ಹೆಸರುವಾಸಿಯಾಗಿ  ಪದ್ಮಭೂಷಣ ಪದ್ಮಶ್ರೀ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದು ಅಲ್ಲದೆ ಸಾವಿರಾರು ಪ್ರಶಸ್ತಿಗಳನ್ನು ಮುಡಿಗೇರಿಸಿದ ಗಾನಕೋಗಿಲೆ
ಬಹುಮುಖ ಪ್ರತಿಭೆಯ ಇವರು ಕೇವಲ ಹಾಡಿಗಷ್ಟೇ ಸೀಮಿತವಾಗದೆ  ನಟನೆ ಸ್ವರ ಸಂಯೋಜನೆ ಯಲ್ಲೂ.ತೊಡಗಿಕೊಂಡಿದ್ದು, ಇಳಿವಯಸ್ಸಿನಲ್ಲೂ .  ಬತ್ತದ ಉತ್ಸಸಹದ ಚಿಲುಮೆಯಾಗಿದ್ದರು.ಎಲ್ಲಾ ಭಾಷೆಗಳಲ್ಲೂ ಹಿಡಿತವನ್ನು ಹೊಂದಿದ್ದ ಇವರು ವಿಶ್ವ ಮಾನವರೆಂದು ಪ್ರಸಿದ್ದಿ ಪಡೆದಿದ್ದರು.
                    ಇವರು ವ್ಯವಸ್ಥಿತವಾಗಿ ಸಂಗೀತ ಕಲಿಯದೆ ಇದ್ದರೂ ತಮ್ಮ ತಂದೆಯವರು ಹಾಡುವ ಹರಿಕಥೆಯನ್ನು ಕೇಳುತ್ತಾ ಬೆಳೆದ ಇವರಿಗೆ  ತಂದೆ  ಸಾಂಬಮೂರ್ತಿ ಅವರೇ ಪ್ರೇರಣೆ. ಹಾರ್ಮೋನಿಯಂ ಕೊಳಲು ಇತ್ಯಾದಿಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತ ಲೋಕದಲ್ಲಿ ದೃವ ತಾರೆಯಂತೆ ಮಿಂಚಿ ಜನ ಮಾನಸದಲ್ಲಿ ನೆಲೆಸಿ ಅಜರಾಮರರಾದರು.
                         ವಿವಿಧ ಭಾಷೆಯಲ್ಲಿ 40000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ.ಡಾ. ಎಸ್.ಪಿ. ಬಾಲಸುಬ್ರಮಣ್ಯಂ  ಅವರು ಎಸ್ ಪಿ. ಬಿ. ಎಂದೇ ಚಿರ ಪರಿಚಿತರಾಗಿ ಆತ್ಮೀಯರ ಬಾಲಣ್ಣರಾಗಿದ್ದರು.  ಇವರು  ಹಲವಾರು ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದು, ದೂರದರ್ಶನದಲ್ಲಿ ಪ್ರಸಾರವಾದ ಎದೆತುಂಬಿ  ಹಾಡುವೆನು ಕಾರ್ಯಕ್ರಮವನ್ನು ನಡೆಸಿಕೊಟ್ಟು ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಗೌರವದಿಂದ ನಡೆಸಿ ಕೊಳ್ಳುತ್ತಿದ್ದರು. ಸಾವಿರಾರು ಅಭಿಮಾನಿ ಪ್ರೇಕ್ಷಕರನ್ನು ಗಳಿಸಿದ್ದ  ಇವರ ಹಾಡಿನ ಧ್ವನಿ ಮುದ್ರಿಕೆಯನ್ನು  ಕೇಳದ ಕನ್ನಡಿಗರು  ವಿರಳ .ಬಹುಮುಖ ವ್ಯಕ್ತಿತ್ವದ ಇವರಿಗೆ ಸಂಧ ಗೌರವವೂ ಅಪಾರ.
                            ಕೊರೊನಾ ಮಹಾಮಾರಿಯ ಕಾಟಕ್ಕೆ ತುತ್ತಾಗಿ   ಉಸಿರಾಟದ ತೊಂದರೆಯಿಂದ   ಚಿಕಿತ್ಸೆ  ಫಲಿಸದೆ ಚೆನ್ನೈನ ಆಸ್ಪತ್ರೆಯಲ್ಲಿ, ಸೆಪ್ಟೆಂಬರ 25... 2020 ರಂದು  ಮರಳಿ ಬಾರದ ಲೋಕಕ್ಕೆ ತೆರಳಿ ಗಾನ ಗಂಧರ್ವ ಲೋಕವನ್ನು ಬರಿದಾಗಿಸಿ  ಕಾಣದ ಲೋಕಕ್ಕೆ ತೆರಳಿ ದರು.74 ವರ್ಷದ ಮಗುವಿನ ಮನಸ್ಸಿನ ಗಾನ ಗಾರುಡಿಗರಾದ ಎಸ್.ಪಿ. ಬಿ. ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ
                            
ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್ ಮಾಸ್ಟರ್.
ಶ್ರೀ ಗಣೇಶಕೃಪಾ. ಮುಡಿಪು. ಅಂಚೆ...ಕುರ್ನಾಡು.ದ.ಕ.574153
[4/10/2020, 3:43 PM] pankajarambhat: ಗುರುಕುಲಾ ರಾಯಚೂರು ಘಟಕದ ವಾರಕ್ಕೊಂದು ಸ್ಪರ್ಧೆಗಾಗಿ

ರುಬಾಯಿ ಸ್ಪರ್ಧೆಗಾಗಿ
ವಿಷಯ .ಗಾಂಧೀಜಿಯವರ ಬಗ್ಗೆ

ರುಬಾಯಿ..1

ಉಪ್ಪಿನ  ಸತ್ಯಾಗ್ರಹ  ಮಾಡಿದರು ಗಾಂಧೀಜಿ
ಬ್ರಿಟಿಷರಿಗೆ ಸಡ್ಡು ಹೊಡೆದರು ಗಾಂಧೀಜಿ
ರಾಷ್ಟ್ರಪಿತನೆಂಬ ಬಿರುದು ಇರುವುದು ಇವರಿಗೆ
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಗಾಂಧೀಜಿ

ರುಬಾಯಿ..2

ರಾಮರಾಜ್ಯದ ಕನಸು ಕಂಡರು ಇವರು
ಭಾರತದ ಸ್ವಾತಂತ್ರ್ಯಕ್ಕಾಗಿ  ಹೋರಾಡಿದರು
ಸತ್ಯ  ಅಹಿಂಸೆಯೇ ಇವರ ಮಂತ್ರವಾಗಿದೆ
ಶಾಂತಿಯಿಂದಲೇ ಬ್ರಿಟಿಷರ ಮಣಿಸಿದರು

ರುಬಾಯಿ..3

ಸ್ವಾವಲಂಬನೆಗಾಗಿ ಖಾದಿ ತೊಟ್ಟರು
ಖಾದಿಗ್ರಾಮೋದ್ಯೋಗಕ್ಕೆ ಒತ್ತು ಕೊಟ್ಟರು
ಸ್ವಾವಲಂಬಿ  ಭಾರತದ ಪರಿಕಲ್ಪನೆಗಾಗಿ
ಹಗಳಿರುಳೆನ್ನದೆ  ಅವಿರತವಾಗಿ ಶ್ರಮಿಸಿದರು

ಶ್ರೀಮತಿ.ಪಂಕಜಾ.ಕೆ. ಮುಡಿಪು.
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.
ಶ್ರೀ ಗಣೇಶ ಕೃಪಾ.ಮುಡಿಪು.
ಅಂಚೆ..ಕುರ್ನಾಡು. ದ.ಕ.574153
[11/10/2020, 7:36 PM] pankajarambhat: ಗುರುಕುಲಾ ಕಲಾ ಪ್ರತಿಷ್ಠಾನ ರಾಯಚೂರು  ಘಟಕದ  ವಾರಕ್ಕೊಂದು ಸ್ಪರ್ಧೆಗಾಗಿ
ಮಕ್ಕಳ ನೀತಿ ಕಥೆ

   ಧೈರ್ಯ 
 
ಉಲ್ಲಾಸ   ಆ ಊರಿಗೆ ಅದೀಗ ತಾನೇ  ಪೊಲೀಸ್ ಆಗಿ ಕೆಲಸಕ್ಕೆ ಸೇರಲು ಬಂದಿದ್ದ . ಇನ್ನೂ ಸಣ್ಣ ಪ್ರಾಯ ,ದೈರ್ಯಶಾಲಿಯೂ  ,ವಿವೇಕಿಯೂ,ಆದ ಆತನನ್ನು ಕಂಡರೆ ಕಳ್ಳ ಕಾಕರು ತುಂಬಾ ಭಯ ಪಡುತ್ತಿದ್ದರು.ಆ ಊರಿನಲ್ಲಿ ಕಳ್ಳರ ಕಾಟ ಜೋರಿತ್ತು. ಉಲ್ಲಾಸ  ಕಳ್ಳರನ್ನು ಹಿಡಿಯಲು  ತುಂಬಾ  ಉತ್ಸುಕನಾಗಿದ್ದ.ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಕಳ್ಳರ ಜಾಡು ಹಿಡಿಯುವುದು  ಅವನಿಂದ ಆಸಾಧ್ಯವಾಗಿತ್ತು
ಆದರೂ ಆತ ತನ್ನ ಪ್ರಯತ್ನ ಬಿಡಲಿಲ್ಲ .ಆ ಊರಿನ ಪಶ್ಚಿಮ ದಿಕ್ಕಿನಲ್ಲಿ ಒಂದು ದೊಡ್ಡ ಕಾಡು ಇತ್ತು.ಕಾಡಿನ ಆ ಭಾಗ ಭಯನಕವಾಗಿತ್ತು.ಅಲ್ಲಿಗೆ ಹೋಗಲು ಎಲ್ಲರೂ ಹೆದರುತ್ತಿದ್ದರು. ಅಲ್ಲಿಗೆ ಹೋದವರು ಯಾರು ಹಿಂತಿರುಗಿ ಬಂದಿಲ್ಲ . ಕಳ್ಳರು ಅದೇ ಕಾಡಿನಲ್ಲಿ ಅಡಗಿರಬಹುದು ಎನ್ನುವ ಯೋಚನೆ ಬಂದು  ಉಲ್ಲಾಸ  ತಾನು ಅಲ್ಲಿಗೆ ಹೋಗಿ ನೋಡಬೇಕು ಎಂದು ನಿಶ್ಹೈಸುತ್ತಾನೆ.ಅದನ್ನು ತನ್ನ ಆತ್ಮೀಯ ಗೆಳೆಯ ಸ್ವಾಗತ್ ನಲ್ಲಿ ಮಾತ್ರ ತಿಳಿಸಿ ಬೇಕಾದ ಎಲ್ಲಾ  ಸಿದ್ಧತೆಗಳನ್ನು ಮಾಡಿ ಒಂದು ದಿನ  ಅಲ್ಲಿಗೆ ಹೊರಡುತ್ತಾನೆ. ಉಲ್ಲಾಸ  ಹೋಗಿ ವಾರವಾದರೂ ಅವನ ಸುದ್ದಿಯೇ ಇಲ್ಲದೆ ಇರುವುದು ನೋಡಿ ಸ್ವಾಗತ್ ಗೆ ಭಯವಾಗುತ್ತದೆ. ಮೊಬೈಲ್ ಬಹುಶ ಚಾರ್ಜ್ ಮುಗಿಯಿತೇನೋ ಎಂದು ಯೋಚಿಸಿದ ಸ್ವಾಗತ್ ಇನ್ನೆರಡು ದಿನ ನೋಡಿ ಬಾರದಿದ್ದರೆ ಆತನ ಆಫೀಸಿಗೆ ಹೇಳಬೇಕು ಎಂದು ಯೋಚಿಸಿದ.  ಯಾಕೆಂದರೆ ಉಲ್ಲಾಸ ಆಫೀಸಿಗೆ ರಜೆ ಮಾಡಿದ್ದ ಮತ್ತು ಅಲ್ಲಿಯೂ ಯಾರಲ್ಲೂ ಈ ವಿಷಯ ಹೇಳಲಿಲ್ಲ .ಆದರೆ ಮರುದಿನ  ಉಲ್ಲಾಸ ಕಳ್ಳರನ್ನು ಹೆಡೆಮುರಿ ಕಟ್ಟಿ ಎಳೆದು ಕೊಂಡು ಬರುವುದು ಕಂಡು ಊರಿನ ಎಲ್ಲರೂ ಉಲ್ಲಾಸನ ಧೈರ್ಯವನ್ನು ಕೊಂಡಾಡಿದರು. ಆ ವರ್ಷದ   ಶೌರ್ಯ ಪ್ರಶಸ್ತಿಗೆ ಆತ ಆಯ್ಕೆಯಾದ

