Skip to main content

ಅಕ್ಷರ ದೀಪ 12

[9/11/2020, 12:47 PM] pankajarambhat: ಕವಿಗಳ ಜತೆಗೊಂದು ಸವಿ ಮಾತು ಬಳಗದ  ಸ್ಪರ್ಧೆಯಲ್ಲಿ ಅತ್ಯುತ್ತಮವೆಂದು ಆಯ್ಕೆಯಾದ ನನ್ನ ಸ್ವರಚಿತ
ಚಿತ್ರಕ್ಕೊಂದು ಕವನ

ಪ್ರಕೃತಿ ಸಿರಿ
 
ಹಸಿರುಡುಗೆಯ ಉಟ್ಟು  ನಲಿದಿದೆ
ಜೋಳ ತುಂಬಿದ ಗದ್ದೆಯು
ಅನ್ನದಾತನು ಪಟ್ಟ ಶ್ರಮಕೆ ಫಲವ
ಕೊಡುತಲಿರುವಳು ಭೂತಾಯಿಯು

ಒಣಗಿ ನಿಂತ ಜೋಳದ ತೆನೆಯಲಿ
ಕೆಂಪು ಕೂದಲಂದದಿ ಹರಡಿದೆ
ಹಸಿರುಡುಗೆಯ  ಧರಿಸಿ ನಿಂತಿಹ
ಬಿಚ್ಚು ಕೆಂಪು ಕೂದಲ  ಸುಂದರಿ

ಮೈಯ ಮರೆಸುವ ಪ್ರಕೃತಿ ಸೊಬಗದು
ಕಣ್ಣು ಮನವನು ಸೆಳೆದಿದೆ
 ಸೃಷ್ಟಿ  ಸಿರಿಯ ಅಂದ ಕಾಣುತ
 ಮೈ ಮನವು ಮರೆದಿದೆ
 
 ಮುಖವ ತಿರುಗಿಸಿ ನಿಂತ ಚೆಲುವೆಯ
 ತೆರದಿ ಕಾಣುವ ಸೊಬಗದು
 ರಸಿಕ ಮನವನು ಸೆಳೆದು ಕೊಳ್ಳುತ
 ಬಾಗಿ ನಿಂತಿದೆ ಇಳೆಯಲಿ
 
ಬೀಸುತಿರುವ ತಂಪುಗಾಳಿಗೆ
ತೂಗುತ್ತಿರುವುದು ತೆನೆಗಳು
ಕಣ್ಣು ಸೆಳೆಯುವ ಸೊಬಗು ತುಂಬಿದ
ನೋಟ ಕಣ್ಣನು ಸೆಳೆದಿದೆ

ಪಂಕಜಾ.ಕೆ.. ಮುಡಿಪು
[10/11/2020, 1:35 PM] pankajarambhat: ಅಂತರ್ಜಾಲ ಆಧಾರಿತ   ಕವನ ರಚನೆ ಮತ್ತು ವಾಚನ ಸ್ಪರ್ಧೆಯಲ್ಲಿ ಟಾಪ್.3 .ಪುಸ್ತಕ ಬಹುಮಾನಿತ ನನ್ನ ಕವನ
 
ನಾಡ ಭಕ್ತಿ ಕವಿತೆ

  ಶೀರ್ಷಿಕೆ..ನಮ್ಮ  ಹೆಮ್ಮೆಯ ಕರುನಾಡು

ಕನ್ನಡ ನಾಡಿದು ಗಂಧದ ಬೀಡು
ಋಷಿ ಮುನಿಗಳು ಜನಿಸಿದ ನಾಡು 
ಕವಿಕೋಗಿಲೆಗಳು ಹಾಡಿದ ನಾಡು
ಇತಿಹಾಸದ ಪುಟಗಳಲಿ ಮಿಂಚಿದ ಬೀಡು

ಪಂಪ ರನ್ನರು ಹಾಡಿ ಹೊಗಳಿದ ನಾಡು
ಕವಿ ಕಬ್ಬಿಗರು ಜನಿಸಿದ ನಾಡು
ಸಂಗೀತ ಸಾಹಿತ್ಯ ಕಲೆಗಳ ಬೀಡು
ಶಿಲ್ಪ ಕಲೆಗಳ ವೈಭವ ಸಾರುವ ಬೀಡು 

ಹಸಿರು ಬೆಟ್ಟ ಗುಡ್ಡಗಳಿಂದ ತುಂಬಿದ ನಾಡು
ತೆಂಗು  ಕಂಗುಗಳು ಬೆಳೆಯುವ ನಾಡು
ವೀರ  ನಾರಿಯರು ಆಳಿದ ನಾಡು
ಕೋಟೆ ಕೊತ್ತಲಗಳು  ತುಂಬಿದ ಬೀಡು

