Skip to main content

ತುಳು.ಕನ್ನಡ 10

[09/01, 8:03 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ
ಗಜಲ್

ದತ್ತಪದ.ಚದುರಂಗ

ಬಾಳೊಂದು ಚದುರಂಗದಾಟವಾಗಿದೆ ಗೆಳತಿ
ದೇವನಾಡಿಸಿದಂತಾಡುವ ಕಾಯಿಯಾಗಿದೆ ಗೆಳತಿ

ಕಪಟ ಸ್ನೇಹ ತೋರಿಸಿ  ವಂಚಿಸುವರಿರುವರು
ಎಷ್ಟು ಜಾಗ್ರತೆಯಿಂದಿದ್ದರೂ ಸಾಲದಾಗಿದೆ ಗೆಳತಿ

ಯಾರನ್ನು ನಂಬಬೇಕು ಎಂದು ತಿಳಿಯ ದಾಗಿದೆಯಲ್ಲ
ನಂಬಿಕೆ ವಿಶ್ವಾಸಕ್ಕೆ  ಬೆಲೆ ಇಲ್ಲವಾಗಿದೆ ಗೆಳತಿ

ನನ್ನವರು ತನ್ನವರು ಎನ್ನುವುದು ಎಲ್ಲಾ ಮಿಥ್ಯೆ
ನಂಬಿದವರ ಮೋಸದಾಟನೋಡಿ ಬೇಸರವಾಗಿದೆ ಗೆಳತಿ

ಕಲ್ಮಶವಿಲ್ಲದ ಮುಗ್ಧಮನಸು  ನಿನ್ನದು ಪಂಕಜಾ
ರಾಡಿಮಾಡಿ ಗುಲ್ಲೆಬ್ಬಿಸುವವರ ಕಂಡು ಮನಸು ರೋಸಿಹೋಗಿದೆ ಗೆಳತಿ 

ಶ್ರೀಮತಿ.ಪಂಕಜಾ.ಕೆ. ಮುಡಿಪು
[12/01, 7:11 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ
ದ್ವಿರುಕ್ತಿ ಕವನ

        ಬಾನಿನ ಸೊಬಗು

ನೋಡು ನೋಡು ಬಾನಿನಲಿ ಹಬ್ಬಿದ ಬಣ್ಣಗಳು
ಹಾಡು ಹಾಡಿ ನಲಿಯುತಿದೆ ಕೋಗಿಲೆಯೊಂದು
ಕಾಡು ಕಾಡು ಸುತ್ತಿ ತಿರುಗಿ ತಿರುಗಿ ಬಂದಿದೆ
ಮರ ಮರಗಳೆಡೆಯಲಿ ಹಾಡಿ  ಕುಣಿಯುತ್ತಿದೆ

ಬಾರಿ ಬಾರಿಗೂ ಮೈಮರೆಸುತಿದೆ ಅದರ ಹಾಡು
ತೇಲಿ ತೇಲಿ ಅಂಬರದಲಿ ಸಾಗುತಿದೆ  ಮನಸು
ಹಾರಿ ಹಾರಿ ಮೇಲೇರಿ ಗಗನದಂಚು ಮುಟ್ಟಿದೆ
ನೋಡಿ ನೋಡಿ ಕಣ್ಣು ತುಂಬಿ ಬಂದಿತು

ಧಗ ಧಗ ಉರಿಯುತಿರುವನು ಭಾಸ್ಕರ
ನಿಗಿ ನಿಗಿ ಕೆಂಡದಂತೆ ಸುಡುತಿರುವನು ಧರೆಯ
ಸೆಖೆ ಸೆಖೆ ಎಂದು ಬೊಬ್ಬಿಡುತಿಹರು ಜನರು
ತಂಪು ತಂಪು ಆಗಲು ಕುಡಿಯುವರು ನೀರು

ಉಳಿಸಿ ಉಳಿಸಿ ಸುಂದರ  ಪ್ರಕೃತಿ ಸಂಪತ್ತನು
ಹಸಿರು ಹಸಿರಾಗಿದ್ದರೆ ತಂಪುಗಾಳಿ ಬೀಸುವುದು
ಬೇಡ ಬೇಡ ಎಂದರೂ ಬಿಡದೆ ಕಡಿಯುವರು 
ನೋಡಿ ನೋಡಿ ಸಾಕಾಗಿ ಹೋಯಿತು ನನಗೆ