ನೀತಿ..ದೈರ್ಯ ಮತ್ತು ಪ್ರಯತ್ನವಿದ್ದರೆ ಯಾವುದೇ ಕಾರ್ಯವನ್ನು ಸಾಧಿಸಬಹುದು

ಪಂಕಜಾ ಕೆ.ಮುಡಿಪು .
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶ ಕೃಪಾ ಮುಡಿಪು.
ಅಂಚೆ.ಕುರ್ನಾಡು ದ.ಕ. 574153
[16/10/2020, 9:08 PM] pankajarambhat: ವಾವ್ ನನ್ನ ಮಕ್ಕಳ ನೀತಿ ಕತೆ ಅತ್ಯುತ್ತಮ ಬಹುಮಾನ ಪಡೆದುದು ತುಂಬಾ ಖುಷಿ ಆಯಿತು . ಅಯೋಜಕರಿಗೆ  ನಿರ್ವಾಹಕರಿಗೆ ಹಾಗೂ ತೀರ್ಪುಗಾರರಿಗೆ ಹೃತ್ಪೂರ್ವಕ ಧನ್ಯವಾದಗಳು🙏🙏 ಸಹವಿಜೇತರಿಗೆ ಅಭಿನಂದನೆಗಳು💐💐
[18/10/2020, 7:03 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ರಾಯಚೂರು   ವಾರಕ್ಕೊಂದು ಸ್ಪರ್ಧೆಗಾಗಿ
ಭಕ್ತಿಗೀತೆ
 ವಿಷಯ .ನವಶಕ್ತಿ ವೈಭವ 
 
 ಶೀರ್ಷಿಕೆ.. ನವ ದುರ್ಗೆಯರು
 
ನವ ರಾತ್ರಿಯ ನವದಿನಗಳಲಿ
ನವವಿಧದಲಿ ಭಜಿಸುವೆ
ಸಿಂಹವಾಹಿನಿ ಮಹಿಷಮರ್ಧಿನಿ
ಚರಣಕೆರಗುತ ಸ್ತುತಿಸುವೆ

ಶೈಲಪುತ್ರಿಯೇ ಬ್ರಹ್ಮಚಾರಿಣಿ
ಹರಸು ನಮ್ಮನು ಅನುದಿನ
ಚಂದ್ರಘಂಟೆಯೇ ಕೂಷ್ಮಾಂಡೆಯೇ
ಬವದ ಬನ್ನವಾ ಕಳೆಯುನೀ

ಸ್ಕಂಧಮಾತೆಯೇ ಕಾತ್ಯಾಯಿನಿಯೇ
ಶರಣು ಬಂದಿಹೆ ತಾಯಿಯೇ
ಕಾಲರಾತ್ರಿಯೇ ಸಿದ್ಧಿ ದಾತ್ರಿಯೇ
ವಿದ್ಯೆ ಬುದ್ಧಿಯ ಕರುಣಿಸು

ನವನಿಧಿಯೇ ನವದುರ್ಗೆಯೇ
ಬೇಡಿಕೊಳ್ಳುವೆ ನಿನ್ನನು
ಅಂಧಾಕಾರವ ಕಳೆದು ಬೆಳಗಿಸು
ಜ್ಞಾನ ಜ್ಯೋತಿಯ ಎಲ್ಲೆಡೆ

ದುಷ್ಟರನ್ನು ಶಿಕ್ಷಿಸುತ್ತ ಶಿಷ್ಟರನ್ನು ರಕ್ಷಿಸಿ
ಅಭಯ ಹಸ್ತವ ತೋರಿಸು
ಜಗದ ಜನರ ಕಷ್ಟ ಕಳೆದು
ಸುಖ ಶಾಂತಿಯ ತುಂಬಿಸು