ಕಲೆ ಸಾಹಿತ್ಯ ಸಂಸ್ಕೃತಿ ಇತಿಹಾಸದ ತವರು
ಕಾವೇರಿ ಕೃಷ್ಣೆಪುಣ್ಯ ನದಿಗಳ ತವರೂರು
ಐತಿಹಾಸಿಕ  ಭವ್ಯ ಪರಂಪರೆಯ ನಾಡು
ಪ್ರವಾಸಿಗಳ ಸ್ವರ್ಗ ನಮ್ಮ ಹೆಮ್ಮೆಯ ಕರುನಾಡು

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್.
[13/11/2020, 8:09 AM] pankajarambhat: ಖಿದ್ಮಾ ಪೌಂಡೇಶನ್ ಕರ್ನಾಟಕ
ಸ್ಪರ್ಧೆಯಲ್ಲಿ  ಮೆಚ್ಚುಗೆ  ಪಡೆದ ನನ್ನ ಸ್ವರಚಿತ  ನ್ಯಾನೊ ಕಥೆ

ವಿಷಯ.. ..ಅಪ್ಪ

ಅಪ್ಪನ ತ್ಯಾಗ

ಇದ್ದೊಬ್ಬ ಮಗನನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು , ಚೆನ್ನಾಗಿ ವಿದ್ಯೆ ಕಲಿಸಿ ಒಳ್ಳೆಯ ವ್ಯಕ್ತಿಯಾಗುವಂತೆ ಮಾಡಬೇಕೆನ್ನುವ ಗುರಿ ಹೊಂದಿದ್ದ ರಾಮಪ್ಪ ,ರಾತ್ರಿ  ಹಗಲೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ.ತಂದೆಯ ಕಷ್ಟದ ಬಗ್ಗೆ ಅರಿವಿಲ್ಲದ ಮಗ ದಿನಕ್ಕೊಂದು ಬೇಡಿಕೆಯನ್ನು ಇಡುತ್ತಿದ್ದ.ಒಂದು ದಿನ ತನ್ನ ಗೆಳೆಯರ ಜತೆ ಹೋಟೆಲಿನಲ್ಲಿ ತಿಂಡಿ ತಿನ್ನುತ್ತಿದ್ದಾಗ ಅಪ್ಪ ಅಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದುದು ಕಂಡು ಆತನ ಮನಸ್ಸು ಮಿಡಿಯಿತು. ತನ್ನ ಅಪ್ಪ ತನಗಾಗಿ ಎಷ್ಟು ಕಷ್ಟ ಪಡುತ್ತಿದ್ದಾರೆ ಎನ್ನುವುದು ತಿಳಿದ ಮೇಲೆ ಪವನ್ ಮತ್ತೆಂದು  ತನ್ನ ಅಪ್ಪನಲ್ಲಿಯಾವದೇ ಬೇಡಿಕೆಯನ್ನು ಇಡಲಿಲ್ಲ 

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್
[15/11/2020, 8:05 PM] pankajarambhat: ಅಕ್ಷರ ದೀಪ ಸಾಹಿತ್ಯ ವೇದಿಕೆ  ಧಾರವಾಡ  ಸ್ಪರ್ಧೆಗಾಗಿ
ಕವನ

ವಿಷಯ .ಅಕ್ಷರ ದೀಪ

ಅಕ್ಷರ ಕ್ರಾಂತಿ

ಅಕ್ಷರ ದೀಪದ ಸಾಲುಗಳಲಿ
ಜ್ಞಾನದ ಜ್ಯೋತಿಯು ಬೆಳಗುತಿದೆ
ಬಾಳಿನ ಅಂದಾಕಾರವ ಸರಿಸುತ
ಬಾಳಿಗೆ ಬೆಳಕನು ತುಂಬುತಿದೆ

ತಮವನು ಕಳೆದು ಬಾಳನು ಬೆಳಗಲು
ಅಕ್ಷರ ದೀಪವ  ಉರಿಸೋಣ
ಅಕ್ಷರವೆಂಬ ಹಣತೆಯ ಬೆಳಗಿ
ಜ್ಞಾನವ ಎಲ್ಲೆಡೆ ಹರಡೋಣ

ಮನೆ ಮನಗಳ ಕಳೆಯನು ತೊಳೆದು
ಪ್ರೀತಿ  ವಿಶ್ವಾಸವ ತುಂಬೋಣ
ಸಂಸ್ಕಾರ ಪರಂಪರೆ ಸಾರುತ ಜಗದಲಿ
ಸುಜ್ಞಾನದ ಜ್ಯೋತಿಯ ಉರಿಸೋಣ