ಶ್ರೀಮತಿ.ಪಂಕಜಾ.ಕೆ. ಮುಡಿಪು
[14/01, 7:43 PM] pankajarambhat: ತುಳು ಕನ್ನಡ ಕಾವ್ಯ ಸಂಗಮ  ಸ್ಪರ್ಧೆಗಾಗಿ
ಜಾನಪದ ಗೀತೆ
  ವಿಷಯ    ಮಕರ ಸಂಕ್ರಾಂತಿ

     ಸಂಕ್ರಾಂತಿ ಹಬ್ಬ

ಸಂಕ್ರಾಂತಿ ಹಬ್ಬ ಬಂದೈತೆ /ನೋಡವ್ವ/
ಎಳ್ಳು ಬೆಲ್ಲದ ಸವಿ ಸವಿಬೇಕು
ಭಕ್ತಿಯಲಿ ಮಾದೇವನ ನೆನೆಯಬೇಕು

ಸುಗ್ಗಿಯಕಾಲದಿ ಹುಗ್ಗಿಯ ಮಾಡಬೇಕು /ನೋಡವ್ವ/
ಸಂಭ್ರಮದಿ ಭೂತಾಯಿಗೆ ನಮಿಸಬೇಕು
ಮನೆತುಂಬಾ ದವಸ ತುಂಬೈತೆ


ಹೊಳೆಯಲ್ಲಿ ನೀರು ತುಂಬೈತೆ /ನೋಡವ್ವ
ಹೊಲದ ತುಂಬಾ ಕಾಳು ಕುಣಿತೈತೆ 
ಬಂಗಾರದ ಬೆಳೆ ಬಂದೈತೆ

ಧರೆಯಾಗ ವೈಭೋಗ ಕಾಣುತೈತೆ /ನೋಡವ್ವ
ಭೂತಾಯಿ ಹಸಿರುಟ್ಟು ನಲಿದಾಳ
ಮನದಾಗ ಹರುಷ ತುಂಬೈತೆ

ಭೂತಾಯಿ ಹರಸಿದರೆ  ಸಾಕು /ನೋಡವ್ವ/
ಬಂಗಾರದಂತ ಬೆಳೆ  ಬರುತೈತೆ 
ಪರಶಿವ ಕಣ್ಣು ಬಿಟ್ಟಾನ/ನೋಡವ್ವ/
ಎಲ್ಲೆಲ್ಲೂ ಸಂಭ್ರಮ ಹರುಷ ತುಂಬೈತೆ

ಶ್ರೀಮತಿ.ಪಂಕಜಾ.ಕೆ. ಮುಡಿಪು
[19/01, 3:07 PM] pankajarambhat: ತುಳುಕನ್ನಡ ಸ್ಪರ್ಧಾಈಗಾಗಿ
ನ್ಯಾನೊ ಕಥೆ 
ವಿಷಯ ಸಂಯಮ

       ಮುರಿದ   ಸ್ನೇಹ

ರಮೇಶ ಮತ್ತು ಗಿರೀಶ ತುಂಬಾ ಒಳ್ಳೆಯ ಸ್ನೇಹಿತರು.ಇವರಿಬ್ಬರ ಅನ್ಯೋನ್ಯತೆ ಹಲವರ ಅಸೂಯೆಗೆ ಕಾರಣ ವಾಗಿತ್ತು. ಹೇಗಾದರೂ ಇವರಿಬ್ಬರ ಸ್ನೇಹ ಮುರಿಯಲು ಪಣತೊಟ್ಟ ನರೇಶ ರಮೇಶನ ಬಗ್ಗೆ ಗಿರೀಶನಲ್ಲಿ ಚಾಡಿ ಹೇಳಿದ .ಮೊದ ಮೊದಲು ನಂಬದ ಗಿರೀಶ ನಾಲ್ಕೈದು ಜನ ಇದೆ ರೀತಿ ಹೇಳಿದಾಗ ತನ್ನ ಸಂಯಮ ಕಳೆದುಕೊಂಡು ರಮೇಶನಿಗೆ ಅವಮಾನ ಮಾಡಿದ .ಇವರಿಬ್ಬರ ಸ್ನೇಹ ಇದರಿಂದಾಗಿ ಮುರಿದುಬಿತ್ತು.