ಶ್ರೀಮತಿ ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್ 
ಶ್ರೀ ಗಣೇಶ ಕೃಪಾ ಮುಡಿಪು.
ಅಂಚೆ..ಕುರ್ನಾಡು.ದ.ಕ.574153
[25/10/2020, 9:34 PM] pankajarambhat: ಗುರುಕುಲಾ ರಾಯಚೂರು ಘಟಕ ವಾರಕ್ಕೊಂದು ಸ್ಪರ್ಧೆಗಾಗಿ 
ಚಿತ್ರಕ್ಕೊಂದು ಕವನ

 ಮೈಸೂರು ದಸರಾ
 
 ವಿಶ್ವವಿಖ್ಯಾತ ಮೈಸೂರು ದಸರಾ
 ಝಗ ಮಗಿಸುತ್ತಿದೆ  ದೇವಿ ಅಲಂಕಾರ

ಜಂಬೂ ಸವಾರಿಯ ವೈಭವದ ನೋಟ
ಎಲ್ಲೆಡೆಯೂ ತುಂಬಿದೆ ಸಂಭ್ರಮದ ಊಟ

ಮನೆ ಮನಗಳಲೂ ಸಡಗರ ತುಂಬಿದೆ
ತಳಿರು ತೋರಣಗಳಿಂದ ಅಲಂಕೃತವಾಗಿದೆ

ವರ್ಣರಂಜಿತ ದೀಪಾಲಂಕಾರದ ಸೊಬಗು
 ಮೈ ಮರೆಸುತಿದೆ ಜಂಬೂ ಸವಾರಿಯ ಬೆರಗು

ಮಹಿಷಾಸುರ ಮರ್ಧಿನಿ ದೇವಿ ಜಗನ್ಮಾತೆ
ಕೊಡುವಳು ಸಕಲವನು ಭಕ್ತರಿಗೆ ಜಗನ್ಮಾತೆ

 ಚಿನ್ನದ ಅಂಬಾರಿಯಲಿ  ವೈಭವದ  ಮೆರವಣಿಗೆ
 ಮಾತೆ ಚಾಮುಂಡೇಶ್ವರಿ ದೇವಿಯ  ಮೆರವಣಿಗೆ
 
 ಜನರ ಸಂಭ್ರಮ ಮುಗಿಲು ಮುಟ್ಟಿದೆ
 ಐತಿಹಾಸಿಕ ಪರಂಪರೆಯ ಸಾರುತಿದೆ
 
ಗಜ ಪಡೆಗಳು ಸಾಗುತಿವೆ  ಶಿಸ್ತಿನಲಿ
ಮಾಹುತನ ಅಂಕೆಯಲಿ  ಗಂಭೀರದಲಿ

ಜಗತ್ಪ್ರಸಿದ್ಧವಾಗಿದೆ ಮೈಸೂರು ದಸರಾ
ಮನಸೂರೆಗೊಳ್ಳುತ್ತಿದೆ ಇದರ ವೈಭವ

ಅಂಬಾರಿ ಮೆರವಣಿಗೆ ಮನಸೆಳೆದಿದೆ
ಐತಿಹಾಸಿಕ  ಸಂಸ್ಕೃತಿ ಪರಂಪರೆಯ ಸಾರಿದೆ

ಗತಕಾಲದ ಇತಿಹಾಸ ವೈಭವವ ಬಿಂಬಿಸಿದೆ
ವೈಭವದ ದಸರೆಗೆ ವಿಜಯದಶಮಿ ದಿನ ತೆರೆ ಎಳೆದಿದೆ

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ .ಪೋಸ್ಟ್ ಮಾಸ್ಟರ್.
ಶ್ರೀ.ಗಣೇಶ ಕೃಪಾ.ಮುಡಿಪು
ಅಂಚೆ.ಕುರ್ನಾಡು.ದ.ಕ.574153
[9/11/2020, 4:37 PM] pankajarambhat: ಗುರುಕುಲಾ ರಾಯಚೂರು ಘಟಕದ ವಾರಕ್ಕೊಂದು ಸ್ಪರ್ಧೆಗಾಗಿ
ಜನಪದ ಗೀತೆ ರಚನೆ
ದತ್ತಪದ..ಬಡತನ

ಬಡತನದ ಬವಣೆ

ಕೊರೊನಾ ಮಾರಿ
ಬಂದೈತೆ /ನೋಡವ್ವ
ಬಡವರ ಬದುಕು ಬೀದಿಗೆ ಬಿದ್ಧ್ಯತೆ ನಮ್ಮವ್ವ

ಕೆಲಸ ಇಲ್ಲ ಕಾರ್ಯನು ಇಲ್ಲ
ಬದುಕೊಕೇ ದಾರಿ /ಎಲ್ರೈತವ್ವ
ದಿನ ನಿತ್ಯ ಕೂಳಿಗೂ ಪರದಾಟ ಆಗೈತೆ ನೋಡವ್ವ

ಬಡತನ ಎಂದರೆ 
ಏನೆಂದೇ ತಿಳಿದಿರಲಿಲ್ಲ /ನನ್ನವ್ವ
ಬಡತನದ ಬಿಸಿ  ಈಗ ಬಡುದೈತೆ ನಮ್ಮವ್ವ

ಉಂಡುಟ್ಟು ಹಾಯಾಗಿ
ಕಳಿತಿದ್ದೆ ದಿನಗಳ /ನೋಡವ್ವ
ಯಾವದಕ್ಕೂ ತಾಪತ್ರಯ ಇರ್ಲಿಲ್ಲವ್ವ

ಈಗೀಗ ಬಾಳು 
ಕಷ್ಟಕ್ಕೆ ಬಂದೈತೆ /ನೋಡವ್ವ
ಬಡತನದ ಬವಣೆ ತಿಳಿತೈತೆ  ನಮ್ಮವ್ವ

ಶಿವನೇಕೆ ತನ್ನ ಕಣ್ಣು
ಮುಚ್ಯಾನು /ನೋಡವ್ವ
ಬದುಕು ಮೂರಾಬಟ್ಟೆ ಅಗೋಯ್ತವ್ವ

ಶ್ರೀಮತಿ.ಪಂಕಜಾ.ಕೆ. ಮುಡಿಪು

ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.ಶ್ರೀ ಗಣೇಶ ಕೃಪಾ ಮುಡಿಪು .ಅಂಚೆ.ಕುರ್ನಾಡು.ದ.ಕ.574153
[15/11/2020, 5:33 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ರಾಯಚೂರು ವಾರಕ್ಕೊಂದು ಸ್ಪರ್ಧೆಗಾಗಿ
  ದೀಪಾವಳಿ ಬಗ್ಗೆ ಕವನ
  