ಅಕ್ಷರವೆನ್ನುವ ಮಾಂತ್ರಿಕನಿದ್ದರೆ
ಮನದಲಿ ಜ್ಞಾನವು ತುಂಬುವುದು
ಅಕ್ಷರ ದೀಪದ ಬಳಗದಲನುದಿನ
ಅಕ್ಷರ ಕ್ರಾಂತಿಯ ಮಾಡೋಣ

ಪಂಕಜಾ.ಕೆ. ಮುಡಿಪು
[23/11/2020, 7:39 PM] pankajarambhat: ಅಕ್ಷರ ದೀಪ ಸಾಹಿತ್ಯ ವೇದಿಕೆ ಧಾರವಾಡ ಚಿತ್ರಕವನ ಸ್ಪರ್ಧೆಗಾಗಿ

ಅಭ್ಯಂಜನದ ಮಜ

ಮುದ್ದು ಮಗುವನು ಹಿಡಿದು ತಾಯಿಯು
ನೀರಧಾರೆಯ ಸುರಿಸುತ
ಮಗುವಿನಾನಂದವನು ನೋಡುತ
ಖುಷಿಯ ಪಡುವಳು ಮನದಲಿ

 ಹಿತ್ತಲಲ್ಲಿನ ಹಸಿರು ಬಯಲೇ
 ಸ್ನಾನ ಮಾಡುವ ತಾಣವು
 ಪ್ರಕೃತಿಯೊಡಲಲಿ ನಲಿಯುತಿರಲು
 ಮನಕೆ ಮುದವನು ಕೊಡುವುದು
 
ತಲೆಗೆ ಬೀಳಲು ಜಲದ ಧಾರೆಯು
ಎನಿತು ಹರುಷವು ಮಗುವಲಿ
ಖುಷಿಯ ಪಡುತಲಿ ಕುಣಿಯುತಿರುವುದು
ಅಮ್ಮನೊಲವನು ಸವಿಯುತ

ಮುಖದ ತುಂಬಾ ನಗುವು ತುಂಬಿದೆ
ಅಭ್ಯಂಜನದ ಖುಷಿಯಲಿ
ಚಳಿಯ  ದಿನದಲಿ  ಎಣ್ಣೆ ಸ್ನಾನವು
ಮೈಗೆ ಹಿತವನು ಕೊಡುವುದು

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು  ದ.ಕ.574153
[30/11/2020, 8:32 PM] pankajarambhat: ಅಕ್ಷರ ದೀಪ ಸಾಹಿತ್ಯವೇದಿಕೆ  ಧಾರವಾಡ  ರಾಜ್ಯಮಟ್ಟದ ಕವನ ಸ್ಪರ್ಧೆಗಾಗಿ

ವಿಷಯ....ಪ್ರೇಮವು ವರವೋ ಶಾಪವೋ

     ಪ್ರೀತಿ    ಪ್ರೇಮ

ಪ್ರೇಮವೆನ್ನುವ ಮಧುರ ರಸವದು
ಸವಿದ ಹೃದಯವು ಧನ್ಯವು
ಪ್ರೀತಿಸುವವರಿಗೆ ವರವಾಗುತ 
ಮುದ ನೀಡುವುದು ಪ್ರೇಮವು

ಶುದ್ಧ ಪ್ರೇಮವು ಮನದಲಿರಲು
ಗೆದ್ದು ಬರಬಹುದು ಜಗವನು
ಅರಿತು ಬಾಳುವ ಬಾಳಲಿರುವುದು
ಪ್ರೇಮವೆಂಬುವ ಹಂದರ

ಪ್ರೇಮವೆನ್ನುತ ನಾಟಕವಾಡುತ
ಮೋಸ ಗೈವರು ಕೆಲವರು
ಬಿದ್ದು ಪ್ರೇಮದ ಆಕರ್ಷಣೆಯಲಿ
ನಲುಗಬಾರದು ಜೀವವು

ಮುರಿದು ಬೀಳುವ  ಸಂಬಂಧಗಳು
ಕೂಡಿಕೊಳ್ಳುವುದು ಪ್ರೇಮದಿ
ಅರಿತು ಬಾಳಿದರದುವೆ ಸ್ವರ್ಗವು
ಸಿಹಿಜೇನಿನ ಹೂರಣ

ಶುದ್ಧ ಪ್ರೇಮವು ವರವಾದರೆ
ಸ್ವಾರ್ಥ ತುಂಬಿದ ಪ್ರೇಮ ಶಾಪವು
ಅರಿಯಬೇಕಿದೆ ಅಂತರಂಗವ
ಪ್ರೇಮದ ಹೊಳೆಯಲಿ ತೇಲಲು

