Skip to main content

10

[27/11/2020, 1:31 PM] pankajarambhat: ಕವಿ ಸಾಹಿತಿಗಳ ಜೀವಾಳ ಚಿತ್ರಕ್ಕೊಂದು ಕಥೆ ಯಲ್ಲಿ ತೃತೀಯ  ಸ್ಥಾನ ಪಡೆದ ನನ್ನ ಸ್ವರಚಿತ ಕಥೆ
 
            ಶ್ರಾವಣಿ
 
ನವಿಲೂರಿನ ಶಂಕರ ರಾಯರ ಮನೆಗೆ  ಹಿರಿಯ ಸೊಸೆಯಾಗಿ ಬಂದ ಧನ್ಯ ಕೆಲವೇ ದಿನಗಳಲ್ಲಿ  ಮನೆಯವರೆಲ್ಲರ ಮೆಚ್ಚುಗೆಗೆ ಪಾತ್ರಳಾದಳು.ಮದುವೆಯಾಗಿ ವರ್ಷ ಎರಡು ಕಳೆದರೂ ಮಡಿಲು ತುಂಬದಿದ್ದಾಗ ದೇವರಿಗೆ ಹರಕೆ ಹೊತ್ತು ಹುಟ್ಟಿದ ಮಗು ಶರಣ್ಯ,  ಆ ಮನೆಯ ಸರ್ವರ ಪ್ರೀತಿಗೆ ಪಾತ್ರಳಾದಳು.ಪೂರ್ಣ ಚಂದ್ರನಂತೆ ದಿನದಿಂದ ದಿನಕ್ಕೆ ಚೂಟಿಯಾಗಿ ಬೆಳೆಯುತ್ತಿದ್ದ ಶರಣ್ಯಳ ಮೊದಲ ವರ್ಷದ ಹುಟ್ಟುಹಬ್ಬದ ದಿನ   ಶಂಕರ ರಾಯರು ತಮ್ಮ ಊರಿನ ವಿರೂಪಾಕ್ಷ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೇರವೇರಿಸಲು  ನಿಶ್ಹೈಸಿದ್ದರು.
ಅದರಂತೆ ಮನೆಯವರೆಲ್ಲ  ಸಡಗರದಿಂದ ಕಾರ್ಯಕ್ರಮದಲ್ಲಿ ಓಡಿಯಾಡುತ್ತಿದ್ದಾಗ. ಶರಣ್ಯ ಮೆಲ್ಲನೆ ಅಲ್ಲಿಂದ ಹೊರಟು ದೇವಸ್ಥಾನದ ಹೊರ ಅಂಗಳದಲ್ಲಿ ಆಟವಾಡುತ್ತಾ ನಗುತ್ತಿದ್ದಳು. 
                    ದೇವಸ್ಥಾನದ ಇನ್ನೊಂದು ಬದಿಯಲ್ಲಿ ನಡೆಯುತ್ತಿದ್ದ ತನ್ನ ಗೆಳತಿಯ ಮದುವೆಗಾಗಿ ಹೊರಟು ಬಂದಿದ್ದ ಶ್ರಾವಣಿ  ಸುಂದರವಾಗಿ ಅಲಂಕರಿಸಿದ್ದು ,ಮದುವೆ ಹೆಣ್ಣಿನಂತೆ ತಲೆಗೆ ಬೈತಲೆ ಬೊಟ್ಟು, ಸೊಂಟಕ್ಕೆ ಡಾಬು, ಕುತ್ತಿಗೆಗೆ ಅಗಲ ನೆಕ್ಲೆಸ್ ,ಧರಿಸಿ  ಹಳದಿ ಬಣ್ಣದ ಲಂಗ ದಾವಣಿಗೆ  ಕೆಂಪು ಶಾಲು  ಕುಸುರಿ ಕೆಲಸ ಮಾಡಿದ್ದ ಹಳದಿ ಕುಪ್ಪುಸ ತೊಟ್ಟು ತಲೆಯಲ್ಲಿ ಮಲ್ಲಿಗೆಯನ್ನು ಮುಡಿದು  ಅದೀಗ  ತಾನೇ ದೇವಸ್ಥಾನಕ್ಕೆ ಬಂದಿದ್ದಳು . ತಾನು ಧರಿಸಿದ ಬಣ್ಣದ ಲಂಗ ಧಾವಣಿ ಧರಿಸಿದ್ದ ಮುದ್ದಾದ ಹೆಣ್ಣು ಮಗುವಿನ  ಕಣ್ಣುಗಳು  ಮತ್ತು ಆಕರ್ಷಣೀಯ ನಗುವಿಗೆ  ಸೋತ ಅವಳು  ಅಲ್ಲೇ ಕುಳಿತು ಮಗುವನ್ನು ಪ್ರೀತಿಯಿಂದ  ಮಾತನಾಡಿಸಲು ಪ್ರಾರಂಬಿಸಿದಳು. ಮಗುವೂ ಅವಳನ್ನು ಅಪರಿಚಿತಳೆಂದು  ನೋಡದೆ ನಗು ನಗುತ್ತಾ ಮುದ್ದಾಗಿ ತನ್ನದೇ ಭಾಷೆಯಲ್ಲಿ ಮಾತನಾಡುವುದನ್ನು ನೋಡಿ  ಸಂಭ್ರಮದಿಂದ ಲಲ್ಲೇ ಗರೆಯುತ್ತಿರಲು  ,ಮಗಳನ್ನು ಹುಡುಕುತ್ತ ಬಂದ ಧನ್ಯ ಅಪರಿಚಿತ ಸುಂದರ ಯುವತಿಯ ಹತ್ತಿರ ಮಾತನಾಡುತ್ತ ನಿಂತಿರುವ ಮಗಳನ್ನು ಕಂಡು ಆನಂದದಿಂದ ಅಲ್ಲಿಗೆ ಬಂದು  ಶ್ರಾವಣಿಯನ್ನು ನೋಡಿ ,ಅವಳ ಬಗ್ಗೆ ವಿಚಾರಿಸುತ್ತಿರಲು ,ಗಂಡನ ಕರೆ ಕೇಳಿ ಮಗುವನ್ನು ಎತ್ತಿಕೊಂಡು ಒಳಗೆ ಹೋದಳು . ಮಗು ಶರಣ್ಯಳಾಗಲೇ ಶ್ರಾವಣಿಯ ಜತೆ ಹೊಂದಿಕೊಂಡಿದ್ದರಿಂದ ಅವಳ ಕಡೆ ಕೈ ತೋರಿಸಿ ಅಳುತ್ತಿದ್ದಳು. ಅದನ್ನು ಕಂಡ ಶ್ರಾವಣಿಗೂ ಕಣ್ಣು ತುಂಬಿ ಬಂತು .ಗೆಳತಿಯ ಮದುವೆ ಕಳೆದು ಹೊರಡಬೇಕೆಂದಿದ್ದಾಗ ,ಶರಣ್ಯಅಮ್ಮನ ಕೈ ಬಿಡಿಸಿ ಓಡುತ್ತಾ ಹೋಗಿ ಶ್ರಾವಣಿಯ  ಕೈ ಹಿಡಿದು ಕೊಂಡಿದ್ದು ಕಂಡು, ಚಕಿತರಾದ ಎಲ್ಲರೂ   ಶ್ರಾವಣಿ ಇದ್ದಲ್ಲಿಗೆ ಬಂದರು .ಶಂಕರ ರಾಯರು ಅವಳ ಬಗ್ಗೆ ವಿಚಾರಿಸಿ ಮನದಲ್ಲೇ ಖುಷಿ ಪಟ್ಟರು.ಕಣ್ಣಿನಲ್ಲಿಯೇ ತನ್ನ ಎರಡನೇ ಮಗ ಸಂಕೇತನ ಕಡೆ ನೋಡಿ ಹುಬ್ಬು ಹಾರಿಸಿದ ಅವರನ್ನು ಕಂಡು ಧನ್ಯಳ ಮನವು ಹೂವಿನಂತೆ ಹಗುರವಾಯಿತು.