   ಬೆಳಗುವ ದೀಪ
   
ದೀಪದ ಸಾಲಲಿ ಬೆಳಗಿದೆ ಮನೆಯು
ಅಂದಾಕಾರವ ತೊಲಗಿಸುತ
ಮನೆ ಮನಗಳಲೂ ಸಂಭ್ರಮ ತರುತಿದೆ
ಬೆಳಕಿನ ಹಬ್ಬ ದೀಪಾವಳಿ

ಕತ್ತಲೆ ಕಳೆದು ಬೆಳಕನು ತುಂಬುತ
ಬಾಳಿನ ತಮವನು ಕಳೆಯುತಿದೆ
ಮನೆ ಮನಗಳ ಕೊಳೆಯನು ಕಳೆಯುತ
ಜ್ಞಾನದ ಜ್ಯೋತಿಯ ಉರಿಸುತಿದೆ

ಎಣ್ಣೆಯ ಸ್ನಾನವು ಕೊಡುತಿದೆ
ಮೈಮನಕೆಲ್ಲಾ ಮುದವನ್ನು
ದೀಪದ ಬೆಳಕಲಿ ಹೊಳೆದಿದೆ ಮನೆಯು
ಕಷ್ಟಗಳೆಲ್ಲವ ನೀಗಿಸುತ

ಪರಿಸರ ಸ್ನೇಹಿ ಮಣ್ಣಿನ ಹಣತೆಯು
ಬೆಳಗಿತು ಮನೆ ಮನಗಳನು
ಪರಿಸರ ಕೆಡಿಸುವ ಪಟಾಕಿ ಹಚ್ಚದೆ
ದೀಪದ ಹಬ್ಬದ ಸಂಭ್ರಮ ಸವಿಯೋಣ

ಮನದ ನರಾಕಾಸುರನ ವಧಿಸುತ
ಪ್ರೀತಿಯ ಜ್ಯೋತಿಯ ಬೆಳಗೋಣ
ನಾಳಿನ ಬಾಳಿನ ಗೋಳನು ಕಳೆಯಲು
ದೇವರ ಪೂಜೆಯ ಮಾಡೋಣ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಶ್ರೀ ಗಣೇಶ ಕೃಪಾ .ಮುಡಿಪು.
ಅಂಚೆ..ಕುರ್ನಾಡು.ದ.ಕ.574153
[23/11/2020, 8:10 PM] pankajarambhat: ಗುರುಕುಲಾ ರಾಯಚೂರು ಘಟಕ ವಾರದ ಕವನ ರಚನಾ ಸ್ಪರ್ಧೆಗಾಗಿ
       ವಿಷಯ..ನಗುವಿನ  ಹೊನಲು

ಶೀರ್ಷಿಕೆ.... ನಗೆಯ ಮೋಡಿ

ಹರುಷ ತುಂಬಲು ಮನಸಿನಲಿ
ತನುವು ಪುಲಕಿತಗೊಳುವುದು
ನಗುವಿನ ಹೊನಲಿನಲಿ ತೇಲುತಿರಲು
ಆರೋಗ್ಯ ನೆಮ್ಮದಿ ಸಿಗುವುದು

ನಗುತ ನಗಿಸುತ ಬಾಳಬೇಕು
ಜೀವನದ ಸವಿ ಸವಿಯಲು
ಮನಕೆ ಚೈತನ್ಯವನು ತುಂಬುತ
ಚಿರ ಯೌವ್ವನ  ಕೊಡುವುದು

 ನೋವು ಬೇಸರಗಳೆಲ್ಲಾ ಕಳೆಯುವುದು
 ನಗುವು ಮುಖದಲಿ ಇದ್ದರೆ
 ಬದ್ಧವೈರಿಯು ಮಿತ್ರನಾಗುವ
 ಶುದ್ಧ ನಗುವಿನ ಮೋಡಿಗೆ
 
ಅರಳಿ ನಗುವ ಹೂವಿನಂತೆ
ಮುಖದ ಚೆಲುವು ಹೆಚ್ಚುವುದು
ಹಾಸ್ಯ ಬದುಕಲಿ ಹಾಸು ಹೊಕ್ಕಾಗಿರಲು
ಚಿಂತೆ ಎಲ್ಲಿದೆ ಮನುಜಗೆ

ಜೀವನದ ಜಂಜಾಟ ಕಳೆಯಲು
ನಗೆಯು ಒಂದೇ ಸಾಧನ
ನಗೆಯ ಮೋಡಿಯು ಮನವ ಬೆಳಗುತ
ಬಾಳು  ಹೂಬನವಾಗುವುದು



ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ.574153
[29/11/2020, 9:04 PM] pankajarambhat: ಗುರುಕುಲ ಕಲಾಪ್ರತಿಷ್ಠಾನ ರಾಯಚೂರು ಘಟಕ ವಾರಕ್ಕೊಂದು ಸ್ಪರ್ಧೆಗಾಗಿ
ಲೇಖನ 
ವಿಷಯ..ಜಯ

