ಖಿದ್ಮಾ ಪೌಂಡೇಶನ್ ಕರ್ನಾಟಕ ಲೇಖನ ಸ್ಪರ್ಧೆಗಾಗಿ
ವಿಷಯ.. ನಮ್ಮ ಸಂವಿಧಾನದ ಮುಖ್ಯಾಂಶಗಳು
ಭಾರತದ ಸಂವಿಧಾನವು ಭಾರತ ಸರಕಾರದ ಮೂಲ ರಚನೆಯಾಗಿದ್ದು, ಜನವರಿ 26 .-1950 ರಂದು ಜಾರಿಗೆ ಬಂದಿತು.ಈ ದಿನವನ್ನು ಗಣರಾಜ್ಯೋತ್ಸವ ವೆಂದು ಆಚರಿಸಲಾಗುತ್ತದೆ. ನಮ್ಮ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಹಾಗೂ ಬೃಹತ್ ಸಂವಿಧಾನವಾಗಿದೆ. ಎಲ್ಲಾ ದೇಶದ ಉತ್ತಮ ಅಂಶಗಳನ್ನು ತೆಗೆದುಕೊಂಡು ,ನಮ್ಮ ಸಂವಿಧಾನವನ್ನು ಡಾ.ಬಿ. ಆರ್.ಅಂಬೇಡ್ಕರ್ ಅವರು ರಚಿಸಿದ್ದಾರೆ.ನಮ್ಮ ಸಂವಿದಾನದ ಮುಖ್ತಾಂಶಗಳು ಯಾವುದೆಂದರೆ , ವಯಸ್ಕ ಮತದಾನ ಪದ್ಧತಿ ಅಂದರೆ 18 ವರ್ಷ ಮೇಲ್ಪಟ್ಟ ಸ್ತ್ರೀ ಪುರುಷರೆಲ್ಲರೂ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಗಣರಾಜ್ಯವ್ಯವಸ್ಥೆ ,ಸರ್ವಧರ್ಮ ಸಮನ್ವಯ ತತ್ವಗಳು, ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್ಯ,ಶೋಷಣೆ ವಿರುದ್ಧ ಹಕ್ಕುಗಳು, ಧಾರ್ಮಿಕ ,ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಕ್ಕು ಮೂಲಭೂತ ಕರ್ತವ್ಯಗಳು,ಆಸ್ತಿಯ ಹಕ್ಕು,ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಏಕ ಪೌರತ್ವ ವ್ಯವಸ್ಥೆ, ಅಖಿಲ ಭಾರತ ಸೇವೆ ,ಪಂಚಾಯತಿ ರಾಜ್ಯವ್ಯವಸ್ಥೆ, ಸಂಯುಕ್ತ ವ್ಯವಸ್ಥೆ, ದ್ವಿಸದನ ಶಾಸಕಾಂಗ ಇತ್ಯಾದಿ ಉತ್ತಮ ಅಂಶಗಳನ್ನು ಒಳಗೊಂಡ ನಮ್ಮ ಸಂವಿಧಾನವು ವಿಶ್ವದ ಎಲ್ಲೆಡೆಯೂ ಮಾನ್ಯತೆಯನ್ನು ಪಡೆದು ಹೊಗಳಿಕೆಗೆ ಪಾತ್ರವಾಗಿದೆ.
ಶ್ರೀಮತಿ.ಪಂಕಜಾ.ಕೆ. ಮುಡಿಪು.ಕುರ್ನಾಡು.ದ.ಕ.
Comments
Post a Comment