                         ಶಂಕರ ರಾಯರು  ಶ್ರಾವಣಿಗೆ ತನ್ನ ಮಗ ಸಂಕೇತನನ್ನು  ಪರಿಚಯಿಸಿ  ನೀವಿಬ್ಬರೂ ಇಷ್ಟ ಪಟ್ಟರೆ ನಿನ್ನ ತಂದೆ ತಾಯಿಯರಲ್ಲಿ ಮಾತನಾಡಲು ಬರುತ್ತೇನೆ ಎಂದು ಹೇಳಿದರು.ಸುಂದರಾಂಗನಾದ ಸಂಕೇತನನ್ನು ದೂರದಿಂದ ಕಂಡಾಗಲೆ ಇಷ್ಟ ಪಟ್ಟಿದ್ದ ಶ್ರಾವಣಿ,ಶಂಕರರಾಯರು ಕೇಳಿದಾಗ ಲಜ್ಜೆಯಿಂದ ಮುಖ ಕೆಳಗೆ ಹಾಕಿ ತನ್ನ ಒಪ್ಪಿಗೆ ತಿಳಿಸಿದಳು.ಖುಷಿಯಾದ ಶಂಕರರಾಯರು  ಶುಭ ಕಾರ್ಯ ಆದಷ್ಟು ಬೇಗ ಆಗಲಿ ಎಂದು ತನ್ನ ಪತ್ನಿ ಲಲಿತಾಳನ್ನು ಕರೆದುಕೊಂಡು   ಆಗಲೇ ತಮ್ಮ ಕಾರಿನಲ್ಲಿ  ಶ್ರಾವಣಿಯ ಜತೆ ಅವಳ ತಂದೆ ತಾಯಿಯರ ಭೇಟಿಗಾಗಿ  ಹೊರಟರು. ಶುಭ ಮುಹೂರ್ತದಲ್ಲಿ ಶ್ರಾವಣಿ ಶಂಕರರಾಯರ ಕುಟುಂಬದ   ಎರಡನೇ ಸೊಸೆಯಾಗಿ ಆ ಮನೆಗೆ ಕಾಲಿಟ್ಟುದು ಕಂಡು ಪುಟ್ಟ ಶರಣ್ಯ ಹಿಗ್ಗಿನಿಂದ  ಶ್ರಾವಣಿಯ  ಕೊರಳು ಬಳಸಿ ಮುದ್ದುಗರೆದಳು.
                         ತುಂಬು ಕುಟುಂಬಕ್ಕೆ ಒಗ್ಗಿಕೊಂಡು ಎಲ್ಲರ ಜತೆ  ಪ್ರೀತಿಯಿಂದಿರುವ ಶ್ರಾವಣಿಯನ್ನು ಕಂಡು ಮನೆಯವರೆಲ್ಲರಿಗೂ ತುಂಬಾ ಖುಷಿಯಾಯಿತು.ಶಂಕರರಾಯರ ಸುಂದರ ಸಂಸಾರ ಶ್ರಾವಣಿ ಆ ಮನೆಗೆ ಬಂದ ಮೇಲೆ  ಇನ್ನಷ್ಟು ಖುಷಿಯಿಂದ ಕೂಡಿ  ಊರಿನವರೆಲ್ಲರ  ಹೊಗಳಿಕೆಗೆ ಪಾತ್ರವಾಯಿತು . 
                         