 ಜೀವನದಲ್ಲಿ ಜಯ ಗಳಿಸಬೇಕು ಎನ್ನುವ  ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ.ಸೋಲನ್ನು  ಯಾರೂ ಬಯಸುವುದಿಲ್ಲ .ಆದರೆ ಜಯ ಎನ್ನುವುದು ಒಂದು ಮರೀಚಿಕೆಯಿದ್ದಂತೆ .ಅದನ್ನು ಪಡೆಯಲು ಶ್ರಮ ಪಡಬೇಕಾದುದು ಅತ್ಯಗತ್ಯ. ಶ್ರದ್ಧೆಯಿಂದ ಕೆಲಸ ಮಾಡುವವನಿಗೆ  ಜಯವು ಒಲಿದು ಬರುವುದು. ನಾವು ಯಾವುದೇ ಕೆಲಸದಲ್ಲಿ ಜಯ ಪಡೆಯಬೇಕಾದರೆ ಪ್ರಯತ್ನ ಪಡಬೇಕು.ಪ್ರಯತ್ನವೇ ಮಾಡದೆ ಸುಮ್ಮನೆ ಸೋಮಾರಿಯಾಗಿರುವವನಿಗೆ ಜಯವು ಸಿಗಲಾರದು. ಸತತ ಪ್ರಯತ್ನ,ಆತ್ಮವಿಶ್ವಾಸ, ಪರಿಶ್ರಮ , ಏಕಾಗ್ರತೆ ,ಜಯ ಪಡೆಯುವ ಗುಟ್ಟು. ಸೋಲು ಎನ್ನುವುದು ಗೆಲುವಿನ ಇನ್ನೊಂದು ಮುಖ .ಸೋಲು ಗೆಲುವಿನ ಮೆಟ್ಟಿಲು ಎನ್ನುವ ಗಾದೆ ಮಾತಿನಂತೆ  ಸೋತಾಗ ಕುಗ್ಗದೆ  ಸೋಲನ್ನೇ ಸವಾಲಾಗಿ ಸ್ವೀಕರಿಸಿ ಮತ್ತೆ ಪ್ರಯತ್ನಿಸುವುದರಿಂದ ಗೆಲುವು ಸಿಗಬಹುದು.ಜಯವನ್ನು ಸಾಧಿಸ ಬೇಕಾದರೆ ನಮ್ಮ ಜೀವನದಲ್ಲಿ ಒಂದು ಗುರಿ ಇರಬೇಕು  .ಗುರಿ ಸೇರುವವರೆಗೂ ವಿಶ್ರಮಿಸದೆ ಇರುವಂತಹ ಮನೋಭಾವ ಬೆಳೆಸಿಕೊಂಡು ದೃಢ ನಿರ್ಧಾರದಿಂದ ಹಿಡಿದ ಕೆಲಸವನ್ನು ಗಟ್ಟಿಮನಸ್ಸು ಮಾಡಿ ಮಾಡಬೇಕು .ಪ್ರಯತ್ನಶೀಲನಿಗೆ ಜಯಲಕ್ಷ್ಮಿಯು ಒಲಿಯುವಳು.

ಶ್ರೀಮತಿ ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ..
[6/12/2020, 7:18 PM] pankajarambhat: ಗುರುಕುಲಾ ರಾಯಚೂರು ಘಟಕದ ವಾರದ ಚಿತ್ರಕ್ಕೆ  ತಕ್ಕ  ರುಬಾಯಿ ರಚನಾ ಸ್ಪರ್ಧೆಗಾಗಿ

ರುಬಾಯಿ .1.

ಹಸಿರು ಹೊನ್ನು

 ಕೈ ತುಂಬಾ  ಹಸಿರು ಹೊನ್ನಾಗಲಿ
 ಭೂತಾಯಿ ಒಡಲು ಅರಳಿ ನಗಲಿ
 ಉಳಿಸಬೇಕು ಹಸಿರಿನ ಸಿರಿಯ
 ಪ್ರತಿಯೊಬ್ಬರೂ ಕೈ ಜೋಡಿಸಲಿ

ರುಬಾಯಿ. 2. ಋಣಿಯಾಗಿರಿ

ಭೂರಮೆಯ ಒಡಲ ಹಸಿರ ಸಿರಿ
ಅಂಗೈಯಲ್ಲಿಟ್ಟು. ಕಾಪಾಡಿರಿ
ನಿಸರ್ಗಕ್ಕೆ ಋಣಿಯಾಗಿರಬೇಕು
ಭೂತಾಯಿ ಒಡಲ ಬಗೆಯದಿರಿ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್..ಮಾಸ್ಟರ್
ಕುರ್ನಾಡು.ದ.ಕ.
[13/12/2020, 8:08 PM] pankajarambhat: ಗುರುಕುಲ ರಾಯಚೂರು ಘಟಕದ ವಾರದ  ಕಿರು ಪ್ರಬಂಧ  ಲೇಖನರಚನಾ ಸ್ಪರ್ಧೆಗಾಗಿ

ವಿಷಯ..ಸಮಾನತೆ ಎಂಬುದು ಪ್ರಸ್ತುತ ಯುಗದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತೆ

ಗಂಡು ಹೆಣ್ಣು ಇಬ್ಬರೂ ದುಡಿಯಬೇಕಾದ  ಅನಿವಾರ್ಯತೆಯಿರುವ ಇಂದಿನ ದಿನಗಳಲ್ಲಿ ಸಮಾನತೆ ಎನ್ನುವುದು ಅತ್ಯಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಬಡವ ಬಲ್ಲಿದ ಮೇಲು ಕೀಳು ಹೆಣ್ಣು ಗಂಡು ಎನ್ನುವ ಅಸಮಾನತೆ ದೇಶದ ಪ್ರಗತಿಗೆ ಮಾರಕ.ಹೆಣ್ಣು ಈಗ ಕೇವಲ ಅಡಿಗೆ ಮನೆಗೆ ಸೀಮಿತವಾಗಿಲ್ಲ.   ಅಡಿಗೆ ಮನೆಯಿಂದ ಹಿಡಿದು ಯುದ್ಧ ಭೂಮಿಯಲ್ಲಿ ದೇಶರಕ್ಷಣೆಯ ವರೆಗೂ ಹೆಣ್ಣು ಸ್ವಾವಲಂಬಿಯಾಗಿ ದುಡಿಯುತ್ತಿದ್ದಾಳೆ. ಹಾಗಿದ್ದರೂ ಹೆಣ್ಣು ಎನ್ನುವ ಒಂದೇ ಕಾರಣಕ್ಕೆ ಅವಳಿಗೆ ಸಮಾನ ಸ್ಥಾನ ಮಾನ ಕೊಡದೆ ಮೂಲೆಗುಂಪು ಮಾಡುವುದು ಸರಿಯಲ್ಲ ಗಂಡು ಅವಳ ಎಲ್ಲಾ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸಿ ಸಮಾನತೆಗೆ ಒತ್ತು ಕೊಡಬೇಕು. ಎಲ್ಲಿ ಹೆಣ್ಣಿಗೆ ಗೌರವ ಸ್ಥಾನ ಮಾನ ಸಿಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.ಹೆಣ್ಣಿಗೆ ಸಮಾನತೆಯ ಅವಕಾಶ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ  .ಉತ್ತಮ ಸಮಾಜ ನಿರ್ಮಾಣ ಕ್ಕೆ   ಮೇಲು ಕೀಳು ಬಡವ ಶ್ರೀಮಂತ ಎನ್ನುವ ಭೇಧಬಾವವು ದೇಶದ ಅಭಿವೃದ್ಧಿಗೆ ಮಾರಕ ಆದರಿಂದ ಎಲ್ಲರೂ ಒಂದಾಗಿ   ದುಡಿಯಬೇಕಾಗಿರುವುದು ಅಗತ್ಯವಾಗಿದೆ. ದೇಶ ಸುಭಿಕ್ಷವಾಗಬೇಕಾದರೆ  ಪ್ರಸ್ತುತ ಯುಗದಲ್ಲಿ ಸಮಾನತೆ ಅತ್ಯಗತ್ಯವಾಗಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ದೇಶದ ಪ್ರಗತಿಗೆ ಕೈ ಜೋಡಿಸಬೇಕು ಸರಕಾರ ಈ ಬಗ್ಗೆ  ಕಾನೂನನ್ನು ಜಾರಿಗೆ ತಂದು ಸಮಾಜ ಸುಧಾರಣೆಯನ್ನು ಮಾಡಬೇಕು.  

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
[20/12/2020, 5:50 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ರಾಯಚೂರು ಘಟಕ

ವಾರದ ಟಂಕಾ ರಚನಾ  ಸ್ಪರ್ಧೆಗಾಗಿ
ಟಂಕಾಗಳು

ವಿಷಯ     ನಿಮ್ಮಿಷ್ಟದ್ದು

 ಟಂಕಾ..1  
 
ಮರೆಯದಿರಿ
ನಮ್ಮ ಸಂಸ್ಕೃತಿಯನ್ನು
ಎಲ್ಲೇ ಇರಲಿ
ಉಳಿಸಿಕೊಳ್ಳಬೇಕು
ಭಾರತೀಯತೆಯನು

ಟಂಕಾ ..2

ಭಾರತವೊಂದು
ಸಂಸ್ಕೃತಿಯ ತವರು
ಹೆಮ್ಮೆ ಪಡಿರಿ
ಭಾರತದಲ್ಲಿ ಹುಟ್ಟಿ
ಬೆಳೆದ ನಮ್ಮ ಬಗ್ಗೆ

ಪಂಕಜಾ. ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.
ಕುರ್ನಾಡು.ದ.ಕ.574153
[27/12/2020, 7:44 PM] pankajarambhat: ಗುರುಕುಲಾ ರಾಯಚೂರು ಘಟಕ  ವಾರದ  ಪ್ರೇಮ ಕವನ ಸ್ಪರ್ಧೆಗಾಗಿ

 ದತ್ತಪದ....ಪ್ರೇಮ

   ನನ್ನೊಲವೇ  ನೀನು

ನಿನ್ನ ನೋಡಿದ ನನ್ನ ಮನದಲಿ
ನೂರು ಕನಸದು ಮೂಡಿತು
ಚೆಲುವೆ ನಿನ್ನಯ ಕಣ್ಣನೋಟಕೆ
ಮನಸು ತಲ್ಲಣಗೊಂಡಿತು

ಪ್ರೇಮವೆಂಬ ಬಳ್ಳಿ ಹಬ್ಬಿಸಿ
ಮನಸು ನಿನ್ನಲಿ ಬೆರೆತಿದೆ
ಒಲವ ಭಾವವು ಎದೆಯ ತುಂಬಿ
ಮೈ ಮನವನು ಮರೆಸಿದೆ

ನೋಡು ಬಾನಲಿ ಹೊಳೆಯುತಿರುವುದು 
ಬೆಳ್ಳಿ ಚುಕ್ಕೆಗಳೆಡೆಯಲಿ
ಬಿಳಿಯ ತಟ್ಟೆಯ ತೆರದಿ  ನಲಿಯುತ
ಧರೆಗೆ ಬೆಳಕನು ಹರಿಸುತ