ಶ್ರೀಮತಿ.ಪಂಕಜಾ.ಕೆ. ಮುಡಿಪು
[21/01, 6:42 PM] pankajarambhat: ತುಳುಕನ್ನಡ ಕಾವ್ಯ ಸಂಗಮ 
ಚಿತ್ರಕ್ಕೊಂದು.ಕವನ ಸ್ಪರ್ಧೆಗಾಗಿ

      ಒಲವಿನ ಬಲೆ
      
ತಂಬೂರಿ ಹಿಡಿದ ನನ್ನಯ ಕರಗಳು
ಮೀಟುತಲಿರುವುದು  ವೇಗದಲಿ
ರಾಗದ ಜತೆಗೆ ಶ್ರುತಿಯದು ಸೇರಲು
ಮನದಲಿ  ನಿನ್ನದೇ ಧ್ಯಾನ

ಮೋಹನ  ನಿನ್ನಯ ಮುರಳಿಯ ಗಾನಕೆ
ಮೈಮನ ಮರೆಸುವ ಬಾವ
ಒಲವಿನ ಬಲೆಯಲಿ ಕೆಡವುತಲಿರಲು
ತನುವಲಿ ತುಂಬಿತು ಮೋಹ

ಭಕ್ತಿಯಲಿ ಭಜಿಸುತ ಮೈಮರೆಯುತಲಿ
ಕಲ್ಲಲೂ ಕಾಣುವೆ ನೀನು
ನನ್ನೆದೆ ತುಂಬಾ  ನಿನ್ನಯ  ರೂಪವು 
ಒಲವಲಿ ಸಿಲುಕಿದೆ  ನಾನು

 ಕೊಳಲನು ನುಡಿಸುತ ಒಲವನು ಹರಿಸುತ
 ಬಾರೋ ಮಾಧವ ಬೇಗದಲಿ
 ಕಾಯುತಲಿರುವೆನು ನಿನ್ನಯ ನೆನಪಲಿ
 ಯಮುನಾ ನದಿಯ ದಂಡೆಯಲಿ
 
 
 
ಶ್ರೀಮತಿ.ಪಂಕಜಾ.ಕೆ. ಮುಡಿಪು
[23/01, 6:18 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ
  ಸಣ್ಣಕಥೆ
  ದತ್ತಪದ ಅನ್ನ
  
           ಅನ್ನದ ಬೆಲೆ
           
ಬಡತನದಲ್ಲಿ ಬೆಳೆದ ಕಾರುಣ್ಯನಿಗೆ ಅನ್ನದ ಬೆಲೆ ಗೊತ್ತಿತ್ತು. ತುತ್ತು ತುತ್ತಿಗೂ ಲೆಕ್ಕ ಹಾಕುತ್ತಿದ್ದ ಕಾಲದಲ್ಲಿ ಬೆಳೆದ ಆತನಿಗೆ ಒಂದಗುಳು ಅನ್ನವೂ ಚಿನ್ನದಂತೆ ಕಾಣುತ್ತಿತ್ತು.ಆತ ವಾರಾನ್ನದಲ್ಲಿ ಊಟ ಮಾಡುತ್ತಾ ಕಷ್ಟಪಟ್ಟು ಚೆನ್ನಾಗಿ ಕಲಿತು ದೊಡ್ಡಹುದ್ದೆಯನ್ನು ಅಲಂಕರಿಸಿ,ಈಗ ಚಿನ್ನದ ತಟ್ಟೆಯಲ್ಲಿ ಕೈತೊಳೆಯುವಷ್ಟು ಶ್ರೀಮಂತಿಕೆಯಿದ್ದರೂ, ಊಟ ಮಾಡುವಾಗ  ಒಂದಗುಳೂ ಹಾಳು ಆಗದಂತೆ ಅನ್ನವನ್ನು ಚೆಲ್ಲದೆ ಊಟಮಾಡುವುದನ್ನು ಕಂಡ ಅವನ ಸ್ನೇಹಿತರು ಅವನನ್ನು ಹಾಸ್ಯಮಾಡುತ್ತಿದ್ದರು. ಆ ಸಮಯದಲ್ಲಿ ಆತ ತನ್ನ ಸ್ನೇಹಿತರನ್ನು ಬಡವರ ಗುಡಿಸಿಲಿಗೆ ಕರೆದೊಯ್ದು ಅವರ ಹಸಿವಿನ ಸಂಕಟವನ್ನು ಸ್ನೇಹಿತರಿಗೆ ಮನದಟ್ಟು ಮಾಡಿ ತಮ್ಮಿಂದ ಆಗುವಷ್ಟು ಬಡಬಗ್ಗರಿಗೆ ಸಹಾಯ ಮಾಡಲು ಅವರನ್ನು ಪ್ರೇರೇಪಿಸಿದ . ಇದರಿಂದಾಗಿ ಗೆಳೆಯರೆಲ್ಲಾ ತಮ್ಮ ಹುಟ್ಟು ಹಬ್ಬಕ್ಕಾಗಿ ಅದ್ದೂರಿಯಾಗಿ  ಖರ್ಚು ಮಾಡದೆ ಆ ಹಣದಲ್ಲಿ ಅನಾಥಾಶ್ರಮದ ಮಕ್ಕಳು ವೃದ್ಧರಿಗೆ ಅನ್ನ ,ಬಟ್ಟೆ ಯನ್ನು  ಕೊಟ್ಟು ಅವರ ನಗುವಿನಲ್ಲಿ ತಾವು ನಗುವ ಗುಣವನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾದರು. ಬಿಡುವಿನ ವೇಳೆಯಲ್ಲಿ ತಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಅನ್ನದ ಮಹತ್ವ ಹಾಗೂ ಅದನ್ನು ಬೆಳೆಯಲು ರೈತ ಪಡುವ ಶ್ರಮವನ್ನು ವಿವರಿಸಿ.ಅನ್ನವು ಪೋಲಾಗದಂತೆ ಎಚ್ಗರಿಸುತ್ತಿದ್ದರು.
 ಶ್ರೀಮತಿ.ಪಂಕಜಾ.ಕೆ. ಮುಡಿಪು
[26/01, 9:10 PM] pankajarambhat: ತುಳು ಕನ್ನಡ  ಕಾವ್ಯ ಸಂಗಮ  ಸ್ಪರ್ಧೆಗಾಗಿ