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್ ಮಾಸ್ಟರ್ .ಕುರ್ನಾಡು.ದ.ಕ 574153
[28/11/2020, 8:16 PM] pankajarambhat: ತುಳು ಕನ್ನಡ ಕಾವ್ಯ ಸಂಗಮ
ಸ್ಪರ್ಧೆಗಾಗಿ
ಚಿತ್ರಕ್ಕೊಂದು ಕವನ

ಜನುಮದ ಜೋಡಿ

ಜನುಮ ಜನುಮದ ಈ ಬಂಧ
ಮದುವೆಯ ಈ ಅನುಬಂಧ
ಮನದಲಿ ತುಂಬಿದೆ ಕಾತರ
ಒಲವನು ಸವಿಯುವ ಆತುರ

ಹೆಣ್ಣಿನ ತನುವಲಿ ಲಘು ಕಂಪನ
ಗಂಡಿನ ಮನದಲಿ ರೋಮಾಂಚನ
ಒಂದಾಗುವಾ  ಈ  ಶುಭಘಳಿಗೆ
ಮೈಮನದಲಿ ಪುಳಕ ನವದಂಪತಿಗಳಿಗೆ
 
ಕಂಕಣ ತುಂಬಿದ ಕೈಗಳಲಿ
ಮದುರಂಗಿಯ ಚಿತ್ತಾರದಲಿ
ಅರಳಿದೆ ಸವಿ ಕನಸುಗಳು
ನಾಚುತ ಬಾಗಿದೆ ಕಣ್ಣಿವೆಗಳು

ಕಾಲುಂಗುರ ಧರಿಸುವ ಕ್ಷಣ
ಸೌಭಾಗ್ಯದ ಸಂಕೇತದ ಆಭರಣ
ಅನುದಿನವೂ ಒಲವಲಿ  ನಲಿವು
ಮದುವೆಯ ಸುಂದರ ಕ್ಷಣವು

ಪಂಕಜಾ.ಕೆ. ಮುಡಿಪು
[30/11/2020, 8:32 PM] pankajarambhat: ಅಕ್ಷರ ದೀಪ ಸಾಹಿತ್ಯವೇದಿಕೆ  ಧಾರವಾಡ  ರಾಜ್ಯಮಟ್ಟದ ಕವನ ಸ್ಪರ್ಧೆಗಾಗಿ

ವಿಷಯ....ಪ್ರೇಮವು ವರವೋ ಶಾಪವೋ

     ಪ್ರೀತಿ    ಪ್ರೇಮ

ಪ್ರೇಮವೆನ್ನುವ ಮಧುರ ರಸವದು
ಸವಿದ ಹೃದಯವು ಧನ್ಯವು
ಪ್ರೀತಿಸುವವರಿಗೆ ವರವಾಗುತ 
ಮುದ ನೀಡುವುದು ಪ್ರೇಮವು

ಶುದ್ಧ ಪ್ರೇಮವು ಮನದಲಿರಲು
ಗೆದ್ದು ಬರಬಹುದು ಜಗವನು
ಅರಿತು ಬಾಳುವ ಬಾಳಲಿರುವುದು
ಪ್ರೇಮವೆಂಬುವ ಹಂದರ

ಪ್ರೇಮವೆನ್ನುತ ನಾಟಕವಾಡುತ
ಮೋಸ ಗೈವರು ಕೆಲವರು
ಬಿದ್ದು ಪ್ರೇಮದ ಆಕರ್ಷಣೆಯಲಿ
ನಲುಗಬಾರದು ಜೀವವು

ಮುರಿದು ಬೀಳುವ  ಸಂಬಂಧಗಳು
ಕೂಡಿಕೊಳ್ಳುವುದು ಪ್ರೇಮದಿ
ಅರಿತು ಬಾಳಿದರದುವೆ ಸ್ವರ್ಗವು
ಸಿಹಿಜೇನಿನ ಹೂರಣ

ಶುದ್ಧ ಪ್ರೇಮವು ವರವಾದರೆ
ಸ್ವಾರ್ಥ ತುಂಬಿದ ಪ್ರೇಮ ಶಾಪವು
ಅರಿಯಬೇಕಿದೆ ಅಂತರಂಗವ
ಪ್ರೇಮದ ಹೊಳೆಯಲಿ ತೇಲಲು

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್
ಕುರ್ನಾಡು
[1/12/2020, 3:25 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ