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್
ಕುರ್ನಾಡು
[21/12/2020, 7:56 PM] pankajarambhat: ಅಕ್ಷರ ದೀಪ ಸಾಹಿತ್ಯ ವೇದಿಕೆ ಧಾರವಾಡ ಲೇಖನ ಸ್ಪರ್ಧೆಗಾಗಿ

ವಿಷಯ.. ಹೊಸವರುಷದ ಆಚರಣೆಯ ಗುಣಾವಾಗುಣಗಳು

ಹೊಸವರ್ಷದಾಚಾರಣೆಯು  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವಪೂರ್ಣವಾಗಿದೆ.  ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆಗಳಾದ ಹಿರಿಯರನ್ನು ಗೌರವಿಸಿ ಅವರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಬೇಡುವುದು, ಹೊಸ ಬಟ್ಟೆಯನ್ನು ಧರಿಸಿ,  ದೇವರ ಪೂಜೆ  ಧ್ಯಾನ  ಮಾಡಿ ಹೊಸವರ್ಷವು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುವುದು ನಮ್ಮ ಸಂಪ್ರದಾಯ. ಅನಾದಿ ಕಾಲದಿಂದಲೂ ಯುಗಾದಿಯನ್ನು ನಮ್ಮ ಹಿಂದಿನವರು ಹೊಸವರ್ಷವೆಂದು ಆಚರಿಸುತ್ತಿದ್ದರು. ಹಿಂದೂ ಧರ್ಮದ ಪ್ರಕಾರ ಯುಗಾದಿ ಯು ಹೊಸವರ್ಷದ ಪ್ರಾರಂಭದ ದಿನ ಯುಗಾದಿ ಎಂದರೆ ಸೃಷ್ಟಿಯ ಪ್ರಾರಂಭದ ದಿನ. ಯುಗದ ಆರಂಭದ ದಿನ. ಈ ದಿನ ಪ್ರಕೃತಿ ತನ್ನ ಹಳೆಯ ಕೊಳೆಗಳನ್ನು ಕಳೆದು  ಹೊಸ ಮದುಮಗಳಂತೆ ಹೂವು ಹಣ್ಣುಗಳಿಂದ ತುಂಬಿ ಕಂಗೊಳಿಸುತ್ತಿರುತ್ತಾಳೆ. ಹೊಸವರ್ಷದ ಆಗಮನವನ್ನು ಪ್ರಕೃತಿಯ ಜತೆ ಸಂಭ್ರಮಿಸುವುದು ನಿಜಕ್ಕೂ ಅರ್ಥಪೂರ್ಣವಾಗಿದೆ . ಯುಗಾದಿ ಪ್ರಾರಂಭವಾಗುವುದು ವಸಂತ ಋತುವಿನಲ್ಲಿ , ಸಮಶೀತೋಷ್ಣ ,ಉತ್ಸ್ಸಾಹ ದಾಯಕ  ಮತ್ತು ಆಹ್ಲಾದಕರ, ವಾತಾವರಣ ವಿರುವ ವಸಂತಮಾಸದಲ್ಲಿ ಇಡೀ ಪ್ರಕೃತಿ ಲವಲವಿಕೆಯಿಂದ ಕೂಡಿರುತ್ತದೆ.   ಹೊಸ ವರ್ಷ ವೆಂದರೆ ಹಳತು ಕಳೆದು ಹೊಸತನ್ನು ಬರಮಾಡಿಕೊಳ್ಳುವುದು ಆದರೆ ಜನವರಿ ಒಂದರಂದು  .ಪ್ರಕೃತಿಯಲ್ಲಿ ಯಾವುದೇ ಬಡಲಾವಣೆಯಿರುವುದಿಲ್ಲ ಕೇವಲ ಕ್ಯಾಲೆಂಡರ್ ಬದಲಾವಣೆ ಮಾತ್ರವಾಗಿದ್ದು .ಇತ್ತೀಚೆಗೆ ಡಿಸೆಂಬರ 31 ರ ಮಧ್ಯರಾತ್ರಿಯಂದು ಹೊಸವರ್ಷದಾಚಾರಣೆ ಎನ್ನುವ ನೆಪ ಒಡ್ಡಿ ಕುಡಿತ ಕುಣಿತ ಅಜ್ಜನ ಪ್ರತಿಕೃತಿ ಮಾಡಿ ಅದನ್ನು ಸುಡುವುದು.ಪರಿಸರ ಮಾಲಿನ್ಯಯುಕ್ತ ಪಟಾಕಿಗಳನ್ನು ಉರಿಸಿ ಸಂಭ್ರಮಿಸುವುದು  ಕಂಡು ಬರುತ್ತಿದೆ  ಈ ದಿನ ಹೊಸವರ್ಷದಾಚಾರಣೆಯು ವೈಜ್ಞಾನಿಕವಾಗಿಲ್ಲ. ಇದು ಕೇವಲ ಪಾಶ್ಯಾತ್ಯರ ಅಂಧಾನುಕರಣೆಯಾಗಿದ್ದು,  ನಮ್ಮ  ಸಂಸ್ಕೃತಿಗೆ ಮಾರಕವಾಗಿದೆ. ಒಳ್ಳೆಯ ವಿಚಾರಗಳು ಎಲ್ಲಿದ್ದರೂ ಅದು ಬರಲಿ  ಎನ್ನುವ ಸಂಸ್ಕೃತಿ  ನಮ್ಮದು. ಆದರೆ ಅದು ತಂಗಾಳಿಯಾಗಿ ಬರಬೇಕೆ ಹೊರತು ಬಿರುಗಾಳಿಯಾಗಿ ಮನೆಯನ್ನು  ಹಾರಿಸದಂತೆ ಜಾಗ್ರತೆಯಿರಬೇಕು.  ಕ್ಯಾಲೆಂಡರ್ ಬದಲಾವಣೆಯ ವರ್ಷವನ್ನು   ಹೊಸವರ್ಷ ಎಂದು ಆಚರಿಸುವ ಸಂಪ್ರದಾಯ  ಹೆಚ್ಚಿನ ಎಲ್ಲಾ ದೇಶಗಳಲ್ಲೂ ಕಂಡು ಬರುತ್ತಿದೆ . .ಆದರೆ  ಭವ್ಯ ಪರಂಪರೆ ಹೊಂದಿದ ಋಷಿ ಮುನಿಗಳು ಬಾಳಿ ಬದುಕಿದ ನಾಡಾದ ಭಾರತವು ಹಿಂದೂ ದೇಶವಾಗಿದ್ದು ಇದರ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ ಆದ್ದರಿಂದ ನಮ್ಮ ಸಂಸ್ಕೃತಿಗೆ ಮಾರಕವಾದ ಡಿಸೆಂಬರ್  31 ರ ಮದ್ಯರಾತ್ರಿಯನ್ನು ಹೊಸವರ್ಷವರಂದು ಆಚರಿಸಿ  ಕುಡಿತ ಕುಣಿತದಲ್ಲಿ ಮೈ ಮರೆಯುವ ಪಾಶ್ಯಾತ್ಯ ಸಂಸ್ಕೃತಿಯನ್ನು ನಮ್ಮ ಯುವ ಜನಾಂಗ ಕೈ ಬಿಟ್ಟು ಭಾರತೀಯ ಸಂಸ್ಕೃತಿ ಸಾರುವ ಯುಗಾದಿ ಹಬ್ಬವನ್ನು ಹೊಸವರ್ಷದಾರಂಭವೆಂದುಆಚರಿಸುವಂತಾಗಬೇಕು   ನಮ್ಮ ಸಂಸ್ಕೃತಿಯ  ವೈಭವ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸ ಬೇಕಾದುದು ನಮ್ಮನಿಮ್ಮೆಲ್ಲರ  ಹೊಣೆ ಯಾಗಿದೆ  