ನಮ್ಮ ಪ್ರೇಮಕೆ ಸಾಕ್ಷಿಯಾಗುತ
ಭರದಿ ಬರುವನು ಬಾನಲಿ
ಪ್ರೇಮಿಗಳಿಗೆ ಸ್ವರ್ಗ ಸುಖವನು
ಕೊಡುತ ನಲಿಯುತಿರುವನು ಚಂದಿರ

ಚೆಲುವೆ ನಿನ್ನೊಡನಾಟ ತಂದಿದೆ
ನನ್ನ ಮನಕೆ ಹರುಷವು
ಒಲವ ದೋಣಿಯ ಪಯಣದಲಿ
ಜತೆಗೆ ಸಾಗುತ ನಲಿಯುವ

ನಿನ್ನ ಅಧರದ ಕೆಂಪು ಸೆಳೆದಿದೆ 
ನನ್ನ ಮನಸಿನ ಕಂಗಳ 
ಕನಸು ಮನಸಲೂ ನೀನೇ ಇರುವೆ
ನೀನೇ ನನ್ನ ಬಾಳಿನ ಚಂದಿರ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.
ಕುರ್ನಾಡು.ದ.ಕ.
[03/01, 8:38 PM] pankajarambhat: ಗುರುಕುಲಾ ಕಲಾ ಪ್ರತಿಷ್ಠಾನ ಜಿಲ್ಲಾ ಘಟಕ ರಾಯಚೂರು 

ವಾರದ ಕವನ ರಚನಾ ಸ್ಪರ್ಧೆಗಾಗಿ

ವಿಷಯ..ಕನಸು

ಮೂಡಿತು ಕನಸು

ಬಾನ ಬಯಲಲಿ ಮುಗಿಲು ಕಾಣುತ
ಮನದಿ ತುಂಬಿತು ಮೋದವು
ಹಾಡು ಹಕ್ಕಿಯ ಗಾನ ಕೇಳುತ 
ಹೃದಯಮಂದಿರ ಅರಳಿದೆ

ಚೆಲುವ ನಿನ್ನಯ ತುಂಟ  ಕಣ್ಣದು
ನನ್ನ ಮನವನು ಸೆಳೆದಿದೆ
ಬಾಳ ದಾರಿಯ ಪಯಣದಲಿ
ಚೆಲು ಕನಸನು ಬಿತ್ತಿದೆ

ಒಲವ ಸುರಿಸುವ ನಿನ್ನ ಮಾತಿಗೆ
ಮನವು ನವಿಲ ತೆರದಲಿ ಕುಣಿದಿದೆ 
ನಿನ್ನ ಎದೆಯ ಬಿಸಿ ಸ್ಪರ್ಶವು 
ಬಾಳಲಿ ಹೊಸ ರಂಗನು ತುಂಬಿದೆ

ನಿನ್ನ ಪ್ರೀತಿಯ ದಾರೆ ಸವಿಯುತ
ತನುಮನವು ಸೋತಿದೆ
ಇನಿಯಾ ನಿನ್ನಯ ಒಲವಿನಾಟವು
 ಮನಕೆ ಹರ್ಷವ ತಂದಿದೆ

ಸಪ್ತಪದಿಯಲಿ ಅಡಿಯನಿಟ್ಟು
ನಿನ್ನ ಮನೆಯನು ಬೆಳಗಿದೆ
ಹೃದಯ ಮಿಡಿತವು ಉಸುರುತಿರುವುದು
ನಿನ್ನ ಹೆಸರನು ಅನುದಿನ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ.
[18/01, 8:10 PM] pankajarambhat: ಗುರುಕುಲಾ  ಕಲಾಪ್ರತಿಷ್ಠಾನ ಜಿಲ್ಲಾ ಘಟಕ ರಾಯಚೂರು
ವಾರದ ವಿಶೇಷ ರುಬಾಯಿ ರಚನಾ ಸ್ಪರ್ಧೆಗಾಗಿ

ರುಬಾಯಿ 1
,ಪ್ರತಿಯೊಂದು ಸಾಲಿನಲ್ಲಿ 13 ಅಕ್ಷರವಿದೆ)

ಎಳ್ಳು ಬೆಲ್ಲ ಬೀರುವ ಹಬ್ಬವು ಸಂಕ್ರಾಂತಿ   
ಕಳೆಯಲಿ  ನಮ್ಮಮನೆ ಮನದ ಬ್ರಾಂತಿ
ಕೊರೊನಾ ಮಾರಿಯ  ಭಯವು ತೊಲಗಲಿ
ಜಗತ್ತಿನ ಎಲ್ಲೆಡೆ ನೆಲೆಸಲಿ ಶಾಂತಿ

ರುಬಾಯಿ 2.

(ಪ್ರತಿಯೊಂದು ಸಾಲಿ ನಲ್ಲಿ 13 ಅಕ್ಷರವಿದೆ)

ಸುಗ್ಗಿಯ ಫಸಲು ತುಂಬಿದೆ ಮನೆಯಲಿ
ಸಂತಸ ತುಂಬಿದೆ ರೈತನ ಮೊಗದಲಿ
ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಹಂಚೋಣ
ಸಡಗರ ಸಂತೋಷ ತುಂಬಲಿ ಬಾಳಲಿ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ .ಕುರ್ನಾಡು.ದ.ಕ.

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಒಲವ ಪಯಣ

ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ  ಜತೆಯಲಿ  ಹೆಜ್ಜೆ  ಹಾಕುತ ವರುಷ  ಕಳೆದುದೇ  ತಿಳಿಯದು ನಡ...