ಪ್ರಕಾರ..ಗುಣಿತಾಕ್ಷರ ಕವನ
ಮ ದಿಂದ ಮ:ವರೆಗೆ

ಮೋಹನಾಂಗ

ಮನಸು  ಅನುದಿನವೂ ನಿನ್ನನೇ ನೆನೆದಿದೆ
ಮಾತನಾಡಲು ಮನ ಕಾತರಿಸಿದೆ
ಮಿತಿಮೀರಿದ ಸಲುಗೆ ತರವಲ್ಲ 
ಮೀರಿ ಹೋದರೆ ಬಾಳು ಗೋಳಾದೀತು
ಮುಂದೊಂದು ದಿನ ಪಶ್ಹಾತ್ತಾಪ  ಪಡಬೇಕಾದೀತು
ಮೂಕ ವೇದನೆಯಿಂದ ಹೃದಯ ನರಳಿದೆ
ಮೃಗಾಲಯದ ಪ್ರಾಣಿಯಂತಾಗಿರುವೆ
ಮೆಲ್ಲನೆ ಬಳಿ ಬಂದು ಸಂತೈಸುವೆಯಾ
ಮೇರುವ್ಯಕ್ತಿತ್ವಕ್ಕೆ ಮಾರು ಹೋದೆ
ಮೈ ಮರೆಸುತಿದೆ ನಿನ್ನ ಆ ಪ್ರೀತಿಯ ನೋಟ
ಮೊಗೆದಷ್ಟೂ ತುಂಬುತಿದೆ ಪ್ರೀತಿ
ಮೋಹಕತೆಗೆ  ಮರುಳಾ ಗದವರಿರುವರೆ
ಮೌನವಾಗಿ ನನ್ನೆದೆಯಲಿ ಮನೆ ಮಾಡಿದೆ
ಮಂತ್ರ ಮುಗ್ಧಳಾಗಿ ನಿನ್ನೆಡೆಗೆ ಬಂದೆ
ಮ:ದುಪಕಾರವಾಯಿತು ನಿನ್ನಿಂದ

ಪಂಕಜಾ.ಕೆ. ಮುಡಿಪು
[1/12/2020, 5:14 PM] pankajarambhat: ಸಂಜೀವಿನಿ ತುಳಸಿ

       
      
ಹಲವು ರೋಗಕೆ ರಾಮಬಾಣದ
ತೆರದಿ ನಿಂತಿಹ ಸಸ್ಯವು
ಪುಟ್ಟ ಗಿಡವದು ಸೊಗದಿ ಬೆಳೆದಿದೆ
ಆಮ್ಲಜನಕವ ಸುರಿಸುತ

ಕೀಟನಾಶಕ ರೋಗನಿವಾರಕ
ಸಂಜೀವಿನಿ ತುಳಸಿಯು
ಮನೆ ಮನೆಯ ಅಂಗಳದಲಿ
ಬೆಳೆದು ಸೊಗವನು ತುಂಬಿದೆ

 ತುಳಸಿ ಪೂಜೆಯ ನಿತ್ಯಮಾಡಲು
 ಆರೋಗ್ಯ ಬಾಗ್ಯವು ಸಿಗುವುದು
 ಮನೆ ಮನದಲಿ ಶಾಂತಿ ತುಂಬುತ
 ಜಗವ  ಬೆಳಗುವ ಮಾತೆಯು
 
ನಿತ್ಯ ತುಳಸಿಯ ನೀರು ಸೇವಿಸಿ
ಸರ್ವರೋಗವ ನಿವಾರಿಸಿ
ಪೂಜ್ಯ ತುಳಸಿಯ ಪೂಜೆ ಮಾಡುತ
ಹರಿಯ ಒಲುಮೆಯ  ಗಳಿಸಿರಿ


ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.
ಕುರ್ನಾಡು.ದ.ಕ.574153
[1/12/2020, 10:03 PM] pankajarambhat: ಗುರುಕುಲಾ ಚಿಕ್ಕಮಗಳೂರು ಘಟಕದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನನ್ನ ಕವನ

ವಿಷಯ ...ನಾ ಕಂಡ ಇಳೆಯ ಸಂಜೆ

     ಮುಸ್ಸಂಜೆ

ನಾ ಕಂಡ ಇಳೆಯ ಸಂಜೆಯ ಸೊಬಗು
ತಂದಿತು ಮನಸಿಗೆ ಬೆರಗು
ಬಾನಲಿ ಕಲಸಿದ ಚೆಲುವಿನ ಬಣ್ಣ
ಸೆಳೆಯಿತು ರಸಿಕರ ಕಣ್ಣ