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.ಕುರ್ನಾಡು.ದ.ಕ. 574153
[05/01, 8:27 PM] pankajarambhat: ಅಕ್ಷರದೀಪ ಸಾಹಿತ್ಯವೇದಿಕೆಯ ಚಿತ್ರಕವನ ಸ್ಪರ್ಧೆಗಾಗಿ

      ಬಡತನ

ಸುರಿದ ಮಳೆಯು ಕೊಚ್ಚಿಹಾಕಿತು
ಇದ್ದ ಒಂದೇ ಸೂರನು
ಬಾಳ ಬಟ್ಟೆಯು ಹರಿದು ಹೋಯಿತು
ಬದುಕು ಬಯಲಿಗೆ ಬಿದ್ದಿತು

ಮೋಡ ತುಂಬಿದ ಬಾನಿನಂತೆಯೇ
ಮನದಿ ತುಂಬಿದೆ ಚಿಂತೆಯು
ಇರಲು ಒಂದೂ  ಸೂರು ಇಲ್ಲದೆ
ವಲಸೆಹಕ್ಕಿಯ ಜೀವನ

ಮುದ್ದುಕಂದನ ಹಸಿವೆ ನೀಗಲು
ಬೇಯಿಸಬೇಕಿದೆ ಕೂಳನು
ನಿಂತ ಕಡೆಯೇ ಒಲೆಯ  ಊದುತ
ಶ್ರಮಿಸುತ್ತಿರುವಳು ಮಾತೆಯು