ಗಜಲ್
 ದತ್ತಪದ ..ಭಾರತ

ಸರ್ವಜನಾಂಗದ ಶಾಂತಿಯನ್ನು ಬಯಸುತ್ತದೆ ಭಾರತ
ಜಾತ್ಯತೀತ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಪಡೆದಿದೆ ಭಾರತ

ದೇಶದ ಸ್ವಾತಂತ್ರ್ಯಕ್ಕಾಗಿ  ದುಡಿದು ಮಡಿದರು ಹಲವರು
ವಿಶ್ವದ ಅತ್ಯಂತ ಬೃಹತ್ ಸಂವಿಧಾನ ರಚಿಸಿದೆ ಭಾರತ

ಹಸಿರು ಗುಡ್ಡ ಬೆಟ್ಟಗಳಿಂದ ತುಂಬಿ ನಯನ ಮನೋಹರವಾಗಿದೆ  ನಮ್ಮದೇಶ 
ಹಲವಾರು ಪುಣ್ಯ ನದಿಗಳು  ಹರಿಯುವ ಬೀಡಾಗಿದೆ ಭಾರತ

ನೂರಾರು ಕಲಿಗಳು ಬಾಳಿ ಬದುಕಿದ ನಾಡಲ್ಲವೇ ಇದು?
ಸರ್ವ ಸ್ವತಂತ್ರ  ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಭಾರತ

ಪಂಕಜಾಳ ಹೃದಯದ ತುಂಬಾ ದೇಶಾಭಿಮಾನ ತುಂಬಿ ತುಳುಕಿದೆ
ಸ್ವಾವಲಂಬಿ ಆತ್ಮನಿರ್ಭರದ ಕನಸು ತುಂಬಿ ನಿಂತಿದೆ ಭಾರತ

ಶ್ರೀಮತಿ.ಪಂಕಜಾ.ಕೆ. ಮುಡಿಪು
[28/01, 8:57 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ
ಭಾವಗೀತೆ
ದತ್ತಪದ..ಮದುರ ಮಾತು

ಒಲವಿನ ಬಲೆ

ಮದುರ ಮಾತಲಿ ಮನವ ಸೆಳೆಯುತ
ಒಲಿಸಿಕೊಂಡನು ಮಾಧವ
ಮೋಹನಾಂಗನ ಒಲವಗಾನಕೆ
ಸೋತು ಹೋದಳು ರಾಧೆಯು

ಒಲವ ಬಲೆಯಲಿ ಕೆಡವುತಲಿ
ಕಣ್ಣ ನೋಟದಿ ಬಂಧಿಸಿ
ತರಳೆ ಸೋತಳು ಒಲವಿನಾಟಕೆ
ಬಯಕೆ ಮನದಲಿ ಕಾಡಿಸಿ

ಚೆಲುವ ಕನಸನು ಮನದಿ ಮೂಡಿಸಿ
ಮನವ ತಣಿಸಿದೆ ಮಾದವ
ನಿನ್ನ ಕೊಳಲಿನ ಗಾನ ಕೇಳುತ
ಮನವು ತೇಲಿತು ಬಾನಲಿ

ರಾತ್ರಿ ಹಗಲು ಸರಿಯುತಿರುವುದು
ತಿಳಿಯದಂತ ಬಂಧುರ
ಕನಸು ಮನಸಲಿ ತುಂಬಿ ನಿಂತಿದೆ 
ನಿನ್ನ ನೆನಪಿನ ಹೂರಣ