ಪಡುಗಡಲಲಿ ಮುಳುಗಿದ ರವಿ
ಇಳೆಯಲಿ ತುಂಬಿದ  ಬಣ್ಣದ ಸವಿ
ತಂಪಿನ ಗಾಳಿಯು ಸೊಂಪಲಿ ಬೀಸಿ
ಹರಡಿತು ಸುಮಧುರ ಗಂಧವ ಸೂಸಿ

ಹಸಿರಿನ ಸಿರಿಯೆಡೆ   ಬಣ್ಣದ  ಕಾಂತಿ
ಧರೆಯಲಿ  ತುಂಬಿತು ಮೌನದ ಶಾಂತಿ
ನೇಸರ ಹೊರಳಿದ  ನಿಶೆಯನು ಅಪ್ಪಿ
ಮನದಲಿ ಚೆಲುವಿನ ಕನಸನು ಬಿತ್ತಿ

ಹಕ್ಕಿಗಳ ಚಿಲಿಪಿಲಿ ಗಾನದ ರಾಗ
ಗುನುಗಿತು ಮನದಲಿ ಹೊಸರಾಗ
ಸೊಬಗಿನ ಸಿರಿಯಲಿ ಮೈಮನ ಮರೆತು 
ತನುವಲಿ ತುಂಬಿತು ಹೊಸ ಕನಸು

ದಿನಕರ ತೆರಳಲು ಮೂಡಿದ ಶಶಿ
ಬಾನಿನ  ತುಂಬಾ ಬೆಳ್ಳಿಯ ಚುಕ್ಕಿ
ಕೊಳದಲಿ ಅರಳಿತು ನೈದಿಲೆ ಹೂವು
ಶಶಿಯನು ಕಾಣುತ ಬಿರಿಯಿತು ಚೆಲುವು

ಶ್ರೀಮತಿ.ಪಂಕಜಾ.ಕೆ. ಮುಡಿಪು
[2/12/2020, 10:24 PM] pankajarambhat: ಧಾರವಾಡ ಯುವ ಬರಹಗಾರರ ಒಕ್ಕೂಟದ ಲೇಖನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನನ್ನ ಲೇಖನ

ವಿಷಯ.. ಬದುಕಿನಲ್ಲಿ ನಾ ಕಲಿತ ಪಾಠವಿ

ಬದುಕಿನಲ್ಲಿ ತುಂಬಾ ಕಷ್ಟ ಪಟ್ಟು.ಮೇಲೇರಿದವಳು ನಾನು.ನನ್ನ ಸ್ವಪ್ರಯತ್ನದಿಂದ ವಿದ್ಯೆ ಕಲಿತು  , ಕೆಲಸಕ್ಕೆ ಸೇರಿ, ನಿವೃತ್ತಿಯ ನಂತರ ಪ್ರವೃತ್ತಿಯಾಗಿ  ಬಿಡುವಿನ ವೇಳೆಯಲ್ಲಿ  ಬರವಣಿಗೆ ಹವ್ಯಾಸ ದಲ್ಲಿ ತೊಡಗಿದ್ದ, ನನ್ನ ಬಾಳಿನಲ್ಲಿ ಆಕೆಯ ಆಗಮನವಾದಾಗ ನಾನು ತುಂಬಾ ಖುಷಿ ಯಲ್ಲಿ ಇದ್ದೆ .ಸ್ನೇಹಿತರಿಲ್ಲದ ನಾನು ಆಕೆಯನ್ನು ತುಂಬಾ ನಂಬಿದೆ. ಮೊದಲಿನಿಂದ ಎಲ್ಲರನ್ನು ನಂಬುವ ಅಭ್ಯಾಸ ವಿದ್ದ ನಾನು ಆಕೆಯಲ್ಲಿ ಇಟ್ಟ ನಂಬಿಕೆಯ ಸೌಧ ಕಳಚಿ ಬಿತ್ತು .ನನ್ನ ಏಳ್ಗೆಯನ್ನು ಸಹಿಸದ ಆಕೆ ಇಲ್ಲ ಸಲ್ಲದ  ವಿಷಯವನ್ನು ಹರಡಿ ಚುಚ್ಚು ಮಾತಿನಿಂದ  ನೋಯಿಸಿದ್ದು ನನಗೆ ಅತೀವ ಬೇಸರವಾಯಿತು. ನನ್ನ ಆತ್ಮೀಯರೆಂದು ತಿಳಿದು ನನ್ನೆಲ್ಲಾ ಭಾವನೆಗಳನ್ನು ಹಂಚಿಕೊಂಡ ನಾನು ಅವರಿಂದಾದ ನಂಬಿಕೆ ದ್ರೋಹದಿಂದಾಗಿ ಯಾರನ್ನು ಅತಿಯಾಗಿ ನಂಬಬಾರದು  ಈ ಜಗತ್ತಿನಲ್ಲಿ ನಂಬಿಕೆ  ವಿಶ್ವಾಸಕ್ಕೆ ಯೋಗ್ಯರಾದವರು ಯಾರು ಇಲ್ಲ .,ನಮ್ಮ ಸ್ವಂತ ವಿಷಯಗಳನ್ನು ಯಾರಲ್ಲೂ ಹೇಳಬಾರದು ಎನ್ನುವ ಪಾಠವನ್ನು ಕಲಿತೆ