ಬಯಲಿನಲ್ಲೇ ಕುಳಿತು ಮಾಡುವ
ಅಡಿಗೆ ತಿಂಡಿಯ ಹೂರಣ
ಇಂದು ಇಲ್ಲಿ ನಾಳೆ ಎಲ್ಲೋ
ಬದುಕು ಒಂದು ಚಾರಣ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಶ್ರೀ ಗಣೇಶ ಕೃಪಾ .ಮುಡಿಪು.ಕುರ್ನಾಡು.ದ.ಕ.574153
ಮೊಬೈಲ್ ನಂಬರ್.9964659620
[11/01, 8:04 PM] pankajarambhat: ಅಕ್ಷರ ದೀಪ ಸಾಹಿತ್ಯವೇದಿಕೆ  ಧಾರವಾಡ
ಕಿರುಲೇಖನ ಸ್ಪರ್ಧೆಗಾಗಿ

ವಿಷಯ   ಇಂದಿನ ಯುವ ಜನತೆ

ಇಂದಿನ ಯುವಕರೇ ಮುಂದಿನ ದೇಶದ ನಿರ್ಮಾಣಕರ್ತರು ಆಗಿದ್ದಾರೆ.ಆಧುನಿಕತೆಗೆ ಮಾರುಹೋದ ಇಂದಿನ ಯುವ ಜನತೆ ದೇಶದ ಭವಿಷ್ಯದ ಬಗ್ಗೆಯಾಗಲಿ, ತಮ್ಮ ಭವಿಷ್ಯದ ಬಗ್ಗೆಯಾಗಲೀ, ಚಿಂತಿಸದೆ  ಮೊಬೈಲ್ ಎಂಬ ಚಿಕ್ಕ ಸಾಧನದ ಮಾಯಾಜಾಲದಲ್ಲಿ ಬಿದ್ದು, ಅದರ ಪರದೆಯ ಮೇಲೆ ದೃಷ್ಟಿ ನೆಟ್ಟು, ಕೈಗಳನ್ನು ಅದರಲ್ಲಿ ಉಜ್ಜುತ್ತಾ, ತಲೆತಗ್ಗಿಸಿ  ಜಗತ್ತನ್ನೇ ಮರೆತು ಕುಳಿತಿದ್ದಾರೆ.
ಸ್ನೇಹಿತರು ಹತ್ತಿರವಿದ್ದರೂ ಮಾತುಕತೆಯಾಡದೆ ತಮ್ಮದೇ ಲೋಕದಲ್ಲಿ ಮೈಮರೆತು ತಮ್ಮ ತಮ್ಮ ಕೈಗಳಲ್ಲಿರುವ  ಮೊಬೈಲ್ ನತ್ತವೇ ದೃಷ್ಟಿನೆಟ್ಟು,ತಮ್ಮ ಅಮೂಲ್ಯ ಯೌವ್ವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.ಪುಸ್ತಕವನ್ನು ಓದು ಅದು ನಿನ್ನನ್ನು ತಲೆ ಎತ್ತಿ ತಿರುಗುವಂತೆ ಮಾಡುತ್ತದೆ ಎಂದು ಒಂದು ನಾಣ್ನುಡಿ ಇದೆ. ಅದಕ್ಕೊಂದು ಉದಾಹರಣೆ ಸ್ವಾಮಿ ವಿವೇಕಾನಂದರು. ದೇಶವಿದೇಶದಲ್ಲಿ  ಭಾರತ ಸಂಸ್ಕೃತಿಯನ್ನು ಹಬ್ಬಿಸಿ   ಯುವಕರ ಎದೆಯಲ್ಲಿ ಕ್ರಾಂತಿ ಕಿಡಿ ಹಚ್ಚಿದ ವೀರ ಸನ್ಯಾಸಿ ಇವರ ಜೀವನವನ್ನು  ಆದರ್ಶವಾಗಿಟ್ಟುಕೊಳ್ಳಬೇಕಾದ ಯುವ ಜನತೆ  ಇಂದು ಮನೆಯಲ್ಲೇ ತಂದೆ ತಾಯಿಯರು ನೆರೆಹೊರೆಯವರು ಸ್ನೇಹಿತರು ಬಂಧು ಬಳಗ ಎಲ್ಲರಿಂದ ದೂರವಾಗಿ ಮೊಬೈಲ್  ಕೈಯಲ್ಲಿ ಹಿಡಿದು ಅದರಲ್ಲೇ ಮುಳುಗಿರುವುದು ಎಂತಹ ವಿಪರ್ಯಾಸ. ಇನ್ನಾದರೂ ಎಚ್ಚೆತ್ತು ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ತಿಳಿದುಕೊಂಡು ಮಾನವೀಯ ಗುಣಗಳಾದ ದಯೆ ಕರುಣೆ ಪ್ರೀತಿ ವಿಶ್ವಾಸಗಳನ್ನು  ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದುದು ಅತ್ಯಗತ್ಯ.ಯುವಶಕ್ತಿ ಪೋಲಾಗದಂತೆ ನಾವು ಜಾಗ್ರತೆವಹಿಸಬೇಕು 