ಶ್ರೀಮತಿ.ಪಂಕಜಾ.ಕೆ. ಮುಡಿಪು ಕುರ್ನಾಡು ದಕ
[30/01, 5:58 PM] pankajarambhat: ತುಳು ಕನ್ನಡ ಕಾವ್ಯಸಂಗಮ ಸ್ಪರ್ಧೆಗಾಗಿ
ರುಬಾಯಿ.  
ದತ್ತಪದ.      ಹುಟ್ಟು....ಸಾವು

1  ಹುಟ್ಟು 
ಹುಟ್ಟುವಾಗ ನಾವೇನನ್ನೂ ತಂದಿಲ್ಲ
ಜೀವನ ಶಾಶ್ವತವೆಂಬ ಭಾವನೆ ಸಲ್ಲ
ನಂಬಿಕೆ   ವಿಶ್ವಾಸ   ಬಾಳಿನಲಿರಬೇಕು
ಎಲ್ಲರನ್ನೂ ನಂಬುವುದು  ಒಳಿತಲ್ಲ

2 ಸಾವು
ಹುಟ್ಟು ಸಾವು ನಮ್ಮ ಕೈಯಲ್ಲಿಲ್ಲ
ಭಗವಂತನಾಡಿಸಿದಂತೆ ಆಡಬೇಕಲ್ಲ
ಬಂದು ಹೋಗುವ ಮೂರು ದಿನದಲ್ಲಿ
ದ್ವೇಷ ಅಸೂಯೆ ಪಡುವುದು ಸಲ್ಲ

ಶ್ರೀಮತಿ.ಪಂಕಜಾ.ಕೆ. ಮುಡಿಪು
[01/02, 8:31 PM] pankajarambhat: ಧಾರವಾಡ ಯುವ ಬರಹಗಾರರ  ಸಾಹಿತ್ಯವೇದಿಕೆ
ಕವನ ಸ್ಪರ್ಧೆಗಾಗಿ
ವಿಷಯ. ದಾ..ರಾ.ಬೇಂದ್ರೆ

       ವರಕವಿ

ರಾಮಚಂದ್ರ ಅಂಬಿಕೆಯರ ಪುತ್ರ
ಕಾವ್ಯನಾಮ ಅಂಬಿಕಾತನಯದತ್ತ
ವೈದಿಕ ವೃತ್ತಿಯ ತುಂಬು ಕುಟುಂಬದಲಿ  ಜನಿಸಿದರು
ಕವಿ ಸಾಹಿತಿಗಳಿಗೆ ಸ್ಫೂರ್ತಿ ಚಿಲುಮೆಯಿವರು

ಕನ್ನಡದ  ಟಾಗೂರ್ ಎಂಬ ಬಿರುದಾಂಕಿತರು
ಜ್ಞಾನಪೀಠ ಪದ್ಮಶ್ರೀ  ಪ್ರಶಸ್ತಿ ಪುರಸ್ಕೃತರು
ಗೌರವ ಡಾಕ್ತರೇಟ್ ಪಡೆದ ಮಹನೀಯರು
ಕನ್ನಡದ ವರಕವಿ ಚಿರಕವಿ ಯಾಗಿರುವರು

ಮನಸು ತಟ್ಟುವ ಭಾವಗೀತೆಗಳನ್ನು ರಚಿಸಿದರು
ಜಾನಪದ ಸೊಗಡಿನ ಸಾಹಿತ್ಯ ರಚಿಸಿದರು
ಜನಮಾನಸದಲ್ಲಿ ಅಚ್ಚಳಿಯದೆ ನೆಲೆ ನಿಂತರು 
ಕನ್ನಡದ ಮನೆಮನೆಗಳಲ್ಲೂ ಕವನದ ನಾದ ಬೀರಿದರು

 ಅತ್ಯದ್ಭುತ ಅತ್ಯುತ್ತಮ ಸಾಹಿತ್ಯ ರತ್ನಇವರು
ಕನ್ನಡ ನಾಡಿನ ಹೆಮ್ಮೆಯ ಪುತ್ರರತ್ನರಿವರು
ಸಾಹಿತ್ಯ  ಕೃಷಿಯ ಮೇರು ಪರ್ವತಇವರು
ನಿಸ್ವಾರ್ಥ ಜೀವಿ ಧಾರವಾಡದ ಅಜ್ಜ ಇವರು

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಕುರ್ನಾಡು .ದ.ಕ.

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.