 ಶ್ರೀಮತಿ.ಪಂಕಜಾ.ಕೆ. ಮುಡಿಪು
 ದಕ್ಷಿಣ ಕನ್ನಡ
[5/12/2020, 7:55 PM] pankajarambhat: ತುಳು ಕನ್ನಡ ಸಾಹಿತ್ಯ ಸಂಗಮ ಸ್ಪರ್ಧೆಗಾಗಿ

 ವಿಷಯ..ಹಳ್ಳಿಯ ಸೊಗಡು

           ನಮ್ಮ ಹಳ್ಳಿ

ಹಳ್ಳಿಯ ಮನೆಯಲಿ ಹಂಚಿನ ಮಾಡಲಿ
ಗುಬ್ಬಿಯ ಗೂಡು ಇರುತ್ತಿತ್ತು
ಚಿಲಿಪಿಲಿ ಗುಟ್ಟುತ ಕಾಳನು ಹೆಕ್ಕುತ 
ಮರಿಗಳಿಗೆ ಗುಟುಕನು ಕೊಡುತಿತ್ತು

ಜುಳು ಜುಳು ಹರಿಯುವ ಬತ್ತದ ತೊರೆಯದು
ವರುಷವು ಪೂರ್ತಿ ಇರುತ್ತಿತ್ತು
ಹಸಿರಿನ ಹೊಲಗಳು ತೆಂಗಿನ ತೋಟವು
ಬೀಸುವ ಗಾಳಿಗೆ  ನಲಿದಿತ್ತು

ಹಟ್ಟಿಯ ತುಂಬಾ ದನ ಕರುಗಳು ತುಂಬಿ
ಹಾಲಿನ ಹೊಳೆಯೇ ಹರಿಯುತ್ತಿತ್ತು
ಅಂಬಾ ಎನ್ನುವ ಅವುಗಳ ಕೂಗು
ಕಿವಿಗಳಿಗೆ ಇಂಪನು  ಕೊಡುತಿತ್ತು

ಗಾಳಿಗೆ ಬಾಗುವ ಗಿಡ ಮರಗಳ ಸೊಬಗು
ಮನಸಿಗೆ ಖುಷಿಯನು ಕೊಡುತಿತ್ತು
ಮರಗಳ ಎಡೆಯಲಿ ಹಾಡುವ ಹಕ್ಕಿಯ
ಗಾನವು ಮುದವನು ತರುತಿತ್ತು

ಹಸಿರಿನ ಸಿರಿಯಲಿ  ಅರಳಿದ ಸುಮಗಳು
ಗಂಧವ ಎಲ್ಲೆಡೆ ಹರಡುತಲಿ
ಬಾಗುತ ತೂಗುತ ನಲಿಯುವ ನೋಟವು
ಮನಕೆ ಸಂತಸ ಕೊಡುತಿತ್ತು