ಶ್ರೀಮತಿ. ಪಂಕಜಾ.ಕೆ. ಮುಡಿಪು.
ನಿವೃತ್ತ  ಅಸಿಸ್ಟಂಟ್.ಪೋಸ್ಟ್ ಮಾಸ್ಟರ್ .ಕುರ್ನಾಡು ದ.ಕ.574153
[25/01, 11:05 PM] ಅಕ್ಷರದೀಪ ಧಾರವಾಡ: ಅಕ್ಷರದೀಪ ಸಾಹಿತ್ಯವೇದಿಕೆ  ಧಾರವಾಡ ದ ಲೇಖನ ಸ್ಪರ್ಧೆಗಾಗಿ
ವಿಷಯ. ಕರುನಾಡ ಪ್ರಕೃತಿ ಸೌಂದರ್ಯ

ಸುಂದರ ನಾಡು  ಕರುನಾಡು

ಕರುನಾಡು ಒಂದು ಪ್ರಕೃತಿ ರಮ್ಯಾ ಸುಂದರ ತಾಣ .ಇದರ ಪ್ರಕೃತಿ ಸೊಬಗನ್ನು ವರ್ಣಿಸಲು ಪದಗಳು ಸಾಲದು ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ರಮಣೀಯ ಪರ್ವತ ಶ್ರೇಣಿಗಳು ದಟ್ಟಹಸಿರಿನಿಂದ ಕೂಡಿದ ವನಸಿರಿ,ದುಮುಕುವ ಜಲಪಾತಗಳು , ಪ್ರಶಾಂತತೆಯಿಂದ ಕುಡಿದ ದಟ್ಟಾರಣ್ಯಗಳು, ಉತ್ಸಾಹ ಹೆಚ್ಚಿಸುವ ಕಡಲತೀರಗಳು, ಜುಳು ಜುಳು ಹರಿಯುವ  ಸುಂದರ ನದಿಗಳು, ಎಂತಹ ಅರಸಿಕನನ್ನಾದರೂ ,ಒಂದು ಕ್ಷಣ ಹಿಡಿದಿಡದೆ ಇರದು. ಚಾರಣಕ್ಕೆ ಯೋಗ್ಯವಾದ ಹಲವಾರು ತಾಣಗಳು .ಪ್ರಕೃತಿ ಸೌಂದರ್ಯ ಕ್ಕೆ ಪ್ರಖ್ಯಾತವಾಗಿರುವ ಕೊಡಗಿನ ಸೌಂದರ್ಯ ವನ್ನು ಎಷ್ಟು  ಬಣ್ಣಿಸಿದರೂ ಸಾಲದು  ಅಬ್ಬಿ ಜಲಪಾತ ನಿತ್ಯ ಹರಿದ್ವರ್ಣದ ಕೆರೆ ಕೊಳಗಳು, ಕಾವೇರಿ ನದಿ ಮನಸೂರೆಗೊಳ್ಳುವ ಕಾಡುಗಳು,  ಶಿವನಸಮುದ್ರದ ಲಿಂಗನಮಕ್ಕಿ ,ಭರಚುಕ್ಕಿ ಜಲಪಾತಗಳು ,ಜೋಗ ಜಲಪಾತ  ರಂಗನತಿಟ್ಟು ಪಕ್ಷಿಧಾಮ ಶಿವಮೊಗ್ಗದ ಆಗುಂಬೆಎಲ್ಲವೂ ಪ್ರವಾಸಿಗರನು ಕೈಬೀಸಿ ಕರೆಯುತ್ತದೆ  ಕರುನಾಡಿನ ಪ್ರಕೃತಿ ಸೌಂದರ್ಯ ಕ್ಕೆ ಸಾಟಿ ಯಾವದು ಇಲ್ಲ ಅದನ್ನು ವರ್ಣಿಸುವುದಕ್ಕಿಂತ ನೋಡಿ ಅನುಭವಿಸಬೇಕು ಇಂತಹ ಪ್ರಕೃತಿ ರಮ್ಯಾ ಸ್ಥಳ ನಮ್ಮ ಕರುನಾಡು ಎಂದು ನಾವು ಹೆಮ್ಮೆ ಪಡಬೇಕು ಮತ್ತು ಅದನ್ನು ಉಳಿಸಿ ಬೆಳೆಸಬೇಕು