ಶ್ರೀಮತಿ.ಪಂಕಜಾ. ಕೆ. ಮುಡಿಪು
[12/12/2020, 9:25 PM] pankajarambhat: ತುಳು ಕನ್ನಡ ಕಾವ್ಯ ಸಂಗಮ
ಸ್ಪರ್ಧೆಗಾಗಿ ಹನಿಕವನ

ಭೂಮಿ
 ಅನ್ನ ಕೊಡುವಳು 
 ಭೂಮಿ ತಾಯಿ
 ಬನ್ನಕಳೆಯುವಳಾಕೆಯು
 ಹಸಿರು ಉಸಿರನು
 ಕೊಡುವ ಧಾತೆಯೂ
 ಉಳಿಸಿ ಬೆಳೆಸಿರಿ ಆಕೆಯ
 
ಸವಿ

ಮಾತಿನಲಿ ಸವಿಯಿರಲು
ಜೀವನವೊಂದು ಹೂಬನ
ನೋವು ನಲಿವಿಗೆ ಹೆಗಲು ಇರಲು
ಬಾಳು ಆಗುವುದು ನಂದನ
ಮನಶೀನಾಳದ ಬೇಸರಗಳನು
ಕಳೆದು ತುಂಬುವುದು ಸವಿಯನು

ಶ್ರೀಮತಿ.ಪಂಕಜಾ.ಕೆ. ಮುಡಿಪು
[14/12/2020, 7:27 PM] pankajarambhat: ಅಕ್ಷರದೀಪ ಸಾಹಿತ್ಯ ವೇದಿಕೆ 

ಚಿತ್ರಕ್ಕೊಂದು ಕವನ ಸ್ಪರ್ಧೆಗಾಗಿ

       ಅಂತರಂಗ....ಬಹಿರಂಗ

ನೂರಾರು ಚಿಂತೆಗಳಿಂದ  ನರಳುತಿದೆ ಮನವು
ಸ್ನೇಹವೆಂದು ಕೈ ಚಾಚಿದರೆ ಕುಟುಕಿದೆ ಹಾವು
ನಗುಮುಖದ ಹಿಂದೆ ಎದೆ ತುಂಬಿದ ನೋವು
ಎಲ್ಲವನು ಸಹಿಸಿ ಬಾಳಿದರೆ ಬಾಳು ಸಿಹಿಮಾವು

ಸಾಗರದ ಅಲೆಯಂತೆ ಎದ್ದಿದೆ  ಭಾವನೆಗಳು
ತಣಿಸಲಾರದೆ ಪೀಡಿಸುತಿದೆ ಹಳೆ ನೆನಪುಗಳು
ಭಾವನೆಗಳ  ಭಾರಕ್ಕೆ ಜಗ್ಗುತಿದೆ ಮನಸುಗಳು
ನಾಟಕವಾಡುತ ವಂಚಿಸುತಿಯುವ ದ್ರೋಹಿಗಳು

ಪ್ರೀತಿ ವಿಶ್ವಾಸದ ಬೆಲೆ ತಿಳಿಯದ  ಜನರಿರುವರು
ಮನದಾಳವ  ಕೆದಕಿ ನಗುವ ಹುಚ್ಚು ಮನದವರು ಮುಖವಾಡ ಧರಿಸಿ ಬದುಕುತಿರುವವರು
ನಂಬಿಕೆಗೆ ದ್ರೋಹ ಬಗೆಯುವ ಘಾತುಕರು

ಜಗದಲಿ ಮೋಸ ಕಪಟ ವಂಚನೆಗಳೇ ತುಂಬಿದೆ 
ಇದನೆಲ್ಲಾ ಕಂಡು ಮನಸು ರೋಸಿ ಹೋಗಿದೆ
ನಂಬಿಕೆಯ ನೆಲೆಗಟ್ಟು ಕುಸಿದುಹೋಗಿದೆ
ಮನುಜರ ದ್ವಿಮುಖ ನೀತಿಯ ಕಂಡು ನೊಂದಿದೆ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.
ಕುರ್ನಾಡು.ದ.ಕ.

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.