ಶ್ರೀಮತಿ.ಪಂಕಜಾ.ಕೆ. ಮುಡಿಪು.ಕುರ್ನಾಡು.ದ.ಕ.
[01/02, 8:31 PM] pankajarambhat: ಧಾರವಾಡ ಯುವ ಬರಹಗಾರರ  ಸಾಹಿತ್ಯವೇದಿಕೆ
ಕವನ ಸ್ಪರ್ಧೆಗಾಗಿ
ವಿಷಯ. ದಾ..ರಾ.ಬೇಂದ್ರೆ

       ವರಕವಿ

ರಾಮಚಂದ್ರ ಅಂಬಿಕೆಯರ ಪುತ್ರ
ಕಾವ್ಯನಾಮ ಅಂಬಿಕಾತನಯದತ್ತ
ವೈದಿಕ ವೃತ್ತಿಯ ತುಂಬು ಕುಟುಂಬದಲಿ  ಜನಿಸಿದರು
ಕವಿ ಸಾಹಿತಿಗಳಿಗೆ ಸ್ಫೂರ್ತಿ ಚಿಲುಮೆಯಿವರು

ಕನ್ನಡದ  ಟಾಗೂರ್ ಎಂಬ ಬಿರುದಾಂಕಿತರು
ಜ್ಞಾನಪೀಠ ಪದ್ಮಶ್ರೀ  ಪ್ರಶಸ್ತಿ ಪುರಸ್ಕೃತರು
ಗೌರವ ಡಾಕ್ತರೇಟ್ ಪಡೆದ ಮಹನೀಯರು
ಕನ್ನಡದ ವರಕವಿ ಚಿರಕವಿ ಯಾಗಿರುವರು

ಮನಸು ತಟ್ಟುವ ಭಾವಗೀತೆಗಳನ್ನು ರಚಿಸಿದರು
ಜಾನಪದ ಸೊಗಡಿನ ಸಾಹಿತ್ಯ ರಚಿಸಿದರು
ಜನಮಾನಸದಲ್ಲಿ ಅಚ್ಚಳಿಯದೆ ನೆಲೆ ನಿಂತರು 
ಕನ್ನಡದ ಮನೆಮನೆಗಳಲ್ಲೂ ಕವನದ ನಾದ ಬೀರಿದರು

 ಅತ್ಯದ್ಭುತ ಅತ್ಯುತ್ತಮ ಸಾಹಿತ್ಯ ರತ್ನಇವರು
ಕನ್ನಡ ನಾಡಿನ ಹೆಮ್ಮೆಯ ಪುತ್ರರತ್ನರಿವರು
ಸಾಹಿತ್ಯ  ಕೃಷಿಯ ಮೇರು ಪರ್ವತಇವರು
ನಿಸ್ವಾರ್ಥ ಜೀವಿ ಧಾರವಾಡದ ಅಜ್ಜ ಇವರು

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಕುರ್ನಾಡು .ದ.ಕ.
[07/02, 5:48 PM] pankajarambhat: ಗುರುಕುಲಾ  ಕಲಾಪ್ರತಿಷ್ಠಾನ
ಜಿಲ್ಲಾ ಘಟಕ  ಚಾಮರಾಜನಗರ 
ನ್ಯಾನೊ ಕಥಾ ಸ್ಪರ್ಧೆಗಾಗಿ
ದತ್ತಪದ.....ಗೌರವ

        ಮುಖವಾಡ
        
ಅಭಿನವ್ ಒಬ್ಬ ಗೌರವಾನ್ವಿತ ವ್ಯಕ್ತಿ ಊರ ಪರವೂರ ಜನರೆಲ್ಲಾ ತುಂಬು ಗೌರವ ದಿಂದ ಅವನನ್ನು ನೋಡುತ್ತಿದ್ದರು.
ಬಡ ಬಗ್ಗರಿಗೆ,ಕಷ್ಟದಲ್ಲಿರುವವರಿಗೆ ತನ್ನಿಂದಾದಷ್ಟು ಸಹಾಯ ಮಾಡುವ ಗುಣವನ್ನು ಹೊಂದಿದ್ದ ಅವನ ಬಗ್ಗೆ ಎಲ್ಲರೂ ತುಂಬು ಅಭಿಮಾನ  ಗೌರವವನ್ನು ಇಟ್ಟಿದ್ದರು. ಆದರೆ ಪೊಲೀಸರ  ಧಾಳಿಯಲ್ಲಿ ಆತನ ಮನೆಯೇ ಮಾದಕ ಜಾಲದ ಕೇಂದ್ರವೆಂದು ಸಾಬೀತಾದಾಗ ಎಲ್ಲವೂ ತಲೆಕೆಳಗಾಯಿತು

ಶ್ರೀಮತಿ.ಪಂಕಜಾ ಕೆ..ಮುಡಿಪು.
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.
ಕುರ್ನಾಡು.ದ.ಕ